ದೇವಸ್ಥಾನ ಇನ್ನಷ್ಟು ಸುಂದರಮಯವಾಗಲಿ: ಮಾಣಿಲ ಶ್ರೀ
ಮಂಗಳೂರು: ಕ್ಷೇತ್ರವನ್ನು ಮಳೆ ಬಿಸಿಲಿನಿಂದ ರಕ್ಷಿಸಲು, ಧ್ಯಾನ ಮತ್ತು ಶುಭ ಕಾರ್ಯಗಳು ನಡೆಯುವುದಕ್ಕೆೆ ಅನುಕೂಲವಾಗುವುದಕ್ಕಾಗಿ ದೇವಾಲಯದ ಸುತ್ತಲೂ ಮೇಲ್ಛಾವಣಿ ಅಗತ್ಯವಾಗಿದೆ. ಅದನ್ನು ಮನಗಂಡು ಕೈಗೆತ್ತಿಕೊಂಡಿರುವ ಈ ಯೋಜನೆಯಿಂದಾಗಿ ಕ್ಷೇತ್ರ ಇನ್ನಷ್ಟು ಸುಂದರಮಯವಾಗಲಿದೆ ಎಂದು ಶ್ರೀಮಾಣಿಲ ಶ್ರೀಧಾಮದ ಮೋಹನದಾಸ ಸ್ವಾಮೀಜಿ ಅವರು ನುಡಿದರು.
ಮಂಗಳೂರಿನ ಕುಲಶೇಖರದ ಶ್ರೀ ವೀರನಾರಾಯಣ ದೇವಸ್ಥಾನದ ಅಂಗಣ ಸುಮಾರು 60 ಲಕ್ಷ ರೂಪಾಯಿ ಅಂದಾಜು ವೆಚ್ಚದಲ್ಲಿ ಮೇಲ್ಛಾವಣಿ ನಿರ್ಮಾಣಕ್ಕಾಗಿ ನಡೆದ ಗುದ್ದಲಿ ಪೂಜೆಯನ್ನು ಶುಕ್ರವಾರ ನೆರವೇರಿಸಿ ಅವರು ಆಶೀರ್ವಚನ ನೀಡಿದರು.
ಶ್ರೀ ಕ್ಷೇತ್ರದ ತಂತ್ರಿಗಳಾದ ಅನಂತ ಉಪಾಧ್ಯಾಯರ ಮತ್ತು ಶ್ರೀಹರಿ ಉಪಾಧ್ಯಾಯರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಆಡಳಿತ ಮೊಕ್ತೇಸರರಾದ ಪುರುಷೋತ್ತಮ ಕುಲಾಲ್ ಕಲ್ಬಾವಿ, ದ.ಕ. ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಮಾತೃ ಸಂಘದ ಅಧ್ಯಕ್ಷರಾದ ಮಯೂರ್ ಉಳ್ಳಾಲ್, ಮುಂಬೈಯ ದಾನಿ ದೇವಕಿ ಸುನಿಲ್ ಸಾಲಿಯನ್, ಡಾ. ಸುರೇಖಾ ರತನ್ ಕುಲಾಲ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಎ ದಾಮೋದರ್, ಸೇವಾ ಟ್ರಸ್ಟ್‌ನ ಅಧ್ಯಕ್ಷ ಪ್ರೇಮಾನಂದ ಕುಲಾಲ್ ಕೋಡಿಕಲ್, ಸೇವಾ ಸಮಿತಿಯ ಅಧ್ಯಕ್ಷ ಕೆ. ಸುಂದರ ಕುಲಾಲ್ ಶಕ್ತಿನಗರ, ಮಹಿಳಾ ಮಂಡಳಿಯ ಅಧ್ಯಕ್ಷ ಗೀತಾ ಮನೋಜ್ ಮರೋಳಿ, ನ್ಯಾ. ರವೀಂದ್ರ ಮುನ್ನಿಪಾಡಿ, ಸುರೇಶ್ ಕುಲಾಲ್ ಮಂಗಳಾದೇವಿ, ಗಿರಿಧರ್ ಜೆ ಮೂಲ್ಯ, ಕಸ್ತೂರಿ ಪಂಜ, ರೂಪ ಬಂಗೇರ, ಕುಂಬಾರ ಗುಡಿ ಕೈಗಾರಿಕಾ ಸಹಕಾರಿ ಸಂಘ ಪುತ್ತೂರು ಅಧ್ಯಕ್ಷ ಭಾಸ್ಕರ್ ಪೆರುವಾಯಿ, ಎಂ.ಪಿ ಬಂಗೇರ, ಸದಾಶಿವ ಕುಲಾಲ್, ರಾಮ್ ಪ್ರಸಾದ್, ಪ್ರವೀಣ್ ಬಸ್ತಿ, ಉದಯಾನಂದ, ದಿನೇಶ್ ಕುಲಾಲ್ ಮುಂಬಯಿ, ಗಂಗಾಧರ್ ಬಂಜನ್, ಅನಿಲ್ ದಾಸ್, ನಾಗರಾಜ್ ಸುರತ್ಕಲ್, ಕಾರ್ಪೊರೇಟರ್ ಗಣೇಶ್ ಕುಲಾಲ್, ಆನಂದ ಉರ್ವ, ಮೋಹನ ದಾಸ್ ಅಲಪೆ, ಧೂಮಪ್ಪ ಮಂದಾರಬೈಲು, ವಿಶ್ವನಾಥ್ ಬಂಗೇರ, ನಾಗವೇಣಿ, ಚಂದ್ರಪ್ರಭ, ಸಿವಿಲ್ ಗುತ್ತಿಗೆದಾರ ಹೊನ್ನಪ್ಪ ಕುಲಾಲ್, ಸುರೇಶ್ ಕುಲಾಲ್ ಮುಂಬೈ, ವಿಶ್ವನಾಥ್ ವಾಮಂಜೂರು, ಸದಾಶಿವ ಬಿಜೈ, ವಿನಯ್ ಕುಮಾರ್ ಮತ್ತಿತರ ಗಣ್ಯರು, ಭಕ್ತರು ಪಾಲ್ಗೊಂಡಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ