ಸಕ್ರಾ ವರ್ಲ್ಡ್‌ ಆಸ್ಪತ್ರೆ : 1000 ಕೋಟಿ ಹೂಡಿಕೆ

Upayuktha
0



ಮಂಗಳೂರು: ದೊಡ್ಡ ಜನಸಮುದಾಯಕ್ಕೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ತನ್ನ ನಿರಂತರ ಅನ್ವೇಷಣೆಯ ಭಾಗವಾಗಿ ಸಕ್ರಾ ವರ್ಲ್ಡ್‌ ಆಸ್ಪತ್ರೆ ಬೆಂಗಳೂರಿನಲ್ಲಿ ಹೊಸ ಅತ್ಯಾಧುನಿಕ ಸೌಲಭ್ಯ ಆರಂಭಿಸುವುದಾಗಿ ಪ್ರಕಟಿಸಿದೆ.


ಬಾಣಸವಾಡಿಯಲ್ಲಿ 1,000 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ 500 ಹಾಸಿಗೆ ಸೌಲಭ್ಯದ ಈ ಆಸ್ಪತ್ರೆ ನಿರ್ಮಿಸಲಾಗುತ್ತದೆ. ಇತ್ತೀಚಿನ ಆರೋಗ್ಯ ರಕ್ಷಣೆಯ ಯೋಜನೆ, ವೈದ್ಯಕೀಯ ಪ್ರಗತಿಗಳು ಮತ್ತು ತಾಂತ್ರಿಕ ಆವಿಷ್ಕಾರಗಳ ಸಾಟಿಯಿಲ್ಲದ ಫಲ ಭಾರತಕ್ಕೂ ದೊರೆಯುವಂತೆ ಮಾಡಲಿವೆ  ಎಂದು ಸಕ್ರಾ ವರ್ಲ್ಡ್‌ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಶ್ರೀ ಯುಯಿಚಿ ನಗಾನೊ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವಕೇಶ್ ಫಾಸು ಪ್ರಕಟಣೆಯಲ್ಲಿ ಹೇಳಿದ್ದಾರೆ.


ಸಕ್ರಾ, ಭಾರತದ ಮೊದಲ 100% ಎಫ್.ಡಿ.ಐ ಮಲ್ಟಿ-ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿದ್ದು, ಜಪಾನಿನ ನಾವೀನ್ಯತೆ ಮತ್ತು ತಂತ್ರಜ್ಞಾನದಿಂದ ನಡೆಸಲ್ಪಡುವ ಆರೋಗ್ಯ ಕ್ಷೇತ್ರದ ಪ್ರಮುಖ ಹೆಸರಾಗಿರುವ ಸೆಕೋಮ್ ಮೆಡಿಕಲ್ ಸಿಸ್ಟಮ್ ಮತ್ತು ಸಹಯೋಗಿ ಉದ್ಯಮ ಸಂಸ್ಥೆ ಟೊಯೊಟಾ ಟ್ಸುಶೋ ನಡುವಿನ ಸಹಯೋಗದಲ್ಲಿ ಈ ಯೋಜನೆ ಜಾರಿಗೆ ಬರಲಿದೆ ಎಂದು ವಿವರಿಸಿದ್ದಾರೆ.


ಹೊಸ ಘಟಕ ಸುಧಾರಿತ ಆಂಕೊಲಾಜಿ ಚಿಕಿತ್ಸೆ ಮತ್ತು ಅತ್ಯಾಧುನಿಕ ಪುನರ್ವಸತಿ ಯೋಜನೆಗಳು ಸೇರಿದಂತೆ ಸ್ಪೆಷಾಲಿಟಿಗಳು ಮತ್ತು ಸೂಪರ್ ಸ್ಪೆಷಾಲಿಟಿಗಳ ಸಮಗ್ರ ಶ್ರೇಣಿಯನ್ನು ಒದಗಿಸಲಿವೆ. ಬೆಂಗಳೂರಿನಲ್ಲಿ ವಿಶ್ವ ದರ್ಜೆಯ ಆರೋಗ್ಯ ಪರಿಹಾರಗಳನ್ನು ಒದಗಿಸುವುದು ಇದರ ಉದ್ದೇಶ. ಹೊಸ ಸೌಲಭ್ಯ ಸ್ಥಳೀಯ ಮತ್ತು ಅಂತರಾಷ್ಟ್ರೀಯ ಸಮುದಾಯಗಳ ಆರೋಗ್ಯ ಅಗತ್ಯಗಳನ್ನು ಪೂರೈಸುವ ನಮ್ಮ ದೃಢವಾದ ಬದ್ಧತೆಯ ಹೆಜ್ಜೆ ಎಂದು ಸ್ಪಷ್ಟಪಡಿಸಿದ್ದಾರೆ.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top