
ಪುತ್ತೂರು: ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇದರ ದ್ವಿತೀಯ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಏಪ್ರಿಲ್ ತಿಂಗಳಲ್ಲಿ ನಡೆಯುವ ಕವಿಗೋಷ್ಠಿಗೆ ದಿವ್ಯಾಂಗ ಚೇತನ ಮಕ್ಕಳಿಗಾಗಿ ಕವಿಗೋಷ್ಠಿಗೆ ಆಹ್ವಾನ ನೀಡಲಾಗಿದೆ.
ಈ ಗೋಷ್ಠಿ ಕೇವಲ ದಿವ್ಯಾಂಗ ಚೇತನದವರಿಗಾಗಿ ಆಯೋಜಿಸಲಾಗಿದ್ದು, ಮೊದಲು ನೋಂದಾಯಿಸಿದ 25 ಮಂದಿಗೆ ಮಾತ್ರ ಅವಕಾಶ. ಅಲ್ಲದೇ ಕವನ ವಾಚನಕ್ಕೆ ಮಾತ್ರ ಅವಕಾಶ. ಬೇರೆ ಯಾವುದೇ ನೃತ್ಯ, ಹಾಡುಗಳಿಗೆ ಅವಕಾಶವಿಲ್ಲ. ಭಾಗವಹಿಸುವ ದಿವ್ಯಾಂಗ ಚೇತನ ವಿದ್ಯಾರ್ಥಿಗಳಿಗೆ ಅಂದು ಬಿಡುಗಡೆಯಾಗುವ ಕವನ ಸಂಕಲನದಿಂದ ಯಾವುದೇ ಕವನ ವಾಚಿಸಬಹುದು. ಭಾಗವಹಿಸಿದವರನ್ನು ಪ್ರಮಾಣ ಪತ್ರ, ಪುಸ್ತಕ ಕಾಣಿಕೆಯೊಂದಿಗೆ ಗಣ್ಯರು ಗೌರವಿಸಲಿದ್ದಾರೆ.
ಭಾಗವಹಿಸುವವರು ದಿನಾಂಕ:7.4.24ರ ಒಳಗಾಗಿ ಸುಪ್ರೀತಾ ಚರಣ್ ಪಾಲಪ್ಪೆ ಇವರ ವಾಟ್ಸಪ್ಪ್ ಸಂಖ್ಯೆ: 8971271027 ಮಾಹಿತಿ ನೀಡುವಂತೆ ಚಿಗುರೆಲೆ ಸಾಹಿತ್ಯ ಬಳಗದ ಸ್ಥಾಪಕಾಧ್ಯಕ್ಷರು ಚಂದ್ರಮೌಳಿ ಕಡಂದೇಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ