ಮಂಗಳೂರು: ದೇಶದ ಖ್ಯಾತ ಸಂಸ್ಕರಿತ ಆಹಾರ ಪದಾರ್ಥಗಳ ತಯಾರಿಕಾ ಕಂಪೆನಿ ಎಂಟಿಆರ್ ಫುಡ್ಸ್ ತನ್ನ ನೂರನೇ ವರ್ಷದ ಯಶಸ್ಸನ್ನು ಆಚರಿಸಿಕೊಳ್ಳುವ ಸಂದರ್ಭದಲ್ಲಿ ಲೋರ್ಮನ್ ಕಿಚನ್ ಸಲಕರಣೆಗಳ ಸಹಭಾಗಿತ್ವದಲ್ಲಿ ವಿಶ್ವದ ಅತೀ ಉದ್ದದ ಅಂದರೆ 123 ಅಡಿ ಉದ್ದದ ದೋಸೆ ತಯಾರಿಕೆಗಾಗಿ ಗಿನ್ನೆಸ್ ವಲ್ರ್ಡ್ ರೆಕಾಡ್ರ್ಸ್ ನಲ್ಲಿ ಸ್ಥಾನ ಪಡೆದಿದೆ.
ತನ್ನ ಬೆಂಗಳೂರಿನ ಬೊಮ್ಮಸಂದ್ರ ಫ್ಯಾಕ್ಟರಿಯಲ್ಲಿ ಈ ಅಪರೂಪದ ದೋಸೆಯನ್ನು ತಯಾರಿಸಲು ಎಂಟಿಆರ್ ತನ್ನದೇ ಉತ್ಪನ್ನವಾದ ಸಿಗ್ನೇಷರ್ ರೆಡ್ ಬ್ಯಾಟರ್ ಅನ್ನು ಬಳಸಿದೆ. ಎಂಟಿಆರ್ ನ ಕ್ಯುಸಿನ್ ಸೆಂಟರ್ ಆಫ್ ಎಕ್ಸಲೆನ್ಸ್ ನ ಮಾರ್ಗದರ್ಶನದಲ್ಲಿ ಅನುಭವಿ ತಜ್ಞರು ಮತ್ತು ಉದಯೋನ್ಮುಖ ಪಾಕಶಾಲೆಯ ಪ್ರತಿಭೆಗಳನ್ನು ಒಳಗೊಂಡಿರುವ 75 ಬಾಣಸಿಗರ ತಂಡವು ಈ ದಾಖಲೆಯನ್ನು ನಿರ್ಮಿಸಿದೆ ಎಂದು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶ್ರೀ ಸುನಯ್ ಭಾಸಿನ್ ಹೇಳಿದ್ದಾರೆ.
ಈ ದೋಸೆಯ ನಿರ್ಮಾಣ ಸಮುದಾಯದ ಮನೋಭಾವದ ಸಂಕೇತವಾಗಿಯೂ ಕಾರ್ಯನಿರ್ವಹಿಸುತ್ತದೆ, ಆಹಾರ ಉತ್ಸಾಹಿಗಳನ್ನು ಒಟ್ಟುಗೂಡಿಸುತ್ತದೆ. ಈ ಪಾಕಶಾಸ್ತ್ರದ ಅದ್ಭುತವನ್ನು ಎಂಟಿಆರ್ ನ ಉದ್ಯೋಗಿಗಳೊಂದಿಗೆ ಮಾತ್ರವಲ್ಲದೆ ಸ್ಥಳೀಯ ಶಾಲೆಗಳ ಮಕ್ಕಳು ಮತ್ತು ಸುತ್ತಮುತ್ತಲಿನ ಸಮುದಾಯಗಳ ಸದಸ್ಯರೊಂದಿಗೆ ಹಂಚಿಕೊಳ್ಳಲಾಗಿದೆ. ಇದರೊಂದಿಗೆ ಎಂಟಿಆರ್ ಈ ಹಿಂದಿನ ವಿಶ್ವದ ಅತೀ ಉದ್ದದ ದೋಸೆಯ 16.68 ಮೀ (54 ಅಡಿ 8.69 ಇಂಚು) ದಾಖಲೆಯನ್ನು ಮುರಿದಿದೆ ಎಂದು ಪ್ರಕಟಣೆ ತಿಳಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ