ಮಂಗಳೂರಿನ ಮಹಾಜನರೇ ಕ್ಯಾಪ್ಟನ್ ಗೆಲ್ಲಿಸಿ; ಕ್ಯಾಪ್ಟನ್‌ಗಳಾಗಿ! ಜೈ ಜವಾನ್ ಘೋಷಣೆ ಸಾರ್ಥಕಗೊಳಿಸಲು ಇದಕ್ಕಿಂತ ಉತ್ತಮ ಅವಕಾಶ ಇರಲು ಸಾಧ್ಯವೇ? ಈ ಬಾರಿಯ ಮಹಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮತದಾರ ಪ್ರಭುಗಳಿಗೆ ರಾಜ್ಯದ ಬೇರೆ ಯಾವ ಕ್ಷೇತ್ರಕ್ಕೂ ಇರದ ಒಂದು ಅಪೂರ್ವ ಅವಕಾಶ ದೊರೆತಂತಿದೆ.
1980ರ ದಶಕದಲ್ಲಿ ಆಗಿನ ಪ್ರಧಾನಿ ಸನ್ಮಾನ್ಯ ಲಾಲ್ ಬಹದ್ದೂರ ಶಾಸ್ರ್ತೀಜಿಯವರು ದೇಶದ ಸಾರ್ವಭೌಮತೆ ಸುರಕ್ಷತೆಯನ್ನು ಕಾಪಿಡುವಲ್ಲಿ ದೇಶದ ಗಡಿಕಾಯುವ ಸೈನಿಕರ ಅಹರ್ನಿಶಿ ಶ್ರಮವನ್ನು ಗೌರವಿಸಲು ನೀಡಿದ ಉದ್ಘೋಷವೇ ಜೈ ಜವಾನ್. ಈ ಘೋಷಣೆಯ ಉತ್ತರಾರ್ಧ ದೇಶದ ಸುಭಕ್ಷೆಯ ಕಾವಲು ಭಟರಾದ ರೈತರಿಗೆ ಅರ್ಪಣೆ ಜೈ ಕಿಸಾನ್.
ಜೈ ಜವಾನ್ ಜೈ ಕಿಸಾನ್ ಘೋಷಣೆ ಅಂದಿನಿಂದ ದೇಶದ ಮನೆ ಮನದ ಮಂತ್ರವೂ ಆಗಿ ಇವತ್ತಿಗೂ ದಿವ್ಯವೆನಿಸಿದೆ. ಪ್ರಸ್ತುತ, ಅಂತಹ ದೇಶದ ಗಡಿ ಕಾಯುವಲ್ಲಿ ಸೈನಿಕರಾಗಿ ಶ್ರಮಿಸಿದ ಒಬ್ಬರು ಕ್ಯಾಪ್ಟನ್ ದ.ಕ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಿ ದೇಶದ ಪ್ರಜಾತಂತ್ರದ ಸೇವೆಗೆ ಸಿದ್ಧರಾಗಿದ್ದಾರೆನ್ನುವುದು ಸಾಮಾನ್ಯದ ಸಂಗತಿಯಲ್ಲ.
ಇಡೀ ಕ್ಷೇತ್ರದ ಪ್ರತಿಯೊಬ್ಬ ಮತದಾರರಿಗೂ ಅತ್ಯಂತ ಹೆಮ್ಮೆಯ ವಿಷಯವಿದು. ಇದೊಂದು ಸುಯೋಗ. ಯುದ್ಧಭೂಮಿಯಲ್ಲಿ ಶತ್ರುಸೈನ್ಯಕ್ಕೆ ಎದೆಯೊಡ್ಡಿದ ಧೀರರೊಬ್ಬರು ಪ್ರಜಾತಂತ್ರದ ರಣಕಣದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಅವರನ್ನು ಗೆಲ್ಲಿಸಿ ಜೈ ಜವಾನ್ ಘೋಷಣೆಯನ್ನು ಕೇವಲ ಬಾಯಿಮಾತಾಗಿಸದೇ ನಿಜಾರ್ಥದಲ್ಲಿ ಸಾರ್ಥಕಗೊಳಿಸುವುದು ಅತ್ಯಂತ ಅಪರೂಪದ ಅವಕಾಶವಲ್ಲದೇ ಮತ್ತೇನು?
ಈ ಮೂಲಕ ಕ್ಷೇತ್ರದ ಪ್ರತಿಯೊಬ್ಬ ಮತದಾರ ದೇಶದ ಮಕ್ಕಳಾಗಿ ತಮ್ಮ ಆತ್ಮಗೌರವವನ್ನು ಇಮ್ಮಡಿಸಿಕೊಳ್ಳುವುದೇ ಶ್ರೇಷ್ಠ ಕಾರ್ಯವಾಗುತ್ತದೆ. ಆದ್ದರಿಂದ ಕ್ಯಾಪ್ಟನ್ ಬ್ರಿಜೇಶ್ ಚೌಟ ಗೆಲ್ಲಬೇಕು; ದಕ ಕ್ಷೇತ್ರದ ಮತದಾರರೂ ಕ್ಯಾಪ್ಟನ್ ಗಳಾಗಬೇಕು. ನೆನಪಿಡಿ ಈ ಅವಕಾಶ ರಾಜ್ಯದ ಬೇರೆ ಯಾವ ಕ್ಷೇತ್ರದ ಮತದಾರರಿಗೂ ಈ ಚುನಾವಣೆಯಲ್ಲಿ ಸಿಕ್ಕಿಲ್ಲ.
ಮಂಗಳೂರು ಕ್ಷೇತ್ರದ ಜನ ಕ್ಯಾಪ್ಟನ್ ಬ್ರಿಜೇಶರನ್ನು ಗೆಲ್ಲಿಸಿ ಇಡೀ ರಾಜ್ಯದಿಂದ ಓರ್ವ ವೀರಯೋಧರನ್ನು ಸಂಸತ್ತಿಗೆ ಕಳುಹಿಸಿ ರಾಜ್ಯದ ಕೋಟ್ಯಂತರ ಮತದಾರರನ್ನೂ ಕ್ಯಾಪ್ಟನ್‌ಗಳನ್ನಾಗಿಸುತ್ತೀರಿ ತಾನೇ?
-ಜಿ ವಾಸುದೇವ ಭಟ್ ಪೆರಂಪಳ್ಳಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ