ಮಂಥನ: ಉಳಿವಿನ ಅರಿವು; ಅರಿವಿನ ಅನುಭವ!

Upayuktha
0


ನುಷ್ಯರಾದ ನಾವುಗಳು ಹುಟ್ಟಿನಿಂದ ಸಾವಿನವರೆಗೂ ಸುಖ ದುಃಖಗಳು ಹಾಗೂ ಏಳುಬೀಳುಗಳನ್ನು ಅನುಭವಿಸುತ್ತೇವೆ, ಆದರೆ ಯಾವ ಕಾರಣಕ್ಕಾಗಿ ಈ ಸುಖ ದುಃಖಗಳ ಅನುಭವ ಎಂದು ಪ್ರಶ್ನಿಸಿಕೊಂಡಿದ್ದೇವೆಯೇ? ನಾವು ಬುದ್ಧಿಜೀವಿಗಳು. ಜೀವನದಲ್ಲಿ ಇಷ್ಟೆಲ್ಲಾ ಅನುಭವಗಳನ್ನು ಪಡೆಯುತ್ತಿರುವ ನಾವು ಎಂದಾದರೂ ಈ ಅನುಭವಗಳ ಮೂಲವನ್ನು ಹುಡುಕಿದ್ದೇವೆಯೇ?


ಈ ಜಗತ್ತಿನಲ್ಲಿ ನಡೆಯುವ ಎಲ್ಲಾ ಘಟನೆಗಳು ಒಂದು ಕಾರಣಕ್ಕಾಗಿ, ಯಾವುದೂ ಕೂಡ ಆಕಸ್ಮಿಕವಲ್ಲ!ಆದರೆ ಚಿಂತೆಯಿಂದ ತುಂಬಿದ ಈ ಜಗತ್ತಿನಲ್ಲಿ ಚಿಂತನೆಯ ಮೌಲ್ಯವೇ ಕಳೆದು ಹೋಗಿದೆ!


ಜೀವನದ ಮೂಲವನ್ನು ಹುಡುಕುವ ಪ್ರಯತ್ನವಿರಲಿ ಜೀವನದ ಅರಿವೇ ಇಲ್ಲದೇ ನಾವುಗಳು ಇಂದು ಬದುಕುತ್ತಿದ್ದೇವೆ. ಕ್ಷಣಿಕ ಸುಖಗಳನ್ನು ಬಯಸಿ ಅದೇ ಜೀವನದ ಮೂಲ ಉದ್ದೇಶ ಎಂಬ ಭ್ರಮೆಯಲ್ಲಿ ಅದರ ಹಿಂದೆ ಓಡಿ ಹೋಗುತ್ತಿದ್ದೇವೆ! ನಮಗೆ ಹೇಗೆ ಬೇಕೋ ಹಾಗೆ ಬದುಕುವ ಆರಾಮದಾಯಕ ಜೀವನವನ್ನೇ ಜೀವನದ ಮೂಲ ಉದ್ದೇಶ ಎಂಬ ಭ್ರಮೆಯಲ್ಲಿದ್ದೇವೆ! ಆದರೆ ಆ ಆರಾಮದಾಯಕ ಜೀವನಕ್ಕಾಗಿ ಇಷ್ಟೆಲ್ಲ ಕಷ್ಟಗಳನ್ನು ಏಕೆ ಅನುಭವಿಸಬೇಕು, ಆ ಕಷ್ಟಗಳು ಬರಲು ಕಾರಣವಾದರೂ ಏನು? ಈ ರೀತಿ ಪ್ರಶ್ನಿಸಿಕೊಂಡು ಇದರ ಬಗ್ಗೆ ಯೋಚಿಸಿದರೆ ಉತ್ತರವೇ ಸಿಗುವುದಿಲ್ಲ ಅಲ್ಲವೇ! ಏಕೆ ಗೊತ್ತೇ?


ಏಕೆಂದರೆ ನಾವು ನಮ್ಮ ಮನಸ್ಸಿನಲ್ಲಿ ಆಸೆಯ ಸುರಿಮಳೆಯಿಂದ ಕಟ್ಟಿಕೊಂಡಿರುವ ಆ ಕಾಲ್ಪನಿಕ ಜೀವನವನ್ನೇ ನಿಜವಾದುದು ಎಂದು ನಂಬಿದ್ದೇವೆ. ಆ ಕಾಲ್ಪನಿಕ ಜೀವನದ ಭ್ರಮೆಯಿಂದ ಹೊರ ಬಂದು ನಿಜವಾದ ಜೀವನವನ್ನು ಅನುಭವಿಸಿದಾಗ ನಮಗೆ ಈ ಜೀವ ಹಾಗೂ ಜೀವನದ ಅರಿವಾಗುತ್ತದೆ, ಜೀವದ ಬೆಲೆ ಗೊತ್ತಾಗುತ್ತದೆ! ಆ ಅರಿವೇ ಜೀವನದ ಪರಮ ಅನುಭವ ಆದರೆ ಆ ಅನುಭವಕ್ಕೆ ಬೇಕಾಗಿರುವ ಶ್ರದ್ಧೆ ಹಾಗೂ ಯೋಗ್ಯತೆಯನ್ನು ಪಡೆಯುವುದು ಅಷ್ಟು ಸುಲಭವಲ್ಲ! ಅದನ್ನು ಪಡೆದ ಮೇಲೆ ಈ ಭೌತಿಕವಾದ ಜಗತ್ತಿನಾಚೆಗೂ ಇರುವ ಆ ಮೂಲ ಜಗತ್ತಿನ ಅನಾವರಣವಾಗುತ್ತದೆ!




- ದೇವರಾತ ಜೋಶಿ, ಬೆಂಗಳೂರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top