ಮಂಗಳೂರು: ನಿರಂತರ ಮೋಡಿ ಮತ್ತು ಪರಿಣಿತ ಕರಕುಶಲತೆಯ ಫಾರೆವರ್ ಮಾರ್ಕ್ ಸೆಟ್ಟಿಂಗ್ ವಿಶೇಷ ಸಂಗ್ರಹವನ್ನು ಡಿ ಬೀರ್ಸ್ ಫಾರೆವರ್‍ಮಾರ್ಕ್ ಯುಗಾದಿ ಹಬ್ಬದ ಸಂದರ್ಭದಲ್ಲಿ ಪ್ರಸ್ತುತಪಡಿಸಿದೆ.
ಸಂಗ್ರಹವು ಸಾಲಿಟೇರ್ ಪೆಂಡೆಂಟ್, ಸರ್ಕಲ್ ಸ್ಟಡ್ ಕಿವಿಯೋಲೆಗಳು, ಮೂರು ಡೈಮಂಡ್ಸ್ ಕಿವಿಯೋಲೆಗಳು, ಸಾಲಿಟೇರ್ ಪೇವ್ ರಿಂಗ್ ಮತ್ತು ಟೆನ್ನಿಸ್ ಬ್ರೇಸ್ಲೆಟ್ ಸೇರಿದಂತೆ ಐದು ಅದ್ಭುತ ಶೈಲಿಗಳನ್ನು ಹೊಂದಿದೆ. ಈ ವಿಶೇಷ ಸಂಗ್ರಹಗಳು ಮಂಗಳೂರು ಜ್ಯೋತಿ ಸರ್ಕಲ್ ಬಳಿ ಇರುವ ಮಳಿಗೆ ಸೇರಿದಂತೆ ದೇಶದ ಎಲ್ಲೆಡೆ ಡಿ ಬೀರ್ಸ್ ಮಳಿಗೆಗಳಲ್ಲಿ ಅಥವಾ ಆನ್‍ಲೈನ್‍ನಲ್ಲಿ www.forevermark.com ನಲ್ಲಿ ಲಭ್ಯ ಎಂದು ಡಿ ಬೀರ್ಸ್ ಫಾರೆವರ್‍ಮಾರ್ಕ್‍ನ ಉಪಾಧ್ಯಕ್ಷ ಅಮಿತ್ ಪ್ರತಿಹಾರಿ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಸೊಬಗಿನ ಸಾರವನ್ನು ಸಾಕಾರಗೊಳಿಸಲು ವಿನ್ಯಾಸಗೊಳಿಸಲಾದ ಈ ಸಂಗ್ರಹವು ನಿಮ್ಮ ಹಬ್ಬದ ಆಚರಣೆಯನ್ನು ಉನ್ನತೀಕರಿಸುವ ಭರವಸೆ ನೀಡುತ್ತದೆ. ಯುಗಾದಿ ಹೊಸ ವರ್ಷ ಆರಂಭದ ಜತೆಗೆ ಭರವಸೆ, ಸಮೃದ್ಧಿ ಮತ್ತು ಸಂತೋಷವನ್ನು ಸಂಕೇತಿಸುತ್ತದೆ. ಕುಟುಂಬಗಳು ಒಗ್ಗೂಡುವ, ನೆನಪುಗಳನ್ನು ಸೃಷ್ಟಿಸುವ ಮತ್ತು ಹೊಸ ಪ್ರಯಾಣ ಆರಂಭಿಸುವ ಮಂಗಳಕರ ಸಂದರ್ಭದ ಮಹತ್ವವನ್ನು ಅರ್ಥಮಾಡಿಕೊಂಡು, ಡಿ ಬೀರ್ಸ್ ಫಾರೆವರ್‍ಮಾರ್ಕ್ ಯುಗಾದಿಯ ಕಾಲಾತೀತ ಸಂಪ್ರದಾಯಗಳು ಮತ್ತು ಸಾಂಸ್ಕøತಿಕ ಶ್ರೀಮಂತಿಕೆಗೆ ಗೌರವವಾಗಿ ವಿಶೇಷ ಫಾರೆವರ್‍ಮಾರ್ಕ್ ಸೆಟ್ಟಿಂಗ್ ಸಂಗ್ರಹವನ್ನು ಪ್ರಸ್ತುತಪಡಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ