ಮಂಗಳೂರು: ಕಳೆದ ಮೂರು ದಶಕಗಳಿಗೂ ಮಿಕ್ಕಿ ತುಳುಕೂಟದ ಎಲ್ಲಾ ಕಾರ್ಯಕ್ರಮಗಳಲ್ಲೂ ಸಕ್ರಿಯವಾಗಿ ಭಾಗವಹಿಸಿ, ಪ್ರಕೃತ ಉಪಾಧ್ಯಕ್ಷರುಗಳಲ್ಲಿ ಓರ್ವರಾದ ಹಿರಿಯ ರಂಗಕರ್ಮಿ - ಸಂಘಟಕ ವಿ. ಜಿ. ಪಾಲ್ ರಿಗೆ ತುಳುಕೂಟದ ಅಧ್ಯಕ್ಷ ಮರೋಳಿ ಬಿ. ದಾಮೋದರ ನಿಸರ್ಗ ಕಂಬನಿ ಮಿಡಿದರು.
ತುಳುಕೂಟ ನಡೆಸಿದ ಅನೇಕ ದೊಡ್ಡ ದೊಡ್ಡ ಕಾರ್ಯಕ್ರಮಗಳಲ್ಲೂ ಸಲಹೆ - ಸೂಚನೆ ನೀಡುತ್ತಾ ಕೂಟದ ಏಳಿಗೆಗೆ ಸಹಕರಿಸುತ್ತಿದ್ದ ಸನ್ಮಿತ್ರ ಪಾಲ್ ರ ಆತ್ಮಕ್ಕೆ ಶ್ರೀದೇವರು ಚಿರಶಾಂತಿಯನ್ನು ನೀಡಲಿ ಎಂದು ತುಳುಕೂಟದ ಕಛೇರಿಯಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ ರನ್ನು ಸ್ಮರಿಸಿದರು.
ಈ ವೇಳೆ ವರ್ಕಾಡಿ ರವಿ ಅಲೆವೂರಾಯ, ಜೆ. ವಿ.ಶೆಟ್ಟಿ, ಚಂದ್ರಶೇಖರ ಸುವರ್ಣ, ಪದ್ಮನಾಭ ಕೋಟ್ಯಾನ್, ನಾರಾಯಣ ಬಿ.ಡಿ., ಪಿ. ಗೋಪಾಲಕೃಷ್ಣ, ಭಾಸ್ಕರ ಕುಲಾಲ್ ಬರ್ಕೆ, ಹೇಮಾ ನಿಸರ್ಗ, ಸುಜಾತಾ ಸುವರ್ಣ ಕೊಡ್ಮಾಣ್, ಸತ್ಯವತಿ ಆರ್. ಬೋಳೂರು, ರಮೇಶ್ ಕುಲಾಲ್, ಬಾಯಾರು, ದಿನೇಶ್ ಬಗಂಬಿಲ, ವಿಜಯ ಪ್ರಕಾಶ್ ತಾಳ್ತಜೆ, ವಿಶ್ವನಾಥ ಪೂಜಾರಿ ಸೋಣಳಿಕೆ, ರತ್ನ ಕುಮಾರ್ ಎಂ, ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ