ಕೋಟೂರು: 2023- 24 ನೇ ಸಾಲಿನ ಕಾಸರಗೋಡು ಜಿಲ್ಲಾ ಕೈಗಾರಿಕಾ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಜಿಲ್ಲೆಯ ಅತ್ಯುತ್ತಮ ಉತ್ಪಾದನಾ ಉದ್ಯಮ – ಮೈಕ್ರೋ ವಿಭಾಗದಲ್ಲಿ ಕಾಸರಗೋಡು ಸ್ಕಂದ ಪ್ಲಾಸ್ಟಿಕ್ ಇಂಡಸ್ಟ್ರೀಸ್ ಮಾಲಿಕ ಕೆ.ಪಿ. ಮುರಳಿಕೃಷ್ಣ ಪೆರಡಂಜಿ ಆಯ್ಕೆಯಾಗಿ ಪ್ರಶಸ್ತಿಯನ್ನು ಪಡೆದ ಹಿನ್ನೆಲೆಯಲ್ಲಿ ಇವರನ್ನು ಯಕ್ಷತೂಣೀರ ಸಂಪ್ರತಿಷ್ಥಾನ ಕೋಟೂರು ಇದರ ವತಿಯಿಂದ ಶಾಲು ಹೊದೆಸಿ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಉದ್ಯಮದಾರಂಭದಿಂದ ಯಶಸ್ವಿಗೆ ಅವಿರತವಾಗಿ ಸಹಕರಿಸಿದ ಹರಿಕೃಷ್ಣ ಪೆರಡಂಜಿ ಅವರನ್ನು ಶಾಲು ಹೊದೆಸಿ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.
ಮುರಳಿಕೃಷ್ಣ ಪೆರಡಂಜಿ, ಹರಿಕೃಷ್ಣ ಪೆರಡಂಜಿ ಇವರು ಸಾಧನಾ ವರ್ಷಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸುಬ್ರಹ್ಮಣ್ಯ ಭಟ್ ಅಡ್ಕ ಅಧ್ಯಕ್ಷ ಸ್ಥಾನ ವಹಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗೋವಿಂದ ಬಳ್ಳಮೂಲೆ, ಶಿವಕುಮಾರ್ ಅಡ್ಕ, ರಾಘವೇಂದ್ರ ಉಡುಪುಮೂಲೆ, ಅನುಪಮಾ ರಾಘವೇಂದ್ರ ಉಡುಪುಮೂಲೆ, ಇವರು ಸಾಂದರ್ಭಿಕ ಮಾತುಗಳನ್ನಾಡಿದರು.
ಕಾರ್ಯದರ್ಶಿ ಮುರಳಿಸ್ಕಂದ ಸ್ವಾಗತಿಸಿ, ಕೃಷ್ಣ ಭಟ್ ಅಡ್ಕ ಧನ್ಯವಾದವಿತ್ತರು. ಯಕ್ಷತೂಣೀರದ ಸದಸ್ಯರು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ