
ಕುಡ್ಲ: ಸುವರ್ಣ ಮಹೋತ್ಸವದ ಸಂಭ್ರಮದಲ್ಲಿರುವ ತುಳುಕೂಟ(ರಿ.) ಸಂಸ್ಥೆಯು ಶ್ರೀಕ್ಷೇತ್ರ ಧರ್ಮಸ್ಥಳದ ಪೂಜ್ಯ ಧರ್ಮಾಧಿಕಾರಿಗಳಾದ ಡಾ|| ವೀರೇಂದ್ರ ಹೆಗ್ಗಡೆಯವರ ಪ್ರಾಯೋಜನೆಯಲ್ಲಿ ಅಪ್ರಕಟಿತ ತುಳು ನಾಟಕಕ್ಕಾಗಿ ತುಳುಕೂಟ ಸಂಯೋಜಿಸಿದ ಸ್ಪರ್ಧೆಯ ವಿಜೇತರನ್ನು ರತ್ನವರ್ಮ ಹೆಗ್ಗಡೆ 2023- 2024ನೇ ಸಾಲಿನ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.
ಅಪ್ರಕಟಿತ ಹೊಸ ನಾಟಕ ಕೃತಿಗೆ ಪ್ರತೀವರ್ಷ ಪ್ರಥಮ, ದ್ವಿತೀಯ ಹಾಗೂ ತೃತೀಯ ಪ್ರಶಸ್ತಿಗಳನ್ನು ಡಾ|| ಹೆಗ್ಗಡೆಯವರು ತಮ್ಮ ತೀರ್ಥರೂಪರ ಸವಿ ನೆನಪಿನಲ್ಲಿ ಕಳೆದ ನಲುವತ್ತೇಳು ವರ್ಷಗಳಿಂದ ನೀಡುತ್ತಾ ಬರುತ್ತಿದ್ದಾರೆ.
ಪ್ರಶಸ್ತಿ ವಿಜೇತರು:
ಪ್ರಥಮ: ಶಶಿರಾಜ್ ಕಾವೂರು (ಕೃತಿ: ಛತ್ರಪತಿ ಶಿವಾಜಿ)
ದ್ವಿತೀಯ: ನವೀನ್ ಸುವರ್ಣ, ಪಡ್ರೆ (ಕೃತಿ: ಮಾಯದಪ್ಪೆ ಮಂತ್ರದೇವತೆ)
ತೃತೀಯ: ಎಲ್ಲೂರು ಆನಂದ ಕುಂದರ್ (ಕೃತಿ: ದೈವದ ಬಾಲೆಲು)
ಪ್ರಶಸ್ತಿ ಮೊತ್ತವು ಕ್ರಮವಾಗಿ 10000/; 8000/; ಮತ್ತು 6000/ ರೂ.ನಗದು ಆಗಿರುತ್ತದೆ. ರಂಗನಿರ್ದೇಶಕ- ಯಕ್ಷಕಲಾವಿದ ಕದ್ರಿ ನವನೀತ ಶೆಟ್ಟಿ ಮತ್ತು ಹಿರಿಯ ಕನ್ನಡ-ತುಳು ಸಾಹಿತಿ ಮುದ್ದು ಮೂಡುಬೆಳ್ಳೆ ಇವರನ್ನೊಳಗೊಂಡ ಸಮಿತಿ ಕೃತಿಗಳ ಮೌಲ್ಯಾಂಕನ ನಡೆಸಿ ಪ್ರಶಸ್ತಿಗೆ ಆಯ್ಕೆ ಮಾಡಿರುತ್ತದೆ.
ಎ. 14 ರಂದು ಪ್ರಶಸ್ತಿ ಪ್ರದಾನ:
ಎ. 14ನೇ ಭಾನುವಾರದಂದು ಶ್ರೀ ಮಂಗಳಾದೇವಿ ದೇವಸ್ಥಾನದ ಸಭಾಂಗಣದಲ್ಲಿ ತುಳುಕೂಟವು ಆಚರಿಸುವ ಬಿಸು ಪರ್ಬ ಕಾರ್ಯಕ್ರಮದಲ್ಲಿ; ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪದಾನ ಮಾಡಲಾಗುವುದು ಎಂದು ತುಳುಕೂಟದ ಅಧ್ಯಕ್ಷ ಮರೋಳಿ ಬಿ. ದಾಮೋದರ ನಿಸರ್ಗ ಹಾಗೂ ಪ್ರಧಾನ ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ ಜಂಟಿಯಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ