ಮಾ.03: ಎಂ.ಸಿ.ಸಿ. ಬ್ಯಾಂಕಿನ ಬ್ರಹ್ಮಾವರ ಶಾಖೆ ಉದ್ಘಾಟನೆ

Upayuktha
0



ಬ್ರಹ್ಮಾವರ : ಎಂ.ಸಿ.ಸಿ. ಬ್ಯಾಂಕಿನ 17ನೇ ಹೊಸ ಬ್ರಹ್ಮಾವರ ಶಾಖೆಯ ಉದ್ಘಾಟನೆ ಕಾರ್ಯಕ್ರಮವು ಮಾರ್ಚ್ 3 ರಂದು ಭಾನುವಾರ ಬೆಳಿಗ್ಗೆ 11.15 ಗಂಟೆಗೆ ನೆಲಮಹಡಿ, ಶೇಷಗೋಪಿ ಪ್ಯಾರಡೈಸ್, ರಾ.ಹೆ.66, ಆಕಾಶವಾಣಿ ವೃತ್ತದ ಬಳಿ, ಮಿನಿವಿಧಾನಸೌಧದ ಹತ್ತಿರ, ವಾರಂಬಳ್ಳಿ, ಬ್ರಹ್ಮಾವರದಲ್ಲಿ ನಡೆಯಲಿದೆ. 

ಶಾಖೆಯನ್ನು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಉದ್ಘಾಟಿಸಲಿದ್ದಾರೆ. ಎಂಸಿಸಿ ಬ್ಯಾಂಕ್ ಮಂಗಳೂರು ಅಧ್ಯಕ್ಷ, ಸಹಕಾರ ರತ್ನ ಅನಿಲ್ ಲೋಬೋ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಬ್ರಹ್ಮಾವರದ ಹೋಲಿ ಫ್ಯಾಮಿಲಿ ಚರ್ಚ್ ನ ಧರ್ಮಗುರು ರೆ| ಫಾ| ಜಾನ್‌ ಫೆರ್ನಾಂಡಿಸ್‌ ಆಶೀರ್ವಚನ ನೀಡಲಿದ್ದಾರೆ.


ಭದ್ರತಾ ಕೊಠಡಿಯನ್ನು ಬ್ರಹ್ಮಾವರದ ಎಸ್‌ಎಂಓಎಸ್ ಕ್ಯಾಥೆಡ್ರಲ್‌ನ ವಿಕಾರ್ ಜನರಲ್ ರೆ| ಫಾ| ಎಂ.ಸಿ ಮಥಾಯಿ ಉದ್ಘಾಟಿಸಲಿದ್ದಾರೆ.


ಗೌರವ ಅತಿಥಿಗಳಾಗಿ ಉಡುಪಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ರೆ| ಫಾ| ಡೆನಿಸ್ ಡೆಸಾ, ಉಡುಪಿ ಜಿಲ್ಲಾ ಹೆಚ್ಚುವರಿ ಎಸ್‌ಪಿ ಪಿ.ಎ ಹೆಗ್ಡೆ, ಜಿಲ್ಲಾ ಸಹಕಾರ ಸಂಘಗಳ ನಿಬಂಧಕ ಹೆಚ್‌.ಎನ್ ರಮೇಶ್, ವಾರಂಬಳ್ಳಿ ಗ್ರಾ.ಪಂ ಅಧ್ಯಕ್ಷ ನಿತ್ಯಾನಂದ ಬಿ.ಆರ್, ಜಿಲ್ಲಾ ವಕ್ಫ್‌ ಬೋರ್ಡ್ ನಿಕಟ ಪೂರ್ವ ಅಧ್ಯಕ್ಷ ಜನಾಬ್ ಕೆ.ಪಿ ಇಬ್ರಾಹಿಂ ಅವರು ಪಾಲ್ಗೊಳ್ಳಲಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  



Post a Comment

0 Comments
Post a Comment (0)
To Top