ಮಂದಿರ ನಿರ್ಮಾಣೋತ್ತರ ಪ್ರಥಮ ಶ್ರೀ ರಾಮನವಮಿ: ಪ್ರತೀ ಊರಲ್ಲಿ ವಿಶೇಷ ಆಚರಣೆಗೆ ಪೇಜಾವರ ಶ್ರೀ ಕರೆ

Upayuktha
0


ಉಡುಪಿ: ಈ ವರ್ಷದ ರಾಮನವಮಿಗೆ ವಿಶೇಷ ಮಹತ್ವವಿದೆ. ಶತಶತಮಾನಗಳ ಹೋರಾಟದ ಫಲವಾಗಿ ಅಯೋಧ್ಯೆಯಲ್ಲಿ ಭವ್ಯ ನಿರ್ಮಾಣದ ಬಳಿಕ ಬರುತ್ತಿರುವ ಮೊದಲ ರಾಮನವಮಿಯಾಗಿದೆ. ಆದ್ದರಿಂದ ಪ್ರತೀ ಊರಲ್ಲಿ ರಾಮನವಮೀ ಉತ್ಸವವನ್ನು ವಿಶೇಷವಾಗಿ ಆಚರಿಸುವಂತೆ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವಿಶ್ವಸ್ತರಾಗಿರುವ ಶ್ರೀ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಕರೆ ನೀಡಿದ್ದಾರೆ.‌ 


ಈ ಕುರಿತಾಗಿ ಎಪ್ರಿಲ್ 5 ರಂದು ಅಯೋಧ್ಯೆಯಲ್ಲಿ ನಡೆದ ಟ್ರಸ್ಟ್ ನ ಸಭೆಯಲ್ಲೂ ಶ್ರೀಗಳು ಸೇರಿದಂತೆ ಎಲ್ಲ ಸದಸ್ಯರು ವಿವರವಾಗಿ ಚರ್ಚಿಸಿದ್ದಾರೆ.

 


ಚುನಾವಣಾ ನೀತಿ ಸಂಹಿತೆಗೆ ತೊಂದರೆಯಾಗದಂತೆ ಪ್ರತೀ ಊರಲ್ಲಿರುವ ದೇವಸ್ಥಾನ ಭಜನಾ ಮಂದಿರ ಸಮುದಾಯ ಭವನಗಳಲ್ಲಿ ಭಜನೆ, ರಾಮತಾರಕ ಮಂತ್ರ ಜಪ ಯಜ್ಞ ಸಾಲುದೀಪ ಬೆಳಗುವುದು, ಮಕ್ಕಳಿಗಾಗಿ ರಾಮವೇಷ ಸ್ಪರ್ಧೆ, ರಾಮಾಯಣ ಆಧಾರಿತ ರಸಪ್ರಶ್ನೆ, ಭಕ್ತರಿಗೆ ಪಾನಕ‌ ಕೋಸಂಬರಿ ಮೊದಲಾದವುಗಳ ವಿತರಣೆ ಇತ್ಯಾದಿಗಳನ್ನು ಸಾಮೂಹಿಕವಾಗಿ ಆಚರಿಸಬೇಕು. ಬಹಿರಂಗ ವೇದಿಕೆಯ ಕಾರ್ಯಕ್ರಮಗಳು ಬೇಕಿಲ್ಲ. ಅದೇ ರೀತಿ ಸಮಾಜದಲ್ಲಿರುವ ಅಶಕ್ತರಿಗಾಗಿ ಸೇವಾ ಕಾರ್ಯಗಳನ್ನೂ ಸಂಯೋಜಿಸಬೇಕು. ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ವೆಚ್ಚ, ಬಡ ರೋಗಿಗಳ ಚಿಕಿತ್ಸಾ ವೆಚ್ಚ, ಮನೆ ಇಲ್ಲದವರಿಗೆ ಮನೆ ನಿರ್ಮಾಣಕ್ಕೆ ಸಹಾಯ, ಊರು ಹಳ್ಳಿಗಳಲ್ಲಿ ಶ್ರಮದಾನಗಳ ಮೂಲಕ ಸ್ವಚ್ಛತಾ ಕಾರ್ಯ, ಕೆರೆಗಳ ಶುದ್ಧೀಕರಣ, ಸುಡು ಬೇಸಿಗೆಯ ದಿನಗಳಾದ್ದರಿಂದ ಪ್ರಾಣಿ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸುವುದು, ಗೋಶಾಲೆಗಳಿಗೆ ನೆರವು, ಅನಾಥರಿಗೆ ಊಟೋಪಹಾರ ವಿತರಣೆ ಹೀಗೆ ಇಷ್ಟು ಮಾತ್ರವಲ್ಲದೇ ಸಮಾಜೋಪಯೋಗಿಯಾದ ಇನ್ನೂ ಹಲವು ಸೇವಾ ಕಾರ್ಯಗಳಿವೆ. ಊರ ಮಂದಿ ಸೇರಿಕೊಂಡು ಇಂಥಹ ಸೇವಾ ಕಾರ್ಯಗಳನ್ನು ನಡೆಸುವುದೂ ಶ್ರೀರಾಮನ ದೊಡ್ಡ ಸೇವೆಯಾಗುತ್ತದೆ ಎಂದು ಶ್ರೀಗಳು ಕರೆ ನೀಡಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top