ಮಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ ಅಮೃತಾಂಜನ್ ಹೆಲ್ತ್ ಕೇರ್ ಲಿಮಿಟೆಡ್ ಮಹಿಳೆಯರು ಮತ್ತು ಹೆಣ್ಣುಮಕ್ಕಳನ್ನು ಸಬಲೀಕರಣಗೊಳಿಸುವ ಪ್ರಯತ್ನಗಳ ಭಾಗವಾಗಿ #ಪವರ್ ಟೂಬಿಯು ಅಭಿಯಾನ ಆಯೋಜಿಸಿದೆ. ಅಮೃತಾಂಜನ್ ಕಾಂಫಿ ನೈರ್ಮಲ್ಯ ಬ್ರಾಂಡ್ ಮೂಲಕ ಆರಂಭಿಸಿದ ಈ ಅಭಿಯಾನವು ಭಾರತದ ಋತುಚಕ್ರದ ಬಡತನದ ಸಮಸ್ಯೆಯ ಕುರಿತು ಜಾಗೃತಿ ಉಂಟುಮಾಡುವ ಮತ್ತು ಪ್ರತಿ ಮಹಿಳೆಯು ಮುಟ್ಟಿನ ಸಮಯದಲ್ಲಿ ಘನತೆ ಮತ್ತು ಆತ್ಮವಿಶ್ವಾಸದ ಹಕ್ಕನ್ನು ಹೊಂದಿದ್ದಾಳೆ ಎಂಬ ಸಂದೇಶವನ್ನು ಹರಡುವ ಗುರಿಯನ್ನು ಹೊಂದಿದೆ.
ಕಾಂಫಿ ಈಗಾಗಲೇ ಪ್ರಾಜೆಕ್ಟ್ ದಿಶಾ ಮೂಲಕ ಈ ವರ್ಷ ದೇಶದ 10 ರಾಜ್ಯಗಳು, 900 ಪಟ್ಟಣಗಳು, 4000 ಶಾಲೆಗಳಲ್ಲಿನ, 4.8 ಲಕ್ಷ ವಿದ್ಯಾರ್ಥಿಗಳು ಮತ್ತು 100 ಅಂಗನವಾಡಿ ಕೇಂದ್ರಗಳಿಗೆ ಮುಟ್ಟಿನ ನೈರ್ಮಲ್ಯದ ಬಗ್ಗೆ ಮತ್ತು ಅಗತ್ಯವಾದ ಮುಟ್ಟಿನ ನೈರ್ಮಲ್ಯ ಉತ್ಪನ್ನಗಳ ಕುರಿತು ಜಾಗೃತಿ ಮೂಡಿಸಿದೆ ಎಂದು ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀ ಎಸ್. ಸಂಭು ಪ್ರಸಾದ್ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಮಹಿಳಾ ದಿನದ ಸಂಭ್ರಮಾಚರಣೆ ಮಾಡುತ್ತಲೇ ಕಾಂಫಿ ಕಂಪನಿ ಇತ್ತೀಚೆಗೆ ಮಹಿಳಾ ಪೊಲೀಸ್ ಅಧಿಕಾರಿಗಳಿಗೆ ನೆರವಾಗಲು, ಅವರ ಮುಟ್ಟಿನ ಸಂದರ್ಭದಲ್ಲಿನ ನೋವು ನಿವಾರಿಸುವ ಉಪಕ್ರಮ ಆಯೋಜಿಸಿತ್ತು. ಚೆನ್ನೈನಲ್ಲಿ ಯಶಸ್ವಿ ಆರಂಭದ ನಂತರ, ಮಹಿಳೆಯರಲ್ಲಿ ಋತುಚಕ್ರದ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಋತುಚಕ್ರದ ನೋವು ನಿವಾರಿಸಲು ಭಾರತದಾದ್ಯಂತ ಹಲವು ನಗರಗಳಲ್ಲಿ ಈ ಉಪಕ್ರಮ ಆಯೋಜಿಸಲಾಗಿದೆ ಎಂದು ಕಾಂಫಿ ಬ್ರಾಂಡ್ ಅಂಬಾಸಿಡರ್ ಶ್ರದ್ಧಾ ಕಪೂರ್ ಹೇಳಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ