ಮೇ 1ರಂದು ಓಂಕಾರ ಆಶ್ರಮದಲ್ಲಿ ನಿರಂತರ ಭಜನೋತ್ಸವದ ಸಮಾರೋಪ ಸಮಾರಂಭ

Upayuktha
0

ಆಯೋಜನೆ : ಅಖಿಲ ಕರ್ನಾಟಕ ಭಜನಾ ಪರಿಷತ್ತು (ರಿ) ಗಿರಿನಗರ



ಬೆಂಗಳೂರು: ಸತ್ಸಂಗ ಭಜನಾ ಮಹಾ ಮಂಡಳಿ ಸಭಾ ರಾಷ್ಟ್ರಮಟ್ಟದಲ್ಲಿ ಭಜನಾಮೇಳ ಆಯೋಜಿಸುವಲ್ಲಿ ಒಂದು ದಿಟ್ಟ ಹೆಜ್ಜೆ ಇಟ್ಟು 365 ದಿನಗಳ  ನಿರಂತರ ಭಜನೋತ್ಸವ ವನ್ನು ಆರಂಭಿಸಿ, ನಶಿಸಿ ಹೋಗುತ್ತಿರುವ ಭಜನಾ ಪದ್ಧತಿಯ  ಪುನರುತ್ಥಾನಕ್ಕಾಗಿ ವಿಶ್ವಶಾಂತಿ ಗಾಗಿ ವಿಶ್ವಕ್ಕೆ ಜ್ಞಾನದ ಬೆಳಕನ್ನು ಹರಡಿದ ಹಿಂದೂ ಧರ್ಮದ ಸಂಘಟನೆಯ  ನಿಟ್ಟಿನಲ್ಲಿ  ಆಯೋಜಿಸಿ ಬೆಂಗಳೂರು ಮಹಾನಗರದ ಹಲವಾರು ಭಜನಾ ಮಂಡಳಿಗಳನ್ನು ಒಂದೇ ವೇದಿಕೆಯಲ್ಲಿ ತರುವ ಉದ್ದೇಶದಿಂದ 2019-20 ರಲ್ಲಿ 365 ದಿನಗಳ ನಿರಂತರ ಭಜನಾ ಉತ್ಸವವನ್ನು ಏರ್ಪಡಿಸಲಾಗಿತ್ತು.ಅದರ ಸಮಾರೋಪ ಸಮಾರಂಭವನ್ನು ಇದೆ ಮೇ 1 2024 ಬುಧವಾರ ಬೆಳಗ್ಗೆ 9:30ರಿಂದ ಬೆಂಗಳೂರಿನ ಕೆಂಗೇರಿ- ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿರುವ ಶ್ರೀನಿವಾಸಪುರದ ಓಂಕಾರ ಆಶ್ರಮದಲ್ಲಿ( ಜೆ ಎಸ್ ಎಸ್ ಇಂಜಿನಿಯರಿಂಗ್ ಕಾಲೇಜು ಹಿಂಭಾಗ) ಏರ್ಪಡಿಸಲಾಗಿದೆ.

 

ಓಂಕಾರಶ್ರಮದ ಪೂಜ್ಯ ಶ್ರೀ ಮಧುಸೂದನಂದಪುರಿ ಸ್ವಾಮಿಗಳು, ಬೇಲಿ ಮಠದ ಶಿವಾನುಭವ ಚರಮೂರ್ತಿ ಶಿವರುದ್ರ ಮಹಾಸ್ವಾಮಿಗಳು ಮತ್ತು ಕೆ ಆರ್ ಪುರಂ ರಾಮಕೃಷ್ಣ ವಿವೇಕಾನಂದ ಸಾಧನ ಕೇಂದ್ರದ ಚಂದ್ರೇಶಾನಂದ ಜಿ ರವರ ದಿವ್ಯ ಸಾನಿಧ್ಯದಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರಿಯ ಕಾರ್ಯವಾಹ ಮತ್ತು ವನವಾಸಿ ಕಲ್ಯಾಣ ಆಶ್ರಮದ ನಿರ್ವಾಹಕ ವಿಶ್ವಸ್ಥರಾದ ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸುವ ಸಮಾರಂಭದಲ್ಲಿ ಕರ್ನಾಟಕ ದಕ್ಷಿಣ ಪ್ರಾಂತ ಸಂಘ ಚಾಲಕರಾದ ಜಿ.ಎಸ್ ಉಮಾಪತಿ ದಿಕ್ಸೂಚಿ ಭಾಷಣ ಮಾಡುವರು.


ಅದಮ್ಯ ಚೇತನದ ವ್ಯವಸ್ಥಾಪಕ ಟ್ರಸ್ಟಿ ಮತ್ತು ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಆರ್ ವಿ ಇನ್ಸ್ಟಿಟ್ಯೂಷನ್ ನ ನಿರ್ದೇಶಕರಾದ ಡಾ ಮಮತಾ ದೇವರಾಜ್ ವಿಶೇಷ ಆಹ್ವಾನಿತರಾಗಿ ಕೊಟ್ಟೂರು ಅಮರನಾಥ ಯಾತ್ರಾ ಸೇವಾಸಮಿತಿಯ ಕಾರ್ಯದರ್ಶಿ ಸಾಯಿ ಸತೀಶ್ ಕೋರಗಲ್ ಹಾಗೂ ಎಕೆಬಿಎಂಎಸ್ ಉಪಾಧ್ಯಕ್ಷ  ಎಂ.ಆರ್.ಶಿವಶಂಕರ್   ಭಾಗವಹಿಸಲಿದ್ದಾರೆ ಎಂದು ಆಯೋಜಕರಾದ ಅಧ್ಯಕ್ಷ ಡಾ.ಕೆ ವಿ ಮುರಳಿಧರ ಶರ್ಮ ಮತ್ತು ಕಾರ್ಯದರ್ಶಿ ಮಲ್ಲಿಕಾರ್ಜುನ ಟಿ ಎಸ್ ತಿಳಿಸಿರುತ್ತಾರೆ.

ವಿವರಗಳಿಗೆ 94491 54928 / 97421 54928.



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top