ಹಗಲಲ್ಲಿ ಸೂರ್ಯನಂತೆ
ಹೊಳೆದು ಬೆಳಕು ನೀಡಿ
ರಾತ್ರಿ ಚಂದ್ರನಂತೆ
ತಂಪು ತೋರಿದಾಕೆ
ಗುಲಾಬಿ ಗಿಡದಲ್ಲಿ
ಅನೇಕ ಮುಳ್ಳುಗಳಿದ್ದರೂ
ಅರಳಿ ಪ್ರಕೃತಿಯನ್ನೇ
ಸುಂದರ ಮಾಡುವ
ಹಾಗೇ ಈ ವನಿತೆ
ಎದೆಯಾಳದಲ್ಲಿ ಸಾವಿರ
ನೋವಿದ್ದರೂ, ಅವೆಲ್ಲ
ಬದಿಗೆ ಸರಿಸಿ ನಗು
ನಗುತ್ತಾ ಬಾಳುವ
ಈಕೆಗೆ ಇನ್ನಾರು ಸಾಟಿ
ಮನುಕುಲದ ಅದ್ಭುತ
ಶಕ್ತಿ, ಸೂಕ್ಷ್ಮ ಸಂವೇದನೆ,
ವಜ್ರದಷ್ಟು ಕಠೋರ
ಮನಸು ಹೊಂದಿರುವ
ದೈವದ ಅಚ್ಚರಿಯ ಸೃಷ್ಟಿ
ನಡೆದಾಡುವ ದೇವತೆ
ತನ್ನ ನೆರಳನ್ನೇ ದೇವ
ಸೃಷ್ಟಿ ಮಾಡಿರಬಹುದು
ಎನಿಸುವ ಮಾತೃ
ಹೃದಯದ ಮಮತಾಮಯಿ
ವನಿತೆ, ನಾರಿ, ಕೋಮಲೆ,
ಮಾತೃ ಹೃದಯಿ ಈ ಮಾಯಿ
ನಾರಿಕುಲದ ಎಲ್ಲ
ಮಿತ್ರವೃoದಕೆ ಮಹಿಳಾ
ದಿನಾಚರಣೆಯ ಶುಭಾಶಯಗಳು
- ರೇಖಾ ಮುತಾಲಿಕ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ