ಭರತೇಶ ಅಲಸಂಡೆಮಜಲು ಬರ್ಲಿನ್‌ನಲ್ಲಿ ನಡೆಯಲಿರುವ ವಿಕಿಮೀಡಿಯ ಸಮಿಟ್ 2024ಕ್ಕೆ ಅಯ್ಕೆ

Upayuktha
0


ಮಂಗಳೂರು: ಭರತೇಶ ಅಲಸಂಡೆಮಜಲು ಇವರು ಎಪ್ರಿಲ್‌ ತಿಂಗಳ 19ರಿಂದ 22ರವರೆಗೆ ಜರ್ಮನಿಯ ಬರ್ಲಿನ್‌ನಲ್ಲಿ ನಡೆಯಲಿರುವ ವಿಕಿಮೀಡಿಯ ಸಮಿತ್‌ 2024ಕ್ಕೆ ಅಯ್ಕೆಯಾಗಿದ್ದಾರೆ.  ಮಂಗಳೂರಿನ ಕರಾವಳಿ ವಿಕಿಮೀಡಿಯನ್ಸ್ ಯೂಸರ್ ಗ್ರೂಪಿನ ಸಕ್ರಿಯ ಸದಸ್ಯರಾದ ಇವರು ತುಳು ಮತ್ತು ಕನ್ನಡ ಭಾಷೆಯ ರಾಯಭಾರಿಯಾಗಿ ಈ ಸಮ್ಮಿಳನವನ್ನು ಪ್ರತಿನಿಧಿಸಲಿದ್ದಾರೆ. ಈ ವಿಕಿಮೀಡಿಯನ್‌ ಸಮಿತ್‌ನಲ್ಲಿ 100ಕ್ಕಿಂತ  ಹೆಚ್ಚು ದೇಶಗಳ 150ಕ್ಕಿಂತ ಹೆಚ್ಚು ಬಹುಭಾಷಿಕರೊಂದಿಗೆ ಭಾಗವಹಿಸಿ ವಿಕಿಮೂಮೆಂಟ್‌ 2030 ಕಾರ್ಯರೂಪ, ಪ್ರಾದೇಶಿಕ ಗುಂಪುಗಳ ಅವಲೋಕನ, ಭಾಷೆಗಳ ಸವಾಲುಗಳ ಬಗೆಗಿನ ಚರ್ಚೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ.

 

ಇವರು ಪುತ್ತೂರು ತಾಲೂಕಿನ ಪೆರ್ಲಂಪಾಡಿಯ ಅಲಸಂಡೆಮಜಲು ಮನೆ ಬೋಜಪ್ಪ ಗೌಡ ಎ ಹಾಗೂ ಗಿರಿಜಾ ಎ ಬಿ. ದಂಪತಿಗಳ ಮಗ. ಪ್ರಸ್ತುತ ಬ್ಯಾಂಕ್‌ ಆಫ್ ಬರೋಡದ ಉದ್ಯೋಗಿಯಾಗಿದ್ದು, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯರು. ಇತ್ತಿಚೇಗೆ ವಿಕಿಮೀಡಿಯ ಪೌಂಢೇಶನ್‌ನ ಸಹಯೋಗದಲ್ಲಿ ಇವರ ನಿರ್ಮಾಪಕತ್ವದಲ್ಲಿ ತಯಾರಾದ ತುಳುವಿನ ಮೊದಲ ಸಂಶೋಧನಾ ಸಾಕ್ಷ್ಯಚಿತ್ರ ಪುರ್ಸಕಟ್ಟುನ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಆಯ್ಕೆಯಾಗಿತ್ತು.  ಇವರು ತುಳು, ಕನ್ನಡ ಬರಹಗಾರರು.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top