ತುಮಕೂರು: ಕೃಷಿ ವಲಯದಲ್ಲಿರುವ ಮಹಿಳೆಯರನ್ನು ಉತ್ತೇಜಿಸುವ ಉದ್ದೇಶದಿಂದ ಗೋದ್ರೇಜ್ ಅಗ್ರೋವೆಟ್ ಲಿಮಿಟೆಡ್ (ಜಿಎವಿಎಲ್) ತನ್ನ 'ವುಮೆನ್ ಇನ್ ಅಗ್ರಿಕಲ್ಚರ್'(ಕೃಷಿಯಲ್ಲಿ ಮಹಿಳೆಯರು) ಸಮಾವೇಶ ಆಯೋಜಿಸಿತ್ತು.
ದೇಶದಲ್ಲಿ 86.1 ಮಿಲಿಯನ್ ಮಹಿಳೆಯರು, ಅಂದರೆ ದೇಶದ ಎಲ್ಲ ವಿಭಾಗಗಳ ಮಹಿಳಾ ಉದ್ಯೋಗಿಗಳ ಶೇಕಡ 60ರಷ್ಟು ಮಹಿಳೆಯರು ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾರೆ. ತಮ್ಮ ಜೀವನೋಪಾಯಕ್ಕಾಗಿ ಕೃಷಿ ಅವಲಂಬಿಸಿರುವ ಮಹಿಳೆಯರ ಶೇಕಡಾವಾರು ಪ್ರಮಾಣವು ಗ್ರಾಮೀಣ ಭಾರತದಲ್ಲಿ ಶೇಕಡಾ 84 ರಷ್ಟಿದೆ. ಮತ್ತೊಂದೆಡೆ, ಕೃಷಿ ವ್ಯವಹಾರಗಳಲ್ಲಿ ಕೂಡಾ ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿದ್ದಾರೆ. ಭಾರತೀಯ ಕೃಷಿಯಲ್ಲಿ ಮಹಿಳೆಯರ ಮಹತ್ವದ ಪಾತ್ರದ ಮೇಲೆ ಬೆಳಕು ಚೆಲ್ಲುವ ಉದ್ದೇಶದಿಂದ ಈ ಸಮಾವೇಶ ಆಯೋಜಿಸಲಾಗಿತ್ತು ಎಂದು ಎಂದು ಜಿಎವಿಎಲ್ ನ ವ್ಯವಸ್ಥಾಪಕ ನಿರ್ದೇಶಕ ಬಲರಾಮ್ ಸಿಂಗ್ ಯಾದವ್ ಹೇಳಿದ್ದಾರೆ.
ಕೃಷಿ-ಆಹಾರ (ಅಗ್ರಿ ಫುಡ್) ವಲಯದಲ್ಲಿ ಮಹಿಳೆಯರಿಗೆ ಉದ್ಯೋಗಾವಕಾಶವನ್ನು ಹೆಚ್ಚಿಸುವ ಕುರಿತು ಸಂವಾದ ನಡೆಯಿತು. ಈ ವಲಯದಲ್ಲಿ ಮಹಿಳೆಯರಿಗೆ ಸವಾಲಾಗುತ್ತಿರುವ ಕೌಶಲ್ಯಗಳ ಬಗ್ಗೆ ಚರ್ಚೆ ನಡೆಯಿತು. ಜೊತೆಗೆ ಈ ಸವಾಲುಗಳನ್ನು ಎದರಿಸಲು ಶೈಕ್ಷಣಿಕ ಮತ್ತು ಔದ್ಯಮಿಕ ಸಹಯೋಗಗಳು ಹೇಗೆ ಸಮಸ್ಯೆ ಪರಿಹರಿಸಲು ಸಹಾಯ ಮಾಡಬಹುದು ಎಂಬ ಅಂಶಗಳ ಬಗ್ಗೆ ಗಾಢ ಚರ್ಚೆ ನಡೆಯಿತು. ಕೌಶಲ ಅಭಿವೃದ್ಧಿಯಡಿ ಒಂದು ಲಕ್ಷ ಮಹಿಳೆಯರಿಗೆ ನೆರವು ನೀಡುವ ಯೋಜನೆ ಇದಾಗಿದೆ ಎಂದು ಪ್ರಕಟಣೆ ಹೇಳಿದೆ.
ಗೋದ್ರೇಜ್ ಇಂಡಸ್ಟ್ರೀಸ್ ಲಿಮಿಟೆಡ್ (ಜಿಐಎಲ್)ನ ಚೇರ್ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕ, ಜಿಎವಿಎಲ್ ಹಾಗೂ ಅಸ್ಟೆಕ್ ಲೈಫ್ ಸೈನ್ಸಸ್ ಲಿಮಿಟೆಡ್‍ನ ಚೇರ್ಮನ್ ನಾದಿರ್ ಗೋದ್ರೇಜ್ ಮತ್ತು ಗೋದ್ರೇಜ್ ಕನ್ಸ್ಯೂಮರ್ ಪ್ರೊಡಕ್ಟ್ಸ್ ಲಿಮಿಟೆಡ್ ಎಕ್ಸಿಕ್ಯೂಟಿವ್ ಚೇರ್ಮನ್ ನಿಸಾಬ ಗೋದ್ರೇಜ್, ಜಿಎವಿಎಲ್ ಕ್ರಾಪ್ ಪ್ರೊಟೆಕ್ಷನ್ ಬಿಸಿನೆಸ್ ಎಕ್ಸಿಕ್ಯೂಟಿವ್ ಡೈರೆಕ್ಟರ್ & ಸಿಓಓ ಬುರ್ಜಿಸ್ ಗೋದ್ರೇಜ್, ಓಪನ್ ಸೀಕ್ರೆಟ್ ಸಿಇಓ ಅಹನಾ ಗೌತಮ್, ಇವೈ ಪಾಲುದಾರ ಅಂಗ್ಶುಮನ್ ಭಟ್ಟಾಚಾರ್ಯ, ನಿವಿಯಾದ ವ್ಯವಸ್ಥಾಪಕ ನಿರ್ದೇಶಕಿ ಗೀತಿಕಾ ಮೆಹ್ತಾ, ಸಲಹೆಗಾರ್ತಿ ಮತ್ತು ತಜ್ಞೆ (ಭಾರತೀಯ ಕೃಷಿ ಮತ್ತು ನಗರ ಅಭಿವೃದ್ಧಿ) ಮತ್ತು ಸ್ವತಂತ್ರ ನಿರ್ದೇಶಕಿ ಐರಿನಾ ವಿಟ್ಟಲ್ ಮತ್ತಿತರರು ಭಾಗವಹಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ