|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕೆನರಾ ಕಾಲೇಜಿನಲ್ಲಿ ಉದ್ಯೋಗ ಮೇಳ; 407 ಉದ್ಯೋಗಾಕಾಂಕ್ಷಿಗಳ ನೋಂದಣಿ

ಕೆನರಾ ಕಾಲೇಜಿನಲ್ಲಿ ಉದ್ಯೋಗ ಮೇಳ; 407 ಉದ್ಯೋಗಾಕಾಂಕ್ಷಿಗಳ ನೋಂದಣಿ


ಮಂಗಳೂರು: ಕೆನರಾ ಕಾಲೇಜು ಮಂಗಳೂರು, ಐಸೆಕ್ಟ್ ಲಿ., ಮಂಗಳೂರು, ಹಾಗೂ ಡಿಸೈಪಲ್ಸ್ ಇಂಡಿಯಾ, ಬೆಂಗಳೂರು ಸಹಯೋಗದೊಂದಿಗೆ ಹಮ್ಮಿಕೊಂಡ ಉದ್ಯೋಗ ಮೇಳವನ್ನು ಮೈಂಡ್ ಕ್ರಿಯೇಟಿವ್ ಸ್ಕೂಲ್ ಇದರ ನಿರ್ದೇಶಕ ವಿನೋದ್ ಕುಮಾರ್ ಕೆ ಅವರು ಉದ್ಘಾಟಿಸಿ ಮಾತನಾಡಿದರು.


ಉದ್ಯೋಗಾಕಾಂಕ್ಷಿಗಳು ಕೇವಲ ಅತ್ಯಲ್ಪಕಾಲ ಕೆಲಸ ಮಾಡಿ ಬಿಟ್ಟುಬಿಡುವ ಪ್ರಕ್ರಿಯೆ ಹೆಚ್ಚಿನ ಕಡೆ ಕಂಡು ಬರುತ್ತಿದೆ. ಒಂದು ಕಡೆ ಉದ್ಯೋಗ ಮಾಡಿ ಅನುಭವ ಪಡೆದು ಕಂಪೆನಿಗೆ ಕೊಡುಗೆಯನ್ನು ನೀಡಬೇಕು. ಆ ಮೂಲಕ ತಮ್ಮ ಭವಿಷ್ಯವನ್ನು ಕಟ್ಟಿ ಕೊಳ್ಳಬೇಕು.ಇಂತಹ ಮೇಳಗಳಲ್ಲಿ ಭಾಗವಹಿಸುವುದರಿಂದ ಬಹಳಷ್ಟು ಲಾಭವಿದೆ ಎಂದರು.


ಡಿಸೈಪಲ್ಸ್ ಇದರ ಸಹ ಸಂಸ್ಥಾಪಕ ಶಿವಪ್ರಸಾದ್ ಕೆ.ಎಂ. ಅತಿಥಿಯಾಗಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳಲ್ಲಿ ಜ್ಞಾನ ಇದೆ. ಆದರೆ ಕೌಶಲಗಳ ಕೊರತೆ ಕಾಣಿಸುತ್ತಿದೆ. ಈ ನಿಟ್ಟಿನಲ್ಲಿ ತಂತ್ರಜ್ಞಾನ, ವಿವಿಧ ಭಾಷೆಗಳ ಜ್ಞಾನದ ಜೊತೆಯಲ್ಲಿ ಬದ್ಧತೆಯ ಅಗತ್ಯವಿದೆ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕಾಲೇಜು ಸಂಚಾಲಕರಾದ ಸಿಎ ಎಂ. ಜಗನ್ನಾಥ ಕಾಮತ್ ಮಾತನಾಡಿ, ಇಂದು ಉದ್ಯೋಗಗಳು ತುಂಬಾ ಸೃಷ್ಟಿಯಾಗುತ್ತಾ ಇವೆ. ಆದರೆ  ಯುವಕರಲ್ಲಿ ಸಹನೆ ಮತ್ತು ಕೌಶಲ ವೃದ್ಧಿಯಾಗಬೇಕಾದ ಅಗತ್ಯವಿದೆ ಎಂದು ಹೇಳಿದರು. ಕಾಲೇಜು ಪ್ರಾಂಶುಪಾಲೆ ಡಾ. ಪ್ರೇಮಲತಾ ವಿ. ಪ್ರಾಸ್ತಾವಿಕವಾಗಿ ಮಾತನಾಡಿದರು.


ಸಂಯೋಜಕರಾದ ಹಾರ್ದಿಕ್ ಪಿ. ಚೌಹಾಣ್ ಅವರು ಸ್ವಾಗತಿಸಿ, ಸಹ ಸಂಯೋಜಕಿ ಶ್ರೀಮತಿ ಪುಷ್ಪಲತಾ ವಂದಿಸಿದರು. ವಿದ್ಯಾರ್ಥಿನಿ ಅಕ್ಷಯಾ ಪೈ ನಿರೂಪಿಸಿದರು. ಐಸೆಕ್ಟ್ ಲಿ. ಇದರ ವ್ಯವಸ್ಥಾಪಕ ಶ್ರೀ ಗುರುಪ್ರಸಾದ್, ವಿದ್ಯಾರ್ಥಿ ಸಂಯೋಜಕ ಹರ್ಷಿತ್ ಉಪಸ್ಥಿತರಿದ್ದರು.


ವಿನ್ ಮೇನ್, ಅಮೆಜಾನ್, ಯುನೈಟೆಡ್ ಟೊಯೋಟಾ, ಪ್ರಕಾಶ್ ಪ್ರೈ.ಲಿ.,ಮುತ್ತೂ ಟ್, ಜೋಯ್ ಆಲೂಕ್ಕಾಸ್ ಇಂಡಿಯಾ ಲಿ., ಎಕ್ಸಿಸ್ ಬ್ಯಾಂಕ್, ಗ್ಲೋಟೆಕ್ ಟೆಕ್ನಾಲಜೀಸ್ ಮೊದಲಾದ ಸುಮಾರು 25 ಕಂಪನಿಗಳು ಭಾಗವಹಿಸಿದ್ದು 407 ಉದ್ಯೋಗಾಕಾಂಕ್ಷಿಗಳು ನೋಂದಣಿ ಮಾಡಿದ್ದಾರೆ. 355 ಮಂದಿ ಶಾರ್ಟ್ ಲಿಸ್ಟ್ ನಲ್ಲಿ ಸೇರ್ಪಡೆಗೊಂಡಿದ್ದಾರೆ.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

0 Comments

Post a Comment

Post a Comment (0)

Previous Post Next Post