ಸಾಹಿತಿ ಭೀಮರಾವ್ ವಾಷ್ಠರ್ ಅವರ 48ನೇ ಜನ್ಮದಿನ ಸಂಭ್ರಮ
ಮಂಗಳೂರು: ಸುಳ್ಯದ ಚಂದನ ಸಾಹಿತ್ಯ ವೇದಿಕೆ ಮತ್ತು ಕಲ್ಲೂರಾಯ ಪ್ರತಿಷ್ಠಾನ ಬನದಗದ್ದೆ ಇವರ ಜಂಟಿ ಆಶ್ರಯದಲ್ಲಿ ಕಡಲ ಕವಿಗೋಷ್ಠಿ 2024, ಸಾಹಿತಿ ಜ್ಯೋತಿಷಿ ಎಚ್ ಭೀಮರಾವ್ ವಾಷ್ಠರ್ ರವರ 48ನೇ ಹುಟ್ಟುಹಬ್ಬದ ಆಚರಣೆ ಪ್ರಯುಕ್ತ ಕಡಲ ಕವಿಗೋಷ್ಠಿ- ಸಾಹಿತ್ಯ ಕೃತಿ ಬಿಡುಗಡೆ- ಸಾಂಸ್ಕೃತಿಕ ಮಹಾ ಸಮ್ಮೇಳನವು ಮಂಗಳೂರಿನ ಸಮುದ್ರದ ಅಬ್ಬಕ್ಕ ರಾಣಿ ವಿಹಾರ ನೌಕೆಯಲ್ಲಿ ಅದ್ದೂರಿಯಾಗಿ ಜರುಗಿತು. ಸಮಾರಂಭದ ಸಭಾಧ್ಯಕ್ಷತೆಯನ್ನು ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷ ಎಚ್ ಭೀಮರಾವ್ ವಾಷ್ಠರ್ ಅವರು ವಹಿಸಿದ್ದರು.
ಕರ್ನಾಟಕ ರಾಜ್ಯ ಅಲೆಮಾರಿ ಅರೆ ಅಲೆಮಾರಿ ಹಿಂದುಳಿದ ಜನಾಂಗಗಳ ಒಕ್ಕೂಟದ ಗೌರವಾಧ್ಯಕ್ಷರಾದ ರವೀಂದ್ರ ಶೆಟ್ಟಿಯವರ ಸರ್ವಾಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದ ಉದ್ಘಾಟನೆಯನ್ನು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ರವರು ನೆರವೇರಿಸಿದರು. ಇದೇ ಸಂದರ್ಭದಲ್ಲಿ ಕಲ್ಲೂರಾಯ ಪ್ರತಿಷ್ಠಾನಕ್ಕೆ ಚಾಲನೆ ನೀಡಲಾಯಿತು. ರಾಯಚೂರು ಜಿಲ್ಲೆ, ಮಾನ್ವಿ ತಾಲೂಕಿನ ದಿವಂಗತ ಮಹಾಂತಪ್ಪ ಮೇಟಿ ಅವರ ಸಂಸ್ಮರಣೆ ಪ್ರಯುಕ್ತ ಹಿರಿಯ ಸಾಹಿತಿ ಹರಿ ನರಸಿಂಹ ಉಪಾಧ್ಯಾಯರವರಿಗೆ ಚಂದನ ಸದ್ಭಾವನಾ ರತ್ನ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ವಿಶೇಷ ಸಾಧಕರಾದ ಸಾಹಿತಿ ಪಿ ವೆಂಕಟೇಶ ಬಾಗಲವಾಡ, ಚಿತ್ರ ಕಲಾವಿದರಾದ ಬಿ.ಕೆ ಮಾಧವ ರಾವ್ ಮಂಗಳೂರು, ಸಾಹಿತಿ ಬಿ. ಉದನೇಶ್ವರ ಪ್ರಸಾದ್ ಮೂಲಡ್ಕ, ಹಿರಿಯ ಸಾಹಿತಿ ನಾರಾಯಣ ನಾಯ್ಕ ಕುದುಕೋಳಿ, ಸಮಾಜ ಸೇವಕರಾದ ಜೆಸಿಂತ ಮೆಂಡೋನ್ಸ, ಸಂಘಟಕ ಪ್ರದೀಪ್ ಕುಮಾರ್ ಕಲ್ಕೂರ, ಸಮಾಜ ಚಿಂತಕರಾದ ರವೀಂದ್ರ ಶೆಟ್ಟಿ ಉಳಿದೊಟ್ಟು ಇವರಿಗೆ ಚಂದನ ಭಾರತಿ ರಾಷ್ಟ್ರ ಪ್ರಶಸ್ತಿಗಳನ್ನು ಪ್ರಧಾನ ಮಾಡಲಾಯಿತು.
ಈ ವೇದಿಕೆಯಲ್ಲಿ ಹರಿನರಸಿಂಹ ಉಪಾಧ್ಯಾಯ ಇವರ ಮುಕ್ತಕ ಪುಷ್ಪೋದ್ಯಾನ ಕೃತಿಯನ್ನು ಪರ್ಕಳದ ಶಂಕರ ಕುಲಾಲರು ಲೋಕಾರ್ಪಣೆ ಮಾಡಿದರು. ಲತಾ ಧನು ಕೃತಿ ಪರಿಚಯ ಮಾಡಿದರು. ಕವಿ ಮನ್ಸೂರ್ ಮುಲ್ಕಿ, ಕಲಾವಿದ ಶಶಿಪ್ರಸಾದ್ ಕಾಟೂರು ಸುಳ್ಯ, ಪ್ರತಿಭಾನ್ವಿತೆ ಶ್ರೇಯಾ ಸಿ.ಪಿ ಕಡಬ ಅವರಿಗೆ ರಾಜ್ಯ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಹಿರಿಯ ಸಾಹಿತಿಗಳಾದ ಶ್ರೀ ಪ್ರಭಾಕರ ಕಲ್ಲೂರಾಯರ ಅಧ್ಯಕ್ಷತೆಯಲ್ಲಿ ಕಡಲ ಕವಿಗೋಷ್ಠಿ ನಡೆಯಿತು. ರಾಜ್ಯದೆಲ್ಲೆಡೆಯಿಂದ ಅಗಮಿಸಿದ 48 ಜನ ಕವಿಗಳು ತಮ್ಮ ಸ್ವರಚಿತ ಕವನಗಳನ್ನು ವಾಚನ ಮಾಡಿದರು.
ಕವನ ವಾಚನ ಮಾಡಿದ ಎಲ್ಲಾ ಕವಿಗಳಿಗೂ ಚಂದನ ರತ್ನ ಪ್ರಶಸ್ತಿ ನೀಡಿ ಸಮ್ಮಾನಿಸಲಾಯಿತು. ಸಾಂಸ್ಕ್ರತಿಕ ಮಹಾ ಸಮ್ಮೇಳನದಲ್ಲಿ ನೃತ್ಯ, ಯೋಗ, ಗಾಯನ, ಮಿಮಿಕ್ರಿ ಇತ್ಯಾದಿ ಕಾರ್ಯಕ್ರಮಗಳ ಪ್ರದರ್ಶನ ನೀಡಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ಎಲ್ಲಾ ಕಲಾವಿದರಿಗೂ ಚಂದನ ಪ್ರತಿಭಾ ರತ್ನ ಪ್ರಶಸ್ತಿ,ನೀಡಿ ಗೌರವಿಸಲಾಯಿತು. ಸಾಹಿತಿ ಭೀಮರಾವ್ ವಾಷ್ಠರ್ ಅವರನ್ನು ಹರಿನರಸಿಂಹ ಉಪಾಧ್ಯಾಯ, ಶಂಕರ ಕುಲಾಲ್ ಅವರು ಸನ್ಮಾನಿಸಿದರು. ಕೃಷ್ಣಪ್ಪ ಗೌಡ ಪಡಂಬೈಲು ಸಕರಿಸಿದರು. ಮೀನಾಕ್ಷಿ ಕುದುಕೋಳಿ, ಗೀತಾ ಮೋಹನರವರು ಪ್ರಾರ್ಥನೆ ಹಾಡಿದರು. ವಿಮಲಾರುಣ ಪಡ್ಡಂಬೈಲ್ ಗಣ್ಯರನ್ನು ಸ್ವಾಗತಿಸಿದರು. ಆಶಾ ಮಯ್ಯ, ಸುಮಾ ಕಿರಣ್, ಪ್ರಮೀಳಾ ರಾಜ್, ಅನು ಜನಾರ್ದನ್ ಕಾರ್ಯಕ್ರಮದ ನಿರೂಪಣೆ ಮಾಡಿದರು. ಪೂರ್ಣಿಮ ತೋಟಪ್ಪಾಡಿರವರ ಧನ್ಯವಾದದ ನಂತರ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ