ಸ್ವ-ಉದ್ಯೋಗ ಯುವ ಜನತೆಗೆ ಸ್ವಾವಲಂಬಿ ಬದುಕನ್ನು ನೀಡಬಲ್ಲ ಅತ್ಯುತ್ತಮ ವಿಧಾನ:ಎಸ್.ಸುಬ್ರಹ್ಮಣ್ಯನ್

Upayuktha
0


ಸುರತ್ಕಲ್
:  ‘ಸ್ವ-ಉದ್ಯೋಗದಲ್ಲಿ ಜಲ ಕೃಷಿಯು ಅತ್ಯಂತ ಲಾಭದಾಯಕ ಉದ್ದಿಮೆ. ಯುವ ಜನತೆಗೆ ಸ್ವಾವಲಂಬಿ  ಬದುಕನ್ನು ನೀಡಬಲ್ಲ ಅತ್ಯುತ್ತಮ ವಿಧಾನವಿದು” ಎಂದು ಸಾಗರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ ಪ್ರಾದೇಶಿಕ ಕಛೇರಿ ಮಂಗಳೂರು ಇದರ ಸಹಾಯಕ ನಿರ್ದೇಶಕರಾದ ಎಸ್.ಸುಬ್ರಹ್ಮಣ್ಯನ್ ಹೇಳಿದರು.




ಭಾರತ ಸರಕಾರದ ‘ಮೈ ಭಾರತ್ ಪೋರ್ಟಲ್’, ಸಾಗರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ಆಂತರಿಕ ಗುಣಮಟ್ಟ ಖಾತರಿ ಕೋಶ ಗೋವಿಂದದಾಸ ಕಾಲೇಜು ಸುರತ್ಕಲ್ ಇವುಗಳ ಸಹಭಾಗಿತ್ವದಲ್ಲಿ “ಜಲಚರ ಸಾಕಣೆ ಮತ್ತು ಜಲಜೀವಿ ಪ್ರಭೇದಗಳ ವೈವಿಧ್ಯೀಕರಣಗಳಲ್ಲಿ ಆಧುನಿಕ ತಂತ್ರಜ್ಞಾನ ವಿಧಾನಗಳು” ಎಂಬ ವಿಷಯದ ಕುರಿತು ನಡೆದ ವಿಚಾರ ಸಂಕಿರಣದ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡುತ್ತಿದ್ದರು.



ಸಾಗರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ ರಾಜ್ಯ ಸಂಯೋಜಕರಾದ ನಾರಾಯಣ ಕೆ.ಎ ಇವರು ಮಾತನಾಡಿ ವೈವಿಧ್ಯಮಯವಾದ ಸಾಗರೋತ್ಪನ್ನಗಳು ಹಾಗೂ ಅತ್ಯಾಧುನಿಕ ವಿಧಾನಗಳಲ್ಲಿ ಯುವ ಪೀಳಿಗೆ ಉಧ್ಯಮಿಗಳಾಗಿ ಬೆಳೆಯುವ ವಿಧಾನ ಮತ್ತು ಅವಕಾಶಗಳನ್ನು ತಿಳಿಸಿದರು.



ಕೇಂದ್ರ ಸರಕಾರದ ಆತ್ಮನಿರ್ಭರ ಭಾರತ ಅಭಿಯಾನದ ಭಾಗವಾದ ಆಹಾರ ಸಂಸ್ಕರಣ ಉದ್ಧಿಮೆಗಳ ಕಾರ್ಯಾಲಯದ ಜಿಲ್ಲಾ ಸಮಪನ್ಮೂಲ ವ್ಯಕ್ತಿ   ಸತೀಶ್ ಮಾಬೆನ್ ಇವರು, ಕೇವಲ ಆಹಾರೋತ್ಪನ್ನಗಳಾಗಿ ಮಾತ್ರವಲ್ಲದೆ ಆಭರಣ, ಆಲಂಕಾರಿಕ ಮೀನುಗಳಂತಹ ವೈವಿಧ್ಯಮಯ ಕ್ಷೇತ್ರಗಳಲ್ಲೂ ಸಾಗರ ಕೃಷಿ ಬೆಳೆದಿದೆ ಎಂದರು.



ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ.ಪಿ. ಕೃಷ್ಣಮೂರ್ತಿ ಮಾತನಾಡಿ “ಕುತೂಹಲಕಾರಿಯೂ, ಹೆಚ್ಚು ಮಂದಿಗೆ ಅಪರಿಚಿತವೂ ಆಗಿರುವ ಜಲಕೃಷಿಯಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು” ಎಂದರು.  



ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕ ಪ್ರೊ. ಹರೀಶ ಆಚಾರ್ಯ ಪಿ.,  ರಾಷ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿಗಳಾದ ಅಕ್ಷತಾ ವಿ ಮತ್ತು ಡಾ. ಭಾಗ್ಯಲಕ್ಷ್ಮಿ ಎಂ, ಸಾಗರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ ಉದ್ಯೋಗಿ ಸಂತೋಷ್, ಉಪನ್ಯಾಸಕರಾದ ಜ್ಯೋತಿ, ಅಪೇಕ್ಷಾ  ರಾ.ಸೇ.ಯೋ. ಘಟಕದ ಕಾರ್ಯದರ್ಶಿಗಳಾದ ಜಿತಿನ್ ಜೆ. ಶೆಟ್ಟಿ, ಮನೀಷ್ ಡಿ. ಶೆಟ್ಟಿ, ನಿರ್ಮಿಕಾ ಎನ್. ಸುವರ್ಣ ಉಪಸ್ಥಿತರಿದ್ದರು. ಕಾರ್ಯದರ್ಶಿ ಹಿತ ಉಮೇಶ್ ನಿರೂಪಿಸಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top