ಬಂದಿತು ಬಂದಿತು ಹೋಳಿಯ ಹಬ್ಬ
ಸಡಗರ ಸಂಭ್ರಮ ತುಂಬಿದ ಹಬ್ಬ
ಬಣ್ಣಗಳೊಂದಿಗೆ ಆಡುವ ಹಬ್ಬ
ಸ್ನೇಹ ಸಂಬಂಧಗಳೆಲ್ಲವ ಮುಳುಗಿಸಿ ತೇಲಿಸುವ ಸುಂದರ ಹಬ್ಬ
ಹಿರಿಯರ, ಕಿರಿಯರ ನಡುವಿನ ಅಂತರ ಕಡಿಮೆ ಮಾಡುವ ಈ ಹಬ್ಬ
ಭೇದ ಭಾವಗಳಿಲ್ಲದೆ ಎಲ್ಲರೂ ಒಂದಾಗಿ ಸಂತೋಷದಿಂದ ತೇಲುವ ಈ ಹೋಳಿ ಹಬ್ಬ
ರಂಗು ರಂಗಾದ ಬಣ್ಣಗಳೊಂದಿಗೆ ಮೋಜು ಮಸ್ತಿಯ ಈ ಹಬ್ಬ
ಇದುವೇ ಸುಂದರ ಕಾಮನ ಹಬ್ಬ
ಅಂದರೆ ಇದು ಹೋಳಿ ಹಬ್ಬ
ಕಾಮಣ್ಣನ ದಹನದೊಂದಿಗೆ ಶುರುವಾಗುವ ಈ ಹಬ್ಬ
ಆತ ಮತ್ತೆ ಬದುಕಿದನೆಂದು ಸಂಭ್ರಮಿಸುವುದೇ ಹೋಳಿ ಹಬ್ಬ
- ನಾಗಶ್ರೀ ಟಿ.ಆರ್
ಹವ್ಯಾಸಿ ಬರಹಗಾರರು
ಶಿವಮೊಗ್ಗ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ