ಉಡುಪಿ: "ಎಂಜಿಎಂ.ಕಾಲೇಜಿನಲ್ಲಿ ಕ್ರೀಡಾ ಶಿಕ್ಷಣಕ್ಕೆ ಬೇಕಾಗುವ ಪೂರಕವಾದ ಸವಲತ್ತುಗಳು ಗಳು ಲಭ್ಯವಿರುವ ಕಾರಣದಿಂದ ಇಲ್ಲಿನ ಅನೇಕ ಮಂದಿ ವಿದ್ಯಾರ್ಥಿ ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಸಾಧನೆಗೈಯಲು ಸಾಧ್ಯವಾಯಿತು ಎಂದು ಎಂ.ಜಿ.ಎಂ.ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿನಿ ರಾಷ್ಟ್ರ ಮಟ್ಟದ ಕ್ರೀಡಾ ಪಟು ತರಬೇತಿದಾರರಾದ ಶಾಲಿನಿ ಶೆಟ್ಟಿ ಅಭಿಪ್ರಾಯಪಟ್ಟರು.ಉಡುಪಿ ಎಂ.ಜಿ.ಎ.ಕಾಲೇಜಿನ 75ನೇ ವರುಷದ ಅಮೃತ ಕ್ರೀಡಾ ಕೂಟ ಉದ್ಘಾಟಿಸಿಮಾತನಾಡಿದರು.ರಾಷ್ಟ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಸಾಧನೆಗೈದ
ಕಾಲೇಜಿನ ಹದಿನೈದು ಮಂದಿ ಪ್ರತಿಭಾವಂತ ವಿದ್ಯಾರ್ಥಿ ಕ್ರೀಡಾಳುಗಳು ಕ್ರೀಡಾ ಜ್ಯೋತಿಯನ್ನು ಬೆಳಗುವುದರೊಂದಿಗೆ ಕ್ರೀಡಾ ಕುಾಟಕ್ಕೆ ಚಾಲನೆ ನೀಡಲಾಯಿತು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಚಿತ್ರಪಾಡಿ ಲಕ್ಷ್ಮೀನಾರಾಯಣ ಕಾರಂತರು ಅಧ್ಯಕ್ಷತೆ ವಹಿಸಿದ್ದರು.ದೈಹಿಕ ಶಿಕ್ಷಣ ನಿದೇ೯ಶಕಿ ಜಯಶ್ರೀನಾಯಕ್ ಸ್ವಾಗತಿಸಿದರು.ರಾಷ್ಟ್ರ ಮಟ್ಟದ ಮಹಿಳಾ ಕ್ರಿಕೆಟ್ ನಲ್ಲಿ ವಿಶಿಷ್ಟ ಸಾಧನಗೈದ ತೇಜಸ್ವಿನಿ ಉದಯಕುಮಾರ್ ಇವರನ್ನು ಸಂಮಾನಿಸಲಾಯಿತು.
ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ರಮೇಶ್ ಕಾಲ್೯; ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರೊ.ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿಯವರು ;ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಅಧ್ಯಕ್ಷ ಸುಮೇಶ್; ಕ್ರೀಡಾ ಸಮಿತಿಯ ಕಾರ್ಯದಶಿ೯ ಪ್ರಯಾಗ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಪತ್ರಿಕೇೂದ್ಯಮ ವಿಭಾಗದ ಮುಖ್ಯಸ್ಥ ಪ್ರೊ.ಸುಚಿತ್ ಕೇೂಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಕ್ಷೇಮಪಾಲನ ಸಮಿತಿಯ ಅಧ್ಯಕ್ಷ ಸುಮೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ