ಸಾಹಿತಿಕ ಸೃಜನಶೀಲತೆಗೆ ಎಐ ತಂತ್ರಜ್ಞಾನದ ಸವಾಲು: ಪ್ರೊ.ವೆಂಕಪ್ಪ ಆತಂಕ

Upayuktha
0


ಉಜಿರೆ
: ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನ ಪ್ರಾತಿನಿಧ್ಯ ಪಡೆಯುತ್ತಿರುವ ಈ ಕಾಲಘಟ್ಟದಲ್ಲಿ ನಾಟಕಗಳ ಅನುವಾದ ಮತ್ತು ರಚನೆಗಳ ಸೃಜನಶೀಲತೆಯನ್ನು ಕಾಯ್ದುಕೊಳ್ಳುವ ಅನಿವಾರ್ಯತೆ ಇದೆ ಎಂದು ಎಸ್ ಡಿ ಎಂ ಕಾಲೇಜಿನ ಇಂಗ್ಲಿಷ್ ವಿಭಾಗದ ಮಾಜಿ ಮುಖ್ಯಸ್ಥರಾದ ಪ್ರೊ. ವೆಂಕಪ್ಪ ಕೆ ಅಭಿಪ್ರಾಯಪಟ್ಟರು.



ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಇಂಗ್ಲಿಷ್ ವಿಭಾಗ ಆಯೋಜಿಸಿದ್ದ ರಾಷ್ಟೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.



ನಾಟಕಗಳು ಸಾಹಿತ್ಯದ ಅತ್ಯಂತ ವಿಶಿಷ್ಟವಾದ ಪ್ರಕಾರಗಳು. ನಾಟಕವೊಂದನ್ನು ಬರೆಯುವುದು ಪಠ್ಯ, ಪದ್ಯ, ಪ್ರಬಂಧ, ಕಾದಂಬರಿಗಳನ್ನು ಬರೆದಷ್ಟು ಸುಲಭವಲ್ಲ. ಬಹಳಷ್ಟು ಯೋಚಿಸಿ ಬರೆಯುವುದು ಅಗತ್ಯ. ಅದು ಹೇಗೆ ಜನರನ್ನು ತಲುಪುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು, ಭಾಷೆ ಇಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ.



ಕೃತಕ ಬುದ್ಧಿಮತ್ತೆಯನ್ನ ಬಳಸಿ ನಾಟಕಗಳನ್ನು ಅನುವಾದಿಸಬಹುದು. ಆದರೆ ಇದರಿಂದ ಅನುವಾದಿಸಲ್ಪಡುವ ನಾಟಕಗಳು ಸತ್ವಯುತವಾಗಿರುತ್ತವೆ ಎಂಬ ನಂಬಿಕೆ ಇರುವುದಿಲ್ಲ. ಖ್ಯಾತ ಲೇಖಕ ಗಿರೀಶ್ ಕಾರ್ನಾಡ್ ಸ್ವತಃ ತಾವೇ ನಾಟಕ ರಚಿಸಿ ಇಂಗ್ಲೀಷ್ ಗೆ ಅನುವಾದಿಸುತ್ತಿದ್ದರು. ಈ ಬಗೆಯ ಸೃಜನಶೀಲತೆಯನ್ನು ಗಮನದಲ್ಲಿರಿಸಿಕೊಂಡು ಆಧುನಿಕ ತoತ್ರಜ್ಞಾನವನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.



ಕಾಲೇಜಿನ ಪ್ರಾಂಶುಪಾಲ ಡಾ. ಬಿ.ಎ. ಕುಮಾರ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತಾಡಿದರು. ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಡಾ. ಗಜಾನನ ಭಟ್ ಸರ್ವರನ್ನು ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕರಾದ ಸೂರ್ಯನಾರಾಯಣ ಭಟ್ ವಂದಿಸಿದರು.ಇಂಗ್ಲೀಷ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ವಿಘ್ನೇಶ್ ಐತಾಳ್ ಮತ್ತು ಶುಭಾರಾಣಿ ಪಿ ಎಸ್ ನಿರೂಪಿಸಿದರು.ಅತಿಥಿಗಳಾಗಿ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ ಜೋಸೆಫ್ ಕೊಯಿಪ್ಪಲ್ಲಿ, ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಪ್ರಾಧ್ಯಾಪಕರಾದ ಡಾ ಅವಿನಾಶ್ ಟಿ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  




Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top