ಕುಲಾಲ ಸಂಘ ಮುಂಬೈಯ ಕುಲಾಲ ಭವನ ಮಂಗಳೂರು ಬ್ಯಾಂಕ್ವೆಟ್ ಹಾಲ್ ಗೆ ಮುಹೂರ್ತ

Upayuktha
0

ವರ್ಷದ ಕೊನೆಯಲ್ಲಿ ಕುಲಾಲ ಭವನ ಮಂಗಳೂರು ಲೋಕಾರ್ಪಣೆ:  ರಘು ಮೂಲ್ಯ ಪಾದೆಬೆಟ್ಟು 



ಮಂಗಳೂರು : ಕುಲಾಲ ಸಂಘ ಮುಂಬಯಿಯ ಬಹು ಕೋಟಿ ವೆಚ್ಚದ ಕನಸಿನ  ಯೋಜನೆಯಾದ  ಮಂಗಳೂರಿನ ಮಂಗಳಾದೇವಿ ದೇವಸ್ಥಾನದ ಬಳಿ ನಿರ್ಮಿಸುತ್ತಿರುವ   ಕುಲಾಲ ಭವನದ  4  ನೆಯ ಮಹಡಿಯಲ್ಲಿ ನಿರ್ಮಾಣವಾಗಲಿರುವ  ನಮ್ರತಾ ಜಗದೀಶ್ ರಾಮ ಬಂಜನ್ ಬ್ಯಾಂಕ್ವೆಟ್ ಹಾಲ್ ಮತ್ತು ಪಿ ಕೆ ಸಾಲ್ಯಾನ್ ವೇದಿಕೆಯ ಮುಹೂರ್ತ ಸಮಾರಂಭವು ಮಾ. 8 ರಂದು ಬೆಳಿಗ್ಗೆ ಕುಲಾಲ ಸಂಘ ಮುಂಬಯಿಯ ಅಧ್ಯಕ್ಷರಾದ ರಘು ಎ ಮೂಲ್ಯ ಪಾದೆ ಬೆಟ್ಟು  ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಶ್ರೀ ವೀರನಾರಾಯಣ ದೇವಸ್ಥಾನದ ಪ್ರಧಾನ ಅರ್ಚಕ ಜನಾರ್ಧನ್ ಭಟ್ ಅವರ ಪುರೋಹಿತ್ವದಲ್ಲಿ   ವೈದಿಕ ವಿಧಿ ವಿಧಾನಗಳು ನಡೆದವು.


ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ರಘು ಮೂಲ್ಯರವರು   ಭವನದ ಕೆಲಸ ಈ ವರ್ಷ ಪೂರ್ತಿ ಗೊಳಿಸಿ ಲೋಕಾರ್ಪಣೆಯಾಗಬೇಕೆಂಬ ಸಂಕಲ್ಪ ನಾವು ಮಾಡಿದ್ದೇವೆ ಅದಕ್ಕೆ ಮುಂಬಯಿ ಕಮಿಟಿ ಮತ್ತು ಊರಿನ ವಿವಿಧ ಕುಲಾಲ ಸಂಘದ ಸದಸ್ಯರು ಕೈ ಜೋಡಿಸಿ ಸಹಕಾರ ಕೊಡುತ್ತೀರಿ ಎಂಬ  ಭರವಸೆ ಇದೆ.  ಹೊರನಾಡಿನ ಸಮಾಜ ಬಾಂಧವರ ಹಾಗೂ ಅಭಿಮಾನಿಗಳ ಸಹಕಾರ ಕೂಡ ನಮಗೆ ಅಗತ್ಯವಾಗಿದೆ  ಎಂದು ನುಡಿದರು.



ಕುಲಾಲ ಸಂಘ ಮುಂಬಯಿಯ ಯೋಜನೆಯಾದ ಕುಲಾಲ ಭವನ ಮಂಗಳೂರು ಈ ಭವ್ಯ ಭವನ ದ ಮೇಲ್ಛಾವಣಿಯ ಕೆಲಸದ ಮುಹೂರ್ತ ಪೂಜೆ ಯು ಮಹಾ ಶಿವರಾತ್ರಿ ಯ ಶುಭ ದಿನ ಮಾ. 8ರಂದು  ಭವನದ ಮೇಲ್ಛಾವಣಿಯಲ್ಲಿ ನಡೆಯಿತು. ನಮ್ರತಾ ಹಾಗೂ ಜಗದೀಶ್ ರಾಮ ಬಂಜನ್ ಹೆಸರಿನ ಈ ಬ್ಯಾಂಕ್ವೆಟ್ ಹಾಲ್ ನ ಕೆಲಸ ಅತೀ ಶೀಘ್ರದಲ್ಲಿ ಪೂರ್ಣಗೊಳ್ಳುವಂತೆ ,ಮತ್ತು ಇದರಿಂದ ನಾವು ಊಹಿಸಿದಕ್ಕಿಂತ ಹೆಚ್ಚು ಲಾಭಾಂಶ ಬಂದು ಉತ್ತರೋತ್ತರ ಅಭಿವೃದ್ಧಿ ಹೊಂದಿ ಹೆಚ್ಚು ನಮ್ಮ ಜನರಿಗೆ ಸಹಕಾರವಾಗುವಂತಹ ಕೆಲಸವು ನಮ್ಮ ಕುಲಾಲರಿಂದ ನಡೆದು ಈ ಸಮುದಾಯ ಇನ್ನಷ್ಟು ಅಭಿವೃದ್ಧಿ ಹೊಂದಲಿ, ಎಂದು ವೀರನಾರಾಯಣ ದೇವಸ್ಥಾನದ ಪ್ರಮುಖ ಪುರೋಹಿತರಾದ ಜನಾರ್ದನ ಭಟ್ ರವರು ಆಶೀರ್ವದಿಸಿದರು.



ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘ ಮಂಗಳೂರು ಇದರ ಅಧ್ಯಕ್ಷರು ಮಯೂರ್ ಉಳ್ಳಾಲ್ರವರು ಮಾತಾಡುತ್ತ : ನಮ್ಮ ಮುಂಬಯಿ  ಕುಲಾಲ ಭವನ ಆದಷ್ಟು ಬೇಗ ಲೋಕಾರ್ಪಣೆಯಾದರೇ ಇದರ ಸಂಭ್ರಮವೂ ಸುವರ್ಣಾಕ್ಷರದಲ್ಲಿ ಬರೆಯುವಂತಾಗಲಿದೆ. ಯಾಕೆಂದರೆ ನಮ್ಮ ಕುಲಾಲಾರ ಸಂಘವು ಪ್ರತಿಯೊಂದು ಜಾಗದಲ್ಲಿ ಕಂಡು ಬರುತ್ತದೆ. ಈಗ ನಮ್ಮ ವೀರನಾರಾಯಣ ದೇವಸ್ಥಾನ ಹೇಗೆ ವೈಭವ ರೀತಿಯಲ್ಲಿ ಕಾಣು ತ್ತದೆಯೋ ಹಾಗೆಯೇ ನಮ್ಮ ಈ ಕುಲಾಲ ಭವನ ಬಹಳ ವೈಭವ ರೀತಿಯಲ್ಲಿ ಕಾಣುತ್ತದೆ ಎಂಬುವುದಕ್ಕೆ ಯಾವಸ ಸಂದೇಹವೂ ಇಲ್ಲ. ಇದಕ್ಕೆ ಈಗ ಹೆಚ್ಚು ಹೊರನಾಡಿನಿಂದಲೂ ಹೆಚ್ಚು ಪ್ರೇರಣೆ ಸಿಗಬಹುದು. ನಮ್ಮ ಊರಿನ ಕುಲಾಲರು ಹಾಗೂ ಮುಂಬಯಿ ಕುಲಲಾರು ಒಗ್ಗಟ್ಟಿನಿಂದ ಸಹಕಾರ ಮಾಡುವವರಿದ್ಧೇವೆ ಎಂದು ತುಂಬು ಹೃದಯದಿಂದ ತನ್ನ ಅನಿಸಿಕೆಯನ್ನು ವ್ಯಕ್ತ ಪಡಿಸಿದರು.




ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ವೀರನಾರಾಯಣ ಸೇವಾ ಟ್ರಸ್ಟ್ ಕುಲಶೇಖರ ಮಂಗಳೂರು ಇದರ ಕಾರ್ಯಧ್ಯಕ್ಷ ಬಿ. ಪ್ರೇಮಾನಂದ ಕುಲಾಲ್  ಮಾತನಾಡುತ್ತಾ ಮುಂಬಯಿಯ ಸಮಾಜ ಬಾಂಧವರ ಕನಸಿನ ಯೋಜನೆ ಅಂತಿಮ ಹಂತದಲ್ಲಿದ್ದು ನಾವೆಲ್ಲರೂ ಸೇರಿ ಕುಲಾಲ ಭವನವನದ ಕೆಲಸ ಬೇಗನೆ ಸಂಪೂರ್ಣ ಗೊಳಿಸಲು ಕ್ರೀಯಾಶೀಲರಾಗೋಣ ಎಂದರು.




ಮುಂಬೈಯ ಉದ್ಯಮಿ, ದಾನಿ ಸುನಿಲ್ ಆರ್ ಸಾಲಿಯನ್, ಮಾತನಾಡುತ್ತಾ  ಮುಂಬಯಿಯ ಕುಲಾಲ ಸಂಘ ಹಾಗೂ ಊರಿನ ವೀರನಾರಾಯಣ ದೇವಸ್ಥಾನ ವೆಂದರೆ ಬಹಳ ಅಭಿಮಾನ ಇದರಿಂದಾಗಿ  ಇಂದು ಸಮಾಜ ಬಾಂಧವನ್ನು ನನ್ನನ್ನು ಗುರುತಿಸುವಂತಾಗಿದೆ ಇವರಿಗೆ ನಾನೂ ಸದಾ ಸಹಕಾರಿಯಾಗಿರುವೆನು ಎಂದರು. 




 ಕುಲಾಲ ಪ್ರತಿಷ್ಠಾನ ಮಂಗಳೂರು ಇದರ ಅಧ್ಯಕ್ಷ ಸುರೇಶ್ ಕುಲಾಲ್ ಮಂಗಳಾದೇವಿ ಮಾತನಾಡುತ್ತಾ ಮಂಗಳೂರಿನಲ್ಲಿ  ಇಷ್ಟು ವಿಶಾಲವಾದ ಸಭಾಗೃಹ ಎಲ್ಲಿಯೂ ಇಲ್ಲ. ಆದುದರಿಂದ ಸಮಾಜ ಬಾಂಧವರು ಎಲ್ಲರೂ ಸೇರಿ ಈ ಸಭಾಗೃಹವನ್ನು ಆದಷ್ಟು ಬೇಗನೇ ಲೋಕಾರ್ಪಣೆ ಮಾಡಬೇಕಾಗಿದೆ ಎಂದರು.  



ಕುಲಾಲ ಸಂಘ ಮುಂಬೈಯ ಗೌರವಾಧ್ಯಕ್ಷ ದೇವದಾಸ್ ಎಲ್ ಕುಲಾಲ್ ಮಾತನಾಡಿ ಹತ್ತು ವರ್ಷಗಳ ಹಿಂದೆ ಪಿಕೆ  ಸಾಲಿಯಾನ್ ಅವರು ಅಧ್ಯಕ್ಷತೆಯಲ್ಲಿ ಈ ಭವ್ಯ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿದೆ, ಸಮಾಜ ಬಾಂಧವರ ಸಹಕಾರದಿಂದ ಈ ವರ್ಷ ಪೂರ್ತಿ ಪೂರ್ಣಗೊಳ್ಳಲಿದೆ ಎಂದು ನುಡಿದರು,



ಕಟ್ಟಡ  ನಿರ್ಮಾಣ ಸಮಿತಿಯ ಕಾರ್ಯಧ್ಯಕ್ಷ ಗಿರೀಶ್ ಬಿ ಸಾಲ್ಯಾನ್ ತಮ್ಮ ಅಭಿಪ್ರಾಯವನ್ನು ತಿಳಿಸುತ್ತಾ ಭವ್ಯ ಕುಲಾಲ ಭವನ ಹೆಚ್ಚಿನ ಕೆಲಸಗಳು ಪೂರ್ತಿಗೊಂಡಿದೆ, ಸಭಾಂಗಣ  ಮಾತೃ ಕೆಲಸ ಬಾಕಿ ಇದೆ ,ಅದರ ಕೆಲಸ ಕೂಡ ಶೀಘ್ರಗತಿಯಲ್ಲಿ ನಡೆಯುತ್ತಿದೆ ಎಂದು ನುಡಿದರು,



ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಎಸ್ ಗುಜರನ್,  ಉದ್ಯಮಿ ಜಗದೀಶ್ ರಾಮ ಬಂಜನ್, ವೀರನಾರಾಯಣ ದೇವಸ್ಥಾನದ ಆಡಳಿತ ಮೊಕ್ತೇಸರ ಪುರುಷೊತ್ತಮ  ಕುಲಾಲ್   ಕಲ್ಪಾವಿ,  ಮಂಗಳೂರು ಸಮಿತಿಯ ಕಾರ್ಯಾಧ್ಯಕ್ಷ ವಿಶ್ವನಾಥ್ ಬಂಗೇರ  ಉಪಸ್ಥಿತರಿದ್ದರು.



ಸಭೆಯಲ್ಲಿ ಕುಲಾಲ ಸಂಘ ಮುಂಬಯಿಯ ಜೊತೆ ಕಾರ್ಯದರ್ಶಿ ಎಲ್. ಆರ್. ಸ್ವಾಗತಿಸಿದರು,ಅಮೂಲ್ಯ ಉಪಸಂಪಾದಕ ಆನಂದ ಬಿ. ಮೂಲ್ಯ ಧನ್ಯವಾದ ನೀಡಿದರು . ಕಾರ್ಯಕ್ರಮವನ್ನು ಮುಂಬೈಯ ಪತ್ರಕರ್ತ ಸಮಾಜ ಸೇವಕ ದಿನೇಶ್ ಬಿ ಕುಲಾಲ್ ನಿರ್ವಹಿಸಿದರು, ಕಾರ್ಯಕ್ರಮ ಯಶಸ್ವಿಯಲ್ಲಿ ಕುಲಾಲ ಭವನದ ಮುಖ್ಯ ಮೇಲ್ವಿಚಾರಕರಾದ ರಘು ಬಿ ಮುಲ್ಯ, ಕಾಂಟ್ರಾಕ್ಟರ್ ಸುರೇಶ್ ಕುಲಾಲ್ ಸಹಕರಿಸಿದರು,



ಮಂಗಳ ದೇವಿ ದೇವಸ್ಥಾನದ ಬಳಿ 15 ಕೋಟಿ ವೆಚ್ಚದ ಭವ್ಯ ಕುಲಾಲ ಭವನ:

ಮುಂಬೈ ಕುಲಾಲ ಸಂಘ ಸುಮಾರು ಹದಿನೈದು ಕೋಟಿ ರೂಪಾಯಿ ವೆಚ್ಚದ 4 ಅಂತಸ್ತಿನ ಭವ್ಯ ಕುಲಾಲ ಭವನ 62 ಸೆಂಟ್ಸ್ ವಿಸ್ತೀರ್ಣದ ಜಮೀನಿನಲ್ಲಿ ನಿರ್ಮಾಣ ವಾಗುತ್ತಿದೆ, ಈ ಭವನದಲ್ಲಿ ಸುಮಾರು 1000ಕ್ಕೂ ಮಿಕ್ಕಿ ಜನ ಕುಳಿತುಕೊಳ್ಳುವ ಆಧುನಿಕ ಸೌಕರ್ಯವಿರುವ ಸುಮಿತ್ರ ರಾಜು ಸಾಲ್ಯಾನ್  ಆಡಿಟೋರಿಯಂ, ಯಶೋದಾ ಬಾಬು ಸಾಲಿಯಾನ್ ವೇದಿಕೆ, ಭವನದ ನಾಲ್ಕನೇ ಅಂತಸ್ತಿನಲ್ಲಿ ನಮೃತ ಜಗದೀಶ್ ಬಂಜನ್ ಬ್ಯಾಂಕ್ವೆಟ್ ಹಾಲ್, ಪಿಕೆ ಸಾಲ್ಯಾನ್ ವೇದಿಕೆ, ಈ ಭವ್ಯ ಕುಲಾಲ ಭವನದ ಸಂಕಿರಣದ ಹಿಂದೆ ಕಿರು ಸಭಾಂಗಣ ಮತ್ತು ವಿದ್ಯಾರ್ಥಿ ವಸತಿ  ಗೃಹಗಳಿದೆ, ಈ ಬೃಹತ್ ಯೋಜನೆ 2024 ಪೂರ್ಣಗೊಳ್ಳಬೇಕೆಂದು ಸಂಘಟ ಆಡಳಿತ ಮಂಡಳಿ ಆರ್ಥಿಕ ಸಂಪನ್ಮೂಲವನ್ನು ಕ್ರೋಡೀಕರಿಸುವಲ್ಲಿ ಶ್ರಮಿಸುತ್ತಿದೆ, ಈ ಯೋಜನೆಗೆ ಸಮಾಜ ಬಾಂಧವರು,  ಹಿತೈಷಿಗಳು  ದೇಣಿಗೆ ಅಥವಾ ಠೇವನಿ ರೂಪದಲ್ಲಿ ಸ್ವೀಕರಿಸಲಾಗುವುದು,  ಈ ದೇಣಿಗೆ ಆದಾಯ ತೆರಿಗೆ ಕಾಯ್ದೆಯ 80 ಜಿ ಪ್ರಕಾರ  ರಿಯಾಯಿತಿಗೆ ಅರ್ಹವಾಗುತ್ತದೆ.




ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top