ಮಂಗಳೂರು: ಅಮೃತಾಂಜನ್ ಹೆಲ್ತ್‍ಕೇರ್ ಹೊಸದಾಗಿ ಬಿಡುಗಡೆ ಮಾಡಿರುವ ಎಲೆಕ್ಟ್ರೋ+ ಲೋ ಶುಗರ್ ಉತ್ಪನ್ನಕ್ಕೆ ರಾಯಭಾರಿಯಾಗಿ ಕ್ರಿಕೆಟಿಗ ಋತುರಾಜ್ ಗಾಯಕ್ವಾಡ್ ಅವರನ್ನು ನೇಮಿಸಿಕೊಂಡಿದೆ.
ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಮತ್ತು ನಿರ್ಜಲೀಕರಣ (ಡೀಹೈಡ್ರೇಷನ್) ಅನ್ನು ಕಡಿಮೆ ಮಾಡಲು, ಆಯಾಸ ಪರಿಹರಿಸುವ ಸಲುವಾಗಿ ಎಲೆಕ್ಟ್ರೋಲೈಟ್ ವಿನ್ಯಾಸಗೊಳಿಸಲಾಗಿದೆ. ಎಲೆಕ್ಟ್ರೋ+ ಉತ್ಪನ್ನವನ್ನು ಸೆಲ್ ಲೆವೆಲ್ ಹೈಡ್ರೇಶನ್ ತೊಡೆಯಲು ಮತ್ತು ಎಲೆಕ್ಟ್ರೋಲೈಟ್‍ಗಳ ಮರುಪೂರಣವನ್ನು ಒದಗಿಸಲು ರೂಪಿಸಲಾಗಿದೆ. ಇದು ಶಕ್ತಿಯನ್ನು ಒದಗಿಸಿ, ಬಳಲಿಕೆಯನ್ನು ಕಡಿಮೆ ಮಾಡುತ್ತದೆ. ಎಲೆಕ್ಟ್ರೋ+ ಲೋ ಶುಗರ್ ವೇರಿಯಂಟ್ ಅನ್ನು ಪರಿಚಯಿಸುವುದರೊಂದಿಗೆ ಕಂಪನಿಯು ಆರೋಗ್ಯ ಪ್ರಜ್ಞೆ ಹೊಂದಿರುವ ಗ್ರಾಹಕರಿಗೆ ನೆರವಾಗುವ ಪ್ರಕ್ರಿಯೆಯನ್ನು ಮುಂದುವರಿಸಿದೆ ಎಂದು ಎಂದು ಅಮೃತಾಂಜನ್ ಹೆಲ್ತ್ ಕೇರ್ ಲಿಮಿಟೆಡ್‍ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಎಸ್ ಸಂಭು ಪ್ರಸಾದ್ ಪ್ರಕಟಣೇಯಲ್ಲಿ ಹೇಳಿದ್ದಾರೆ.
ಋತುರಾಜ್ ಅವರ ಚೈತನ್ಯಪೂರ್ಣ ಉಪಸ್ಥಿತಿ ಈ ವಿನೂತನ ಉತ್ಪನ್ನ ಪ್ರತಿನಿಧಿಸಲು ಪರಿಪೂರ್ಣ ಆಯ್ಕೆ ಎಂದು ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಶ್ರೀ ಮಣಿ ಭಗವತೀಶ್ವರನ್ ಅಭಿಪ್ರಾಯಪಟ್ಟಿದ್ದಾರೆ. ಎಲೆಕ್ಟ್ರೋ+ ಈಗ ರೆಗ್ಯುಲರ್ ಮತ್ತು ಲೋ ಶುಗರ್ ವೇರಿಯಂಟ್ ಆಯ್ಕೆಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದು ಗ್ರಾಹಕರಿಗೆ ಆಯಾಸವನ್ನು ಪರಿಹರಿಸುವ ಮತ್ತು ಶಕ್ತಿಯ ಮಟ್ಟವನ್ನು ಮರುಪೂರಣಗೊಳಿಸುವ ರಿಫ್ರೆಶ್ ಪಾನೀಯವಾಗಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ