|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ತುಳು ಸಂಸ್ಕೃತಿ- ಆಚಾರ-ಆಚರಣೆಗಳು ಪವಿತ್ರವಾದುದು: ಡಾ|| ಹರಿಕೃಷ್ಣ ಪುನರೂರು

ತುಳು ಸಂಸ್ಕೃತಿ- ಆಚಾರ-ಆಚರಣೆಗಳು ಪವಿತ್ರವಾದುದು: ಡಾ|| ಹರಿಕೃಷ್ಣ ಪುನರೂರು



ಮಂಗಳೂರು: ತೌಳವರ ಆಚರಣೆಗಳು ಆಚಾರ- ವಿಚಾರಗಳು, ಪ್ರಾಚೀನವಾದುದು. ಹಬ್ಬಹರಿದಿನ, ಸಂಸ್ಕೃತಿ ಸಂಸ್ಕಾರಗಳು ನಿತ್ಯವೋ ಎಂಬಂತೆ ನಡೆಯುತ್ತಿದೆ. ದಿನ- ವಾರ- ನಕ್ಷತ್ರ ಎಲ್ಲವೂ ತುಳುವರ ಪಾಲಿಗೆ ಶುಭವಾಗಿಯೇ ಇರುತ್ತದೆ. ಅಂತೆಯೇ ಈ ವಿಷು ಹಬ್ಬ ಕೂಡಾ. ಹಬ್ಬಗಳಿಗೆ ಆದಿ ಆಗಿ ಸೌರಮಾನ ಯುಗಾದಿ- ವಿಷು ಕಣಿ ಉತ್ಸವವಾಗಿ ಆಚರಿಸುತ್ತೇವೆ. ಇಂದು ನಡೆವ ಶುಭಸಂಗತಿಗಳು ವರ್ಷಪೂರ್ತಿ ನಡೆಯುತ್ತವೆ ಎಂಬ ನಂಬಿಕೆ  ತುಳುಕೂಟ ಈ ಬಿಸು ಪರ್ಬವನ್ನು ಆಚರಿಸಿ ಜನರನ್ನು ಜಾಗ್ರತಗೊಳಿಸುವ ಕಾರ್ಯವನ್ನು ನಡೆಸುತ್ತಾ ಬರುತ್ತಿದೆ ಕ್ರೋಧಿ ನಾಮ ಸಂವತ್ಸರ ಎಲ್ಲರಿಗೂ ಒಳಿತನ್ನೇ ಉಂಟುಮಾಡಲಿ" ಎಂದು ಕಸಾಪ ದ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ|| ಹರಿಕೃಷ್ಣ ಪುನರೂರು ಹೇಳಿದರು.


ಅವರು ಶ್ರೀಕ್ಷೇತ್ರ ಮಂಗಳಾದೇವಿಯಲ್ಲಿ ತುಳುಕೂಟ ಕುಡ್ಲ ಸಂಸ್ಥೆ ನಡೆಸಿದ ತುಳುವೆರೆ ಬಿಸು ಪರ್ಬ ಸಂಭ್ರಮೊ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದರು.


"ಕೃಷಿ- ಸಂಸ್ಕೃತಿ ನಮ್ಮ ತುಳುವರ ಜೀವನ ಪದ್ಧತಿಯನ್ನು ವಿವರಿಸುತ್ತದೆ. ಇಂದು ಪ್ರಕೃತಿಯಿಂದ ನಾವು ಬೆಳೆದು ಸಂಗ್ರಹಿಸಿದ ಹೊಸ ಹಣ್ಣು - ಫಲ - ತರಕಾರಿಗಳನ್ನು ಮನೆಗೆ ಸಂಭ್ರಮದಿಂದ ತಂದು ಕಣಿ ಇಟ್ಟು ಬೆಳಿಗ್ಗೆ ಬೇಗ ಎದ್ದು ಕಣಿ ದರ್ಶಿಸಿ ಹೊಸತು ತೊಟ್ಟು ಸಂಭ್ರಮಿಸಿ ಸಿಹಿ ಹಂಚಿ ತಿನ್ನುವ ಕಾಲ. ತುಳುಕೂಟ ಲಾಗಾಯ್ತಿನಿಂದ ಈ ಹಬ್ಬಗಳ ಮೂಲಕ ಭಾಷೆ- ಸಂಸ್ಕೃತಿಯನ್ನು ಉಳಿಸುವ ಕಾರ್ಯವನ್ನು ಮಾಡುತ್ತಾ ಬರುತ್ತಿದೆ. ಇದಕ್ಕೆ ದೇಶ- ವಿದೇಶಗಲ್ಲಿರುವ ತುಳುವರ ಪ್ರೋತ್ಸಾಹ ಇರಲಿ" ಎಂದು ಕೂಟದ ಹಾಗೂ ಕಾರ್ಯಕ್ರಮದ ಅಧ್ಯಕ್ಷ್ಯತೆಯನ್ನು ವಹಿಸಿದ್ದ ಮರೋಳಿ ಬಿ. ದಾಮೋದರ ನಿಸರ್ಗ ಸಮಸ್ತ ತುಳುವರಿಗೆ ಕರೆಯಿತ್ತರು.


ನಮ್ಮ ಕುಡ್ಲ ತುಳುವಾರ್ತಾವಾಹಿನಿಯ ವಾರ್ತಾ ವಾಚಕಿ ಡಾ| ಪ್ರಿಯಾ ಹರೀಶ್ ಬಿಸು ಪರ್ಬದ ಮಹತ್ವ; ಆಚರಣೆ; ಮುಂದಿನ ಪೀಳಿಗೆ ಅನುಸರಿಸ ಲು ಉತ್ತಮ ಮಾರ್ಗದರ್ಶನ ಈ ಕಾರ್ಯಕ್ರಮಗಳಿಂದ ಸಾಧ್ಯ. ಇದು ತಲೆತಲಾಂತರದಿಂದ ಬಂದಿದ್ದು ಹಾಗೆಯೇ ಪ್ರಮುಖ ವಾಹಿನಿಗೆ ಹರಿದು ಹೋಗಬೇಕು" ಎಂದೆನ್ನುತ್ತಾ ಉಪನ್ಯಾಸವಿತ್ತರು.


ದೇವಳದ ಮೊಕ್ತೇಸರರಾದ ಹರೀಶ್ ಐತಾಳ್ ದೀಪ ಪ್ರಜ್ವಲಿಸಿ ಬಿಸುಪರ್ಬವನ್ನು ಉದ್ಘಾಟಿಸಿ ಶುಭಕೋರಿದರು. ಬೈಕಂಪಾಡಿಯ ರೋಟರಿ ಕ್ಲಬ್ ಅಧ್ಯಕ್ಷ ಸುಧಾಕರ ಕುಲಾಲ್, ಸಾಹಿತಿ ಡಾ| ವಸಂತ ಕುಮಾರ್ ಪೆರ್ಲ ಮುಖ್ಯ ಅತಿಥಿಗಳಾಗಿ ಶುಭಕೋರಿದರು. ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ಪ್ರಾಯೋಜಕತ್ವದ "ರತ್ನವರ್ಮ ಹೆಗ್ಗಡೆ ಪ್ರಶಸ್ತಿ" 24ನ್ನು ಉಪಾಧ್ಯಕ್ಷ ಪೆಲತ್ತಡಿ ಪದ್ಮನಾಭ ಕೋಟ್ಯಾನ್ ಪ್ರದಾನ ಮಾಡಿದರು. ನ್ಯಾಯವಾದಿ ಶಶಿರಾಜ್ ರಾವ್ ಕಾವೂರು, ನವೀನ ಪಡ್ರೆ, ಆನಂದ ಕುಂದರ್, ಎಲ್ಲೂರು ರವರಿಗೆ ಅನುಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಪ್ರಶಸ್ತಿ ನೀಡಲಾಯಿತು ಪ್ರಶಸ್ತಿ ವಿಜೇತರ ಪರಿಚಯವನ್ನು ಚಂದ್ರಶೇಖರ ಸುವರ್ಣ: ಭಾಸ್ಕರ ಕುಲಾಲ್ ಬರ್ಕೆ ಹಾಗೂ ಹೇಮಾ ಡಿ. ನಿಸರ್ಗ ನಿರ್ವಹಿಸಿದರು.


ರಮೇಶ್ ಕುಲಾಲ್ ಬಾಯಾರು, ವಿಶ್ವನಾಥ ಪೂಜಾರಿ ಸೋಣಳಿಕೆ, ಪಿ. ಎ ಪೂಜಾರಿ ಮತ್ತು ಸದಸ್ಯರು ಉಪಸ್ಥಿತರಿದ್ದರು. ಪ್ರ. ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಜೆ. ವಿ.ಶೆಟ್ಟಿ. ಸ್ವಾಗತಿಸಿದರು. ನಾರಾಯಣ ಬಿ.ಡಿ.ಯವರು ಧನ್ಯವಾದವಿತ್ತರು.

ಪ್ರಶಸ್ತಿಪ್ರದಾನದ ಬಳಿಕ ವಿದ್ವಾನ್ ಸುರೇಶ್ ಅತ್ತಾವರ್ ರವರ ಚಕ್ರಪಾಣಿ ನೃತ್ಯತಂಡದವರಿಂದ ಬಿಸು ನೃತ್ಯ ವೈಭವೊ ಎಂಬ ತುಳು ಸಂಸ್ಕೃತಿಯನ್ನು ಸಾರುವ ನೃತ್ಯವೈಭವ ನಡೆಯಿತು. ಕಲಾವಿದ ತೋನ್ಸೆ ಪುಷ್ಕಳ ಕುಮಾರ್ ಕಲಾವಿದರನ್ನು ಪರಿಚಯಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

0 Comments

Post a Comment

Post a Comment (0)

Previous Post Next Post