ಆಳ್ವಾಸ್‌ನ 15 ವಿದ್ಯಾರ್ಥಿಗಳು ಉತ್ತೀರ್ಣ

Upayuktha
0

ಎ.ಸಿ.ಸಿ.ಎ - ಯು. ಕೆ ಮತ್ತು ಸಿ.ಎಂ.ಎ- ಯು.ಎಸ್, ಪರೀಕ್ಷಾ ಫಲಿತಾಂಶ ಪ್ರಕಟ



ಮೂಡುಬಿದಿರೆ: ಮಾರ್ಚ್ 2024ರಲ್ಲಿ ನಡೆದ ಎ.ಸಿ.ಸಿ.ಎ - ಯು. ಕೆ ಪರೀಕ್ಷೆಯ ವಿವಿಧ ಪತ್ರಿಕೆಗಳಲ್ಲಿ ಆಳ್ವಾಸ್ ಕಾಲೇಜಿನ 15 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.  ವಿದ್ಯಾರ್ಥಿಗಳಾದ ಹಸನ್ ಸುಹೈಲ್, ಶೇಖ್ ಮೊಹಮ್ಮದ್ ಸೈಮ್, ಸಲ್ಮಾನ್ ಸಲೀಂ, ಶಮ್ಲಾ ಪಿ.ಹೆಚ್, ಕಾರ್ತಿಕ್ ಶೆಟ್ಟಿ, ಬಿಂದಿಯಾ ಎನ್ ಇವರು ಎ.ಸಿ.ಸಿ.ಎ - ಎಫ್-7 ಫೈನಾನ್ಶಿಯಲ್ ರಿಪೋರ್ಟಿಂಗ್ ಪತ್ರಿಕೆಯಲ್ಲಿ ಉತ್ತೀರ್ಣರಾಗಿ ಶೇಕಡಾ 85.71 ಫಲಿತಾಂಶ ದಾಖಲಾಗಿದೆ. ಜಾಗತಿಕ ಮಟ್ಟದಲ್ಲಿ ಈ ಪತ್ರಿಕೆಯಲ್ಲಿ 52 ಶೇಕಡಾ ಫಲಿತಾಂಶ ಬಂದಿದ್ದು, ಆಳ್ವಾಸ್ 85.71 ಶೇಕಡಾ ಫಲಿತಾಂಶ ಪಡೆಯುವುದರ ಮೂಲಕ ಗಮನ ಸೆಳೆದಿದೆ. ಆಳ್ವಾಸ್‌ನ ದ್ವಿತೀಯ ಬಿ.ಕಾಂ. ಎ.ಸಿ.ಸಿ.ಎ.ಯ ವಿದ್ಯಾರ್ಥಿ ಹಸನ್ ಸುಹೈಲ್ ಶೇಕಡಾ 91 ಅಂಕಗಳನ್ನು ಪಡೆದುಕೊಂಡಿದ್ದು, ಇದುವರೆಗೆ ಈ ಪತ್ರಿಕೆಯಲ್ಲಿ  ಆಳ್ವಾಸ್ ವಿದ್ಯಾರ್ಥಿ ಪಡೆದ ಅತ್ಯುತ್ತಮ ಅಂಕವಾಗಿದೆ.


ಆಳ್ವಾಸ್‌ನ ತೃತೀಯ ಬಿ.ಕಾಂ. ವಿದ್ಯಾರ್ಥಿಗಳಾದ ವಸುಂಧರಾ ಪ್ರಮೋದ್ ವಿ., ಚಂದನಾ ಎಸ್.ಡಿ, ಲಿಯೋನಾ ವಿಯೋಲಾ ಡಿಸೋಜಾ, ಲಿಯೋನಾ ರೋಜ್ನಾ ರೋಡ್ರಿಗಸ್, ಶ್ರೇಷ್ಠಾ ಪಿ.ಜೆ, ಮೋನಿಶ್ ಮತ್ತು ಲೀಜಾ ರೇಗೊ ಎ.ಸಿ.ಸಿ.ಎ - ಎಫ್-9 ಫೈನಾನ್ಶಿಯಲ್ ಮ್ಯಾನೇಜ್‌ಮೆಂಟ್ ಪತ್ರಿಕೆಯಲ್ಲಿ ಉತ್ತೀರ್ಣರಾಗಿ, ಶೇಕಡಾ70 ಫಲಿತಾಂಶ ದಾಖಲಿಸಿದ್ದರೆ, ಜಾಗತಿಕ ಮಟ್ಟದಲ್ಲಿ ಶೇಕಡಾ 48 ಫಲಿತಾಂಶ ದಾಖಲಾಗಿದೆ.


ಆಳ್ವಾಸ್‌ನ ಬಿ.ಕಾಂ. ಎ.ಸಿ.ಸಿ.ಎ.ಯ ಹಿರಿಯ ವಿದ್ಯಾರ್ಥಿ ಪ್ರಫುಲ್ಲ್ ರಾವ್ ಎ.ಸಿ.ಸಿ.ಎ. ಫೈನಲ್ ವಿಭಾಗದ ಅಡ್ವಾನ್ಸ್ ಟ್ಯಾಕ್ಸ್ ಪತ್ರಿಕೆಯಲ್ಲಿ ಶೇಕಡಾ 76 ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. 


ಫೆಬ್ರವರಿ 2024ರಲ್ಲಿ ನಡೆದ  ಸಿ.ಎಂ.ಎ- ಯು.ಎಸ್. ಪರೀಕ್ಷೆಯಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ಶ್ರೀರಾಮ್ ಕಾಕಲ್  ಸಿ.ಎಂ.ಎ- ಪಾರ್ಟ್-2 ವಿಭಾಗದಲ್ಲಿ ಶೇಕಡಾ74 (370/500) ಅಂಕಗಳೊAದಿಗೆ ಉತ್ತೀರ್ಣರಾಗಿ ಉತ್ತಮ ಸಾಧನೆ ಮಾಡಿದ್ದಾರೆ. ಇವರು ಸೆಪ್ಟೆಂಬರ್ 2023ರಲ್ಲಿ ನಡೆದ ಸಿ.ಎಂ.ಎ- ಪಾರ್ಟ್-1 ವಿಭಾಗದಲ್ಲಿ ಶೇಕಡಾ 74 (370/500) ಅಂಕಗಳಿಸಿದ್ದು ಪ್ರಸ್ತುತ ಶೈಕ್ಷಣಿಕ ವರ್ಷದ ತೃತೀಯ  ಬಿ.ಕಾಂ. ನಲ್ಲಿ ಓದುತ್ತಿರುವಾಗಲೇ ಸಿ.ಎಂ.ಎ -ಯು.ಎಸ್. ಕೋರ್ಸ್ ಮುಗಿಸಿರುತ್ತಾರೆ. 


ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಪ್ರಾಂಶುಪಾಲ ಡಾ. ಕುರಿಯನ್ ಹಾಗೂ ಎ.ಸಿ.ಸಿ.ಎ - ಯು. ಕೆ  ಸಂಯೋಜಕ ಅಶೋಕ್‌ಕೆ.ಜಿ. ಮತ್ತು ಸಿ.ಎಂ.ಎ- ಯು.ಎಸ್. ಸಂಯೋಜಕಿ ಶಿಲ್ಪಾ ಭಟ್ ಎನ್.ಹೆಚ್. ಅಭಿನಂದಿಸಿದ್ದಾರೆ.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top