ಕ್ಯಾ. ಬೃಜೇಶ್ ಚೌಟ ಅಭ್ಯರ್ಥಿಯಾಗಿದ್ದು ಸ್ವಾಗತಾರ್ಹ: ಸಂಸದ ನಳಿನ್

Upayuktha
0

ನಾನು ಪಕ್ಷದ ಕಟ್ಟಾಳು, ಹಿರಿಯರ ನಿರ್ಧಾರಕ್ಕೆ ಸ್ವಾಗತ: ಸಿಹಿ ತಿನಿಸಿ ಸಂಭ್ರಮಿಸಿದ ನಳಿನ್


ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನಾಗಿ ಪಕ್ಷದ ಹೈಕಮಾಂಡ್ ಯುವಕ, ಮಾಜಿ ಸೇನಾನಿ ಕ್ಯಾಪ್ಟನ್ ಬೃಜೇಶ್ ಚೌಟ ಅವರನ್ನು ಆಯ್ಕೆ ಮಾಡಿದ್ದು ಖುಷಿ ಇದೆ. ಪಕ್ಷದ ರಾಷ್ಟ್ರೀಯ ನಾಯಕರ ಈ ನಿರ್ಧಾರವನ್ನು ಸಂತೋಷದಿಂದ ಸ್ವಾಗತಿಸುವೆ. ಚೌಟ ಅವರನ್ನು ಅಭಿನಂದಿಸುವುದಾಗಿ ಸಂಸದ ನಳಿನ್ ಕುಮಾರ್ ಕಟೀಲ್ ಬುಧವಾರ ಮಾಧ್ಯಮಗಳಿಗೆ ತಿಳಿಸಿದರು.


ಕ್ಯಾ. ಬೃಜೇಶ್ ಚೌಟ ಅವರನ್ನು ಅಧಿಕೃತ ಅಭ್ಯರ್ಥಿ ಎಂದು ಪಕ್ಷವು ಘೋಷಣೆ ಮಾಡಿದ ಕೂಡಲೇ ಅವರಿಗೆ ಸಿಹಿ ತಿನಿಸಿ ಶುಭಾಶಯಗಳನ್ನು ಕೋರಿದರು. 15 ವರ್ಷಗಳಿಂದ ಕಾರ್ಯಕರ್ತರು ನನಗೆ ಆಶೀರ್ವಾದ ಮಾಡಿದ್ದಾರೆ. 1 ಲಕ್ಷ ಕೋಟಿ ರೂ.ಗಳ ಅನುದಾನವನ್ನು ಪಕ್ಷದ ಹಿರಿಯರು, ಸಂಘದ ಹಿರಿಯರು ಮಾರ್ಗದರ್ಶನದಲ್ಲಿ ಕ್ಷೇತ್ರದ ಅಭಿವೃದ್ಧಿಗೆ ತಂದಿದ್ದೇನೆ. ಪಕ್ಷದಲ್ಲಿ ಯುವಕರಿಗೆ ಸ್ಥಾನ ಕೊಡಬೇಕು ಎಂಬ ಉದ್ದೇಶದಿಂದ ಪಕ್ಷವು ತೆಗೆದುಕೊಂಡಿರುವ ನಿರ್ಧಾರ ಸೂಕ್ತವಾಗಿದೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷನ್ನಾಗಿ ಮಾಡುವ ಮೂಲಕ ದೊಡ್ಡ ಜವಾಬ್ದಾರಿಯನ್ನು ಬಿಜೆಪಿ ನನಗೆ ನೀಡಿತ್ತು. ಕಾರ್ಯಕರ್ತರು ಕ್ಷೇತ್ರದ ಜನ ಸಂಪೂರ್ಣ ಸಹಕಾರಿ ನೀಡಿದ್ದಾರೆ. ಎಲ್ಲರಿಗೂ ನಾನು ಅಭಿನಂದಿಸುವೆ. ಪ್ರಧಾನಿ ಮೋದಿ ಅವರ ಅಧಿಕಾರ ಅವಧಿಯಲ್ಲಿ ಎಲ್ಲವೂ ಕ್ಷೇತ್ರಕ್ಕೆ ಸಿಕ್ಕಿದೆ. 15 ವರ್ಷಗಳ ದೀರ್ಘ ಕಾಲ ಸಂಸದನಾಗಿ ಮಾಡಿದ ಸೇವೆ ಖುಷಿ ನೀಡಿದೆ ಎಂದು ನಳಿನ್ ತಿಳಿಸಿದರು.


ನಾನು ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಬೆಳದು ಬಂದವನು, ಜವಾಬ್ದಾರಿಯಿಂದ ಕೆಲಸ ಮಾಡಿದ್ದೇನೆ. ಪಕ್ಷ ಏನು ಹೇಳುವುದೋ ಅದನ್ನು ನಾನು ಮಾಡುವೆ, ಸಮರ್ಥ ಅಭ್ಯರ್ಥಿಯನ್ನು ನೇಮಕ ಮಾಡಿದ್ದು, ಚೌಟ ಯುವಕ, ಸೇನೆಯಲ್ಲಿ ಇದ್ದವರು, ಅವರನ್ನು ಹೆಚ್ಚು ಮತಗಳಿಂದ ಆಯ್ಕೆ ಮಾಡಬೇಕು. ನನಗೆ ನೀಡಿದ ಸಹಕಾರವನ್ನು ಎಲ್ಲರೂ ನೀಡಬೇಕು. ಜಿಲ್ಲೆಯಲ್ಲಿ ಪಕ್ಷವನ್ನು ಗೆಲ್ಲಿಸುವುದಕ್ಕೆ ಶ್ರಮಿಸುವೆ. ಪಕ್ಷದ ಕೆಲಸ ಮಾಡಲು ಜನ ಬೇಕು ಹಾಗಾಗಿ ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ನಾನು ಪಕ್ಷದ ಕಟ್ಟಾಳು, ಹುದ್ದೆ ಶಾಶ್ವತವಲ್ಲ, ಕಾರ್ಯಕರ್ತನಾಗಿ ಇರುವುದು ಶಾಶ್ವತ, 6 ತಿಂಗಳ ಹಿಂದೆಯೇ ಹಿರಿಯರು ಕೇಳಿದಾಗ ಬದಲಾವಣೆ ಮಾಡುವುದಕ್ಕೆ ಯಾವುದೇ ವಿರೋಧ ಇಲ್ಲ ಎಂದು ಹೇಳಿದ್ದೆ ಎಂದರು.


ಮಾಜಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡುಬಿದಿರೆ, ಲೋಕಸಭೆ ಅಭ್ಯರ್ಥಿ ಕ್ಯಾ. ಬೃಜೇಶ್ ಚೌಟ ಸೇರಿದಂತೆ ಹಲವು ಮುಖಂಡರು ಈ ಸಂದರ್ಭದಲ್ಲಿ ಜತೆಗಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top