ಸಹ್ಯಾದ್ರಿ ಕಾರ್ನಿವಲ್ 2k24: ಉಜಿರೆ ಎಸ್‌ಡಿಎಂ ಕಾಲೇಜಿಗೆ ಸಮಗ್ರ ಪ್ರಶಸ್ತಿ

Chandrashekhara Kulamarva
0


ಉಜಿರೆ: ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ & ಮ್ಯಾನೇಜ್ಮೆಂಟ್ ನಡೆಸಿದ ಸಹ್ಯಾದ್ರಿ ಕಾರ್ನಿವಲ್ 2k24ರಲ್ಲಿ ಎಸ್‌ಡಿಎಂ ಕಾಲೇಜು ಉಜಿರೆಯ ವಿದ್ಯಾರ್ಥಿಗಳು ಭಾಗವಹಿಸಿ ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.


Mad-ad ಸ್ಪರ್ಧೆಯಲ್ಲಿ ಅವಿನ್, ಅಭಿರಾಮ್, ಪ್ರಧಾನ್, ಫಜಲ್ ಮತ್ತು ಸೌಂದರ್ಯ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆ ಹಾಗೂ ರಮ್ಯಾ, ಅಂಕಿತ, ದೀಕ್ಷಿತ, ಭೂಮಿಕ ಹಾಗೂ ಧನುಶ್ರೀ ದ್ವಿತೀಯ ಸ್ಥಾನವನ್ನು ಮುಡಿಗೇರಿಸಿಕೊಂಡಿದ್ದಾರೆ.


Whiz-Quiz ಎಂಬ ರಸಪ್ರಶ್ನೆಯಲ್ಲಿ ವಿದ್ಯಾರ್ಥಿಗಳು ಕೊನೆಯ ಸುತ್ತಿನವರೆಗೆ ಅತ್ಯುತ್ತಮವಾಗಿ ಭಾಗವಹಿಸಿ ಕಾಲೇಜಿನ ವಿದ್ಯಾರ್ಥಿಗಳಾದ ಯಶ್ವಂತ್, ಶಿವನ್ ಹಾಗೂ ರೋಷನ್ ಇವರು ರೂ. 5000 ಸಹಿತವಾದ ಸಮಾಧಾನಕರ ಬಹುಮಾನವನ್ನು ಪಡೆದಿದ್ದಾರೆ.


ಗಾಯನ ಸ್ಪರ್ಧೆಯಲ್ಲಿ ದ್ವಿತೀಯ ಬಿ.ಎಸ್ಸಿ. ವಿದ್ಯಾರ್ಥಿನಿ ಕು. ವೈದೇಹಿ ಕೆ. ಇವರು ಪ್ರಥಮ ಸ್ಥಾನವನ್ನು ಪಡೆದಿದ್ದಾರೆ ಪ್ರಾಧ್ಯಾಪಕರಾದ ಶ್ರೇಯಸ್ ಹಾಗೂ ಅಭಿಲಾಷ್ ಕೆ.ಎಸ್. ಇವರು ವಿದ್ಯಾರ್ಥಿಗಳನ್ನು ನಿರ್ದೇಶಿಸಿದರು. ಕಾಲೇಜಿನ ಪ್ರಾಶುಪಾಲರಾದ ಡಾ. ಬಿ.ಎ. ಕುಮಾರ ಹೆಗ್ಡೆ ಇವರು ವಿದ್ಯಾರ್ಥಿ ವೃಂದವನ್ನು ಹೃತ್ಪೂರ್ವಕವಾಗಿ ಅಭಿನಂದಿಸಿದರು.



Post a Comment

0 Comments
Post a Comment (0)
To Top