ಉಜಿರೆ: ಉಜಿರೆ ಎಸ್ ಡಿ ಎಂ ಸ್ನಾತಕೋತ್ತರ ಕೇಂದ್ರದ ಮನಃಶಾಸ್ತ್ರ ವಿಭಾಗ ಮತ್ತು ಶಿವಮೊಗ್ಗ ಕಟೀಲ್ ಅಶೋಕ್ ಪೈ ಮೆಮೋರಿಯಲ್ ಸಂಸ್ಥೆಯ ಸಹಭಾಗಿತ್ವದಲ್ಲಿ ಆಯೋಜಿತವಾದ ಎರಡು ದಿನಗಳ ಕಾರ್ಯಾಗಾರದಲ್ಲಿ ಆಪ್ತಸಮಾಲೋಚನೆಯ ಕಾರ್ಯತಂತ್ರಗಳ ಬಗ್ಗೆ ತರಬೇತಿ ನೀಡಲಾಯಿತು.
ವಿವಿಧ ಮಾನಸಿಕ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವವರೊಂದಿಗೆ ಆಪ್ತ ಸಮಾಲೋಚನೆ ನಡೆಸುವ ಬಗೆಗಳನ್ನು ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಾಗಿದ್ದ ಕಟೀಲ್ ಅಶೋಕ್ ಪೈ ಸಂಸ್ಥೆಯ ಸಹಾಯಕ ಪ್ರಾದ್ಯಾಪಕರಾದ ಹನಿ ಕುರುವಾರಿ ಮತ್ತು ಅನನ್ಯ ಎಸ್ ಎಮ್ ವಿವರಿಸಿದರು.
ಆಪ್ತ ಸಮಾಲೋಚನೆ ನಡೆಸುವಾಗ ಮಾನಸಿಕ ಬಿಕ್ಕಟ್ಟುಗೊಳಗಾದವರಿಂದ ಸಮಗ್ರ ಮಾಹಿತಿ ಪಡೆಯಬೇಕು. ಇದಕ್ಕಾಗಿ ಸೂಕ್ಷö್ಮವಾಗಿ ಗ್ರಹಿಸುವ ಶಕ್ತಿ ಇರಬೇಕು. ಮುಕ್ತವಾಗಿ ಅನಿಸಿಕೆ ಹಂಚಿಕೊಳ್ಳಲು ಅನುವಾಗುವಂಥ ವಿಶ್ವಾಸಾರ್ಹತೆ ಮೂಡಿಸಬೇಕು. ಹಾಗಾದಾಗ ಮಾತ್ರ ಆಪ್ತ ಸಮಾಲೋಚನೆ ಫಲಪ್ರದವಾಗುತ್ತದೆ ಎಂದು ಸಹಾಯಕ ಪ್ರಾಧ್ಯಾಪಕಿ ಅನನ್ಯ ಎಸ್. ಎಮ್ ಅಭಿಪ್ರಾಯಪಟ್ಟರು.
ಸಹಾಯಕ ಪ್ರಾಧ್ಯಾಪಕಿ ಹನಿ ಕುರುವಾರಿ ಆಪ್ತ ಸಮಾಲೋಚನಾ ವಿಧಾನಗಳನ್ನು ತಿಳಿಸಿಕೊಟ್ಟರು. ಕಿರುಚಿತ್ರದ ಮೂಲಕ ಸಹಾನಭೂತಿ ಏಷ್ಟು ಮುಖ್ಯ ಎನ್ನುವುದನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಈ ಕಾರ್ಯಕ್ರಮದಿಂದ ಪ್ರಾಯೋಗಿಕ ಕಲಿಕೆ ಸಾಧ್ಯವಾಗಿದೆ ಎಂದು ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು. ಎಸ್, ಡಿ ಎಂ ಕಾಲೇಜಿನ ಮನಃಶಾಸ್ತç ವಿಭಾಗದ ಮುಖ್ಯಸ್ಥೆ ಡಾ ವಂದನಾ ಜೈನ್ ಉಪಸ್ಥಿತರಿದ್ದರು, ವಿದ್ಯಾರ್ಥಿನಿ ತೇಜಸ್ವಿನಿ ಸ್ವಾಗತಿಸಿ, ಆರ್ಯ ವಂದಿಸಿ, ಸ್ಟಿನ್ಸೀ ನಿರೂಪಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ