ಶಿವಮೊಗ್ಗ : ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಇವತ್ತು ಶ್ರೀಕ್ಷೇತ್ರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿಕೊಟ್ಟು ತಾಯಿ ಮೂಕಾಂಬಿಕೆಯ ದರ್ಶನ ಪಡೆದರು. ಬೆಳಗ್ಗೆಯೇ ದೇಗುಲ ಪ್ರವೇಶಿಸಿ ವಿಶೇಷ ಪೂಜೆ ಸಲ್ಲಿಸಿದ ದಂಪತಿ, ಕೊಲ್ಲೂರು ತಾಯಿಯ ಬಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ರು ದೇಗುಲಕ್ಕೆ ಪ್ರದಕ್ಷಿಣೆ ಹಾಕಿ, ಆ ಬಳಿ ವೀರಭದ್ರ ದೇವರಿಗೂ ಪೂಜೆ ಸಲ್ಲಿಸಿದರು.
ಶಿವರಾಜ್ ಕುಮಾರ್ ದಂಪತಿಯ ಜೊತೆಗೆ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪರವರು ಸಹ ದೇಗುಲದಲ್ಲಿ ಮಡಿಯುಟ್ಟು ವಿಶೇಷ ಪ್ರಾರ್ಥನೆ ಹಾಗೂ ಪೂಜೆ ಸಲ್ಲಿಸಿದ್ದರು. ಸರ್ವಜ್ಞ ಪೀಠಕ್ಕೆ ದೀಪ ತೋರಿ, ಭಕ್ತಿಯಿಂದ ನಮಿಸಿದರು. ನಿನ್ನೆಯಷ್ಟೆ ಶಿವಮೊಗ್ಗಕ್ಕೆ ಎಂಟ್ರಿಯಾಗಿದ್ದ ಶಿವರಾಜ್ ಕುಮಾರ್ ದಂಪತಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಆನಂತರ ಬೈಂದೂರಿಗೆ ತೆರಳಿದ್ದರು. ಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದು ಅಲ್ಲಿಯ ಭಾಗದಲ್ಲಿ ಶಿವಣ್ಣ ಮತಪ್ರಚಾರ ನಡೆಸಲಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ