'ಝೇಂಕಾರ'ದಲ್ಲಿ ಮಧುರ ಸಂಗೀತಸ್ವರ ದರ್ಬಾರು

Upayuktha
0


ಉಜಿರೆ
 : ಅಲ್ಲಿ ಹಾಡುಗಳದ್ದೇ ಮಧುರ ದರ್ಬಾರು. ತರುಣರನ್ನು ಸೆಳೆವ ಸಂಗೀತ ಕಲರವ. ಮನರಂಜನೆಯ ವೈಭವವದ ಮೆರಗು. ಕನ್ನಡ, ಹಿಂದಿ, ಮಲಯಾಳಂ ಗೀತೆಗಳ ಸಂಚಲನ. ಇದು ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ರಾಷ್ಟ್ರೀಯ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಉತ್ಸವ 'ಝೇಂಕಾರ'ದ ಸೀಸನ್ ಐದರ ಆವೃತ್ತಿಯ ಮೊದಲ ದಿನದ ಸಾಂಸ್ಕೃತಿಕ ಕಾರ್ಯಕ್ರಮದ ಚಿತ್ರಣ. 'ಸ್ವರಾಹ' ಮ್ಯೂಸಿಕಲ್ ತಂಡದವರು ಹೊಮ್ಮಿಸಿದ್ದ ಸಂಗೀತ ನಿನಾದದ ಅಲೆಗಳು ವಿದ್ಯಾರ್ಥಿ ಸಮೂಹವನ್ನು ಸೆಳೆದವು. 




'ಚಂದ್ರ ಚೂಡ ಶಿವ ಶಂಕರ ಪಾರ್ವತಿ ರಮಣಾ ನಿನಗೆ ನಮೋ ನಮೋ' ಎಂಬ ಭಕ್ತಿ ಗೀತೆಯ ಮೂಲಕ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಕನ್ನಡವನ್ನು ಹೊರತು ಪಡಿಸಿಯೂ ಹಲವಾರು ಗೀತೆಗಳು ತಲೆದೂಗುವಂತಿದ್ದವು. 'ಅಭೀ ಮುಝಮೇ ಕಭೀ.....' ಎಂಬ ಹಿಂದೀ ಹಾಡು ಎಲ್ಲರನ್ನು ಮಂತ್ರ ಮುಗ್ಧರನ್ನಾಗಿಸಿತು. ಕನ್ನಡದ 'ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು', 'ಸಂತೋಷಕ್ಕೆ ಹಾಡು ಸಂತೋಷಕ್ಕೆ ಕುಣಿದು ತಾಳಕ್ಕೆ ಕುಣಿದು' ಎನ್ನುತ್ತಾ  ಜನರನ್ನು ಕುಣಿದು ಕುಪ್ಪಳಿಸುವಂತಾಗಿಸಿತು.  




'ಯಾರೆ ನೀನು ರೋಜಾ ಹೂವೆ, ಯಾರೆ ನೀನು ಮಲ್ಲಿಗೆ ಹೂವೆ', 'ಉರ್ವಷಿ, ಊರ್ವಷಿ ಟೇಕಿಟ್ ಈಜಿ ಊರ್ವಷಿ', 'ಪಾವಿರವರೆಯೆ' ಎಂಬ ಮಲಯಾಳಂ ಹಾಡುಗಳು ಉತ್ತಮವಾಗಿದ್ದವು.  ಗಾಯಕರಾದ ಸುನಿಧಿ ಗಣೇಶ್ ಹಾಗೂ ರಘು ಅವರಿಗೆ  ಗಿಟಾರಿನಲ್ಲಿ ವಿವೇಕ್ ಕಿರಣ್, ಜೋಶ್ವು ಆಶಿಶ್, ಡಮ್ಸ್ನಲ್ಲಿ ಸಾತ್ವಿಕ್ ರಾಘವೇಂದ್ರ, ಕೀ ಬೋರ್ಡನಲ್ಲಿ  ಅಶ್ವಿನ ಮಂಡೋವ್ ತಾನ್ಕಿ ಭಟ್ಟ ಸಾಥ್ ನೀಡಿದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  







Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top