ಪಣಜಿ: ಗೋವಾ ರಾಜಧಾನಿ ಪಣಜಿಯಿಂದ ಸಿಂಧಗಿ-ಬಾಗಲಕೋಟೆ ಮಾರ್ಗವಾಗಿ ಕಲಬುರ್ಗಿಗೆ ಕೆಎಸ್‍ಆರ್‌ಟಿಸಿ "ಅಮೋಘ ವರ್ಷ" ಎಂಬ ನಾನ್ ಎಸಿ ಸ್ಲೀಪರ್ ಬಸ್ ಓಡಾಟ ಆರಂಭಗೊಂಡಿರುವುದು ಸಂತಸದ ಸಂಗತಿ. ಕಳೆದ ಹಲವು ದಶಕಗಳಿಂದ ಈ ಮಾರ್ಗಕ್ಕೆ ಸ್ಲೀಪರ್ ಬಸ್ ಸೌಲಭ್ಯ ಇರಲಿಲ್ಲ. ಇದೀಗ ನಮ್ಮ ಮನವಿಗೆ ಸ್ಫಂದಿಸಿ ಗೋವಾಕ್ಕೆ ಈ ಹೊಸ್ ಬಸ್ ಓಡಾಟ ಆರಂಭಿಸಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯಾಧ್ಯಕ್ಷ ಡಾ.ಸಿದ್ಧಣ್ಣ ಮೇಟಿ ನುಡಿದರು.
ಪಣಜಿಯಿಂದ ಕಲಬುರ್ಗಿಗೆ ಕೆಎಸ್‍ಆರ್‍ಟಿಸಿಯ ಅಮೋಘ ವರ್ಷ ಎಂಬ ಹೊಸ ಬಸ್ ಓಡಾಟಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ಪಣಜಿಯಿಂದ ಉತ್ತರ ಕರ್ನಾಟಕಕ್ಕೆ ಅಮೋಘ ವರ್ಷ ಬಸ್ ಓಡಾಟ ಆರಂಭಗೊಂಡಂತೆಯೇ ಗೋವಾದ ವಿವಿಧ ಭಾಗಗಳಲ್ಲಿ ಹೆಚ್ಚಿನ ಕನ್ನಡಿಗರು ನೆಲೆಸಿದ್ದಾರೆ. ವಾಸ್ಕೊ, ಮಾಪ್ಸಾ, ಮಡಗಾಂವ ಭಾಗದಿಂದಲೂ ಈ ಅಮೋಘ ವರ್ಷ ಬಸ್ ಓಡಾಟ ಆರಂಭಗೊಳ್ಳುವಂತಾಗಲಿ ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಾಪ್ಸಾ ಕನ್ನಡ ಸಂಘದ ಅಧ್ಯಕ್ಷ ಶಂಭು ಶೆಟ್ಟರ್ ಮಾತನಾಡಿ- ಈ ಬಸ್ ಓಡಾಟದಿಂದ ಗೋವಾದಲ್ಲಿ ನೆಲೆಸಿರುವ ಕನ್ನಡಿಗರಿಗೆ ಹೆಚ್ಚಿನ ಅನುಕೂಲವಾಗಲಿದೆ. ಗೋವಾದಲ್ಲಿ ಲಕ್ಷಾಂತರ ಕನ್ನಡಿಗರು ನೆಲೆಸಿದ್ದಾರೆ. ಕನ್ನಡಿಗರೆಲ್ಲ ಈ ಬಸ್ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಗೋವಾ ಬಿಜೆಪಿ ಕರ್ನಾಟಕ ಸೆಲ್ ದಕ್ಷಿಣ ಗೋವಾ ಕಾರ್ಯದರ್ಶಿ ರಾಜೇಶ್ ಶೆಟ್ಟಿ ಮಾತನಾಡಿ- ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ಧಣ್ಣ ಮೇಟಿ ಯವರ ಪ್ರಯತ್ನದಿಂದ ಇಂದು ಈ ಅಮೋಘ ವರ್ಷ ಬಸ್ ಓಡಾಟ ಆರಂಭಗೊಂಡಿದೆ. ಇದೇ ರೀತಿ ನಮ್ಮ ಕನ್ನಡಿಗರೆಲ್ಲರ ಹೋರಾಟ ಮುಂದುವರೆಯಲಿ ಎಂದರು.
ಈ ಸಂದರ್ಭದಲ್ಲಿ ಕಸಾಪ ಗೋವಾ ರಾಜ್ಯ ಗೌ. ಕಾರ್ಯದರ್ಶಿ ನಾಗರಾಜ ಗೋಂದಕರ್, ಕಸಾಪ ಸಂಘ ಸಂಸ್ಥೆಗಳ ಪ್ರತಿನಿಧಿ ಪಡದಯ್ಯ ಹಿರೇಮಠ, ಕಸಾಪ ದಕ್ಷಿಣ ಗೋವಾ ಜಿಲ್ಲಾಧ್ಯಕ್ಷ ಪರಶುರಾಮ ಕಲಿವಾಳ, ಸಾಲಸೇಟ ತಾಲೂಕಾಧ್ಯಕ್ಷ ಬಸವರಾಜ ಬನ್ನಿಕೊಪ್ಪ, ಪರವರಿ ಕನ್ನಡ ಸಂಘದ ಅಧ್ಯಕ್ಷ ಬಸವರಾಜ ಮೇಟಿ, ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಗೋವಾ ರಾಜ್ಯ ಘಟಕದ ವತಿಯಿಂದ ಅಮೋಘವರ್ಷ ಬಸ್ ಚಾಲಕ ಮತ್ತು ನಿರ್ವಾಹಕರನ್ನು ಗೌರವಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ