ಮಂಗಳೂರು: ಪವಿತ್ರ ರಂಜಾನ್ ತಿಂಗಳಲ್ಲಿ 8ನೇ ಬಾರಿಗೆ ಫುಡ್ ಸ್ಟ್ರೀಟ್ ಅನ್ನು ಫಿಜಾ ಬೈ ನೆಕ್ಸಸ್ ಪ್ರಕಟಿಸಿದೆ. ರಂಜಾನ್‍ನ ಸಂಪ್ರದಾಯಗಳಲ್ಲಿ ಆಹಾರವು ಒಂದು ಅವಿಭಾಜ್ಯ ಪಾತ್ರವನ್ನು ವಹಿಸುತ್ತದೆ ಮತ್ತು ಫಿಜಾ ಬೈ ನೆಕ್ಸಸ್ ಒಂದು ತಿಂಗಳ ಕಾಲ ರುಚಿಕರವಾದ ಆಹಾರದ ಹಬ್ಬವನ್ನು ಆಯೋಜಿಸುವ ಮೂಲಕ ಆಚರಣೆಗೆ ಮೆರುಗು ನೀಡಲಿದೆ.
ಕೆಲವು ಜನಪ್ರಿಯ ಆಹಾರಗಳನ್ನು ಒಳಗೊಂಡಿರುವ 20 ಕ್ಕೂ ಹೆಚ್ಚು ಆಹಾರ ಕೌಂಟರ್‍ಗಳೊಂದಿಗೆ ಮಾಲ್‍ಗೆ ಭೇಟಿ ನೀಡುವ ಆಹಾರಪ್ರಿಯರಿಗೆ ಬಡಿಸಲು ಸಿದ್ಧವಾಗಿದೆ ಎಂದು ಪ್ರಕಟಣೆ ಹೇಳಿದೆ.
ರಂಜಾನ್‍ಗಾಗಿ ವಿಶೇಷ ರುಚಿಯ ವಿವಿಧ ಕಬಾಬ್‍ಗಳು, ಸಮೃದ್ಧ ಬಿರಿಯಾನಿ, ಫಲಾಫೆಲ್, ಹಲೀಮ್, ಸಮೋಸಾಗಳು ಮತ್ತು ವ್ಯಾಪಕವಾದ ಸಾಂಪ್ರದಾಯಿಕ ರಂಜಾನ್ ಸಿಹಿತಿಂಡಿಗಳು ಮತ್ತು ಪಾನೀಯಗಳನ್ನು ಒಳಗೊಂಡಂತೆ ರಂಜಾನ್-ರುಚಿಯ ಆಹಾರಗಳನ್ನು ಸವಿಯಬಹುದಾಗಿದೆ.
ನೆಕ್ಸಸ್ ಮಾಲ್‍ಗೆ ಭೇಟಿ ನೀಡುವ ಮೂಲಕ ಈ ವರ್ಷ ರಂಜಾನ್ ಹಬ್ಬವನ್ನು ಸ್ವಲ್ಪ ವಿಭಿನ್ನವಾಗಿ ಪ್ರಾರಂಭಿಸಬಹುದು ಮತ್ತು ಮಾರ್ಚ್ 12ರಿಂದ ಏಪ್ರಿಲ್ 10ರವರೆಗೆ ನಡೆಯುವ ಉತ್ಸವದಲ್ಲಿ ಪ್ರತಿದಿನ ಸಂಜೆ 4 ರಿಂದ ರಾತ್ರಿ 10 ರವರೆಗೆ ವಿವಿಧ ತಿಂಡಿಗಳ ರುಚಿಕರವಾದ ತಿನಸುಗಳ ಪ್ರದರ್ಶನ, ಮಾರಾಟ ಇರುತ್ತದೆ. ಇದರ ಜತೆಗೆ ಫ್ಯಾಷನ್, ಪಾದರಕ್ಷೆಗಳು, ಸೌಂದರ್ಯ, ಪರಿಕರಗಳು ಮತ್ತು ಇನ್ನಷ್ಟು ಅತ್ಯುತ್ತಮ ಸಂಗ್ರಹವನ್ನು ಪ್ರಸ್ತುತಪಡಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ