ಅಂತರ್ ವಿ.ವಿ ಯುವಜನೋತ್ಸವ ರಂಗಭೂಮಿ ಸ್ಪರ್ಧೆಯಲ್ಲಿ ಮಂಗಳೂರು ವಿ.ವಿ.ಗೆ ಸಮಗ್ರ ಪ್ರಶಸ್ತಿ

Upayuktha
0

ಮಂಗಳೂರು: ಮೈಸೂರಿನ ಜೆ.ಎಸ್.ಎಸ್. ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದಲ್ಲಿ ನಡೆದ ದಕ್ಷಿಣ ಪೂರ್ವ ವಲಯ ಅಂತರ್ ವಿಶ್ವವಿದ್ಯಾನಿಲಯ ಯುವಜನೋತ್ಸವದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ತಂಡವು ಭಾಗವಹಿಸಿ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. 


ಗೋವಿಂದ ದಾಸ ಕಾಲೇಜಿನ ಕಿರು ಪ್ರಹಸನ ತಂಡವು ಪ್ರಥಮ ಸ್ಥಾನವನ್ನು ಪಡೆದು ರಾಷ್ಟ್ರಮಟ್ಟದ ಯುವಜನೋತ್ಸವದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಲಿದೆ.  ಚರ್ಮವಾದ್ಯ ಸ್ಪರ್ಧೆಯಲ್ಲಿ ಮತ್ತು ಇನ್ಸ್ಟ್‌ಲೇಷನ್ ಸ್ಪರ್ಧೆಯಲ್ಲಿ 5ನೇ ಸ್ಥಾನ ಪಡೆದಿರುತ್ತಾರೆ. ತಂಡದಲ್ಲಿ ಅರುಣ್ ಗಣೇಶ್ ಭಟ್, ಭರತ್, ಪ್ರೀತೇಶ್, ಮನೀಶ್ ಬಿ., ಹಿಮಾಂಗಿ ಡಿ. ಉಳ್ಳಾಲ್, ಜಿತೀನ್ ಜೆ. ಶೆಟ್ಟಿ, ಸಂಪತ್ ಎಸ್.ಬಿ., ನಿರ್ಮಿಕಾ ಎನ್. ಸುವರ್ಣ, ಸೈನಾಕುಮಾರ್, ವೈಭವಿ, ಮಹಾಂತೇಶ್ ಬಿ.  ಭಾಗವಹಿಸಿದ್ದರು. ತಂಡದ ವ್ಯವಸ್ಥಾಪಕರಾಗಿ ಪುನೀತಾ ಆರ್. ಮತ್ತು ರವಿಚಂದ್ರ ಸಹಕರಿಸಿದರು. 


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top