ಗೀತಾಂಜಲಿ ಕವಿ ರವೀಂದ್ರ ಟ್ಯಾಗೋರ್ ಬದುಕು ಸಾಹಿತ್ಯ ಉಪನ್ಯಾಸ ಕವಿಗೋಷ್ಠಿ

Upayuktha
0

ಚಿತ್ರಕಲಾ ಪ್ರದರ್ಶನ, ಹಾಡುಗಾರಿಕೆ ಕಾರ್ಯಕ್ರಮ



ಹಾಸನ: ಹಾಸನದಲ್ಲಿ ನಿರಂತರವಾಗಿ ನಡೆದುಕೊಂಡು ಬರುತ್ತಿರುವ ಮನೆ ಮನೆ ಕವಿಗೋಷ್ಠಿ ಸಾಹಿತ್ಯ ಸಂಘಟನೆಯ 317ನೇ ತಿಂಗಳ ಸಾಹಿತ್ಯ ಕಾರ್ಯಕ್ರಮವು ಖ್ಯಾತ ಚಿತ್ರ ಕಲಾವಿದರು, ಚಿತ್ರಕಲಾ ಶಿಕ್ಷಕರು  ಬಿ.ಎಸ್.ದೇಸಾಯಿ ಇವರ ಪ್ರಾಯೋಜನೆಯಲ್ಲಿ ದಿನಾಂಕ 5-5-2024ರ ಭಾನುವಾರ ಮದ್ಯಾಹ್ನ 3.00 ಗಂಟೆಗೆ  ಕಲಾಶ್ರೀ ಗ್ಯಾಲರಿ, ವಿವೇಕಾನಂದ 4ನೇ ಅಡ್ಡ ರಸ್ತೆ, ಡೆಂಟಲ್ ಕಾಲೇಜ್ ಹತ್ತಿರ, ವಿದ್ಯಾನಗರ ಇಲ್ಲಿ ನಡೆಯಲ್ಲಿದೆ. 


ಕವಯಿತ್ರಿ, ಸಹ ಶಿಕ್ಷಕಿ ನೀಲಾವತಿ ಸಿ.ಎನ್. ಕ್ರೆöಸ್ಟ್ ಸ್ಕೂಲ್, ಹಾಸನ ಇವರು ನೊಬೆಲ್ ಪ್ರಶಸ್ತಿ ವಿಜೇತ ಗೀತಾಂಜಲಿ ಕವಿ ರವೀಂದ್ರ ಟ್ಯಾಗೋರ್ ಬದುಕು ಮತ್ತು  ಅವರ ಸಾಹಿತ್ಯ ಕುರಿತ್ತಾಗಿ ಉಪನ್ಯಾಸ ನೀಡುವರು. ನಂತರ ಆಗಮಿತ ಕವಿಗಳಿಂದ ಕವಿಗೋಷ್ಠಿ, ಗಾಯಕ ಗಾಯಕಿಯರಿಂದ ಹಾಡುಗಾರಿಕೆ ಇದೇ ಸಂದರ್ಭ ಚಿತ್ಕಲಾ ಫೌಂಡೇಶನ್ ಹಾಸನ, ಬಣ್ಣದ ಮನೆ ಸಾಂಸ್ಕೃತಿಕ ವೇದಿಕೆ ಗದಗ ಇವರಿಂದ  ಏರ್ಪಡಿಸಲಾಗುವ ಮೈಸೂರು ಸಾಂಪ್ರದಾಯಿಕ ಶೈಲಿಯ  ಚಿತ್ರ ಕಲಾಕೃತಿಗಳ ಪ್ರದರ್ಶನ ಇರುವುದು. ಹೆಚ್ಚಿನ ಸಂಖೈಯಲ್ಲಿ ಸಾಹಿತ್ಯಾಭಿಮಾನಿಗಳು  ಕವಿಗಳು ಗಾಯಕರು ಚಿತ್ರ ಕಲಾವಿದರು ಭಾಗವಹಿಸಬೇಕೆಂದು ಮನೆ ಮನೆ ಕವಿಗೋಷ್ಠಿ ಸಂಚಾಲಕರು  ಸಾಹಿತಿ ಗೊರೂರು ಅನಂತರಾಜು ಕೋರಿದ್ದಾರೆ. 


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top