ಉಡುಪಿ ಸಾರಿಗೆ ಅಧಿಕಾರಿ ರವಿಶಂಕರ ಪಿ. ಅವರ ಬೀಳ್ಕೊಡುಗೆ ಸಮಾರಂಭ

Upayuktha
0


ಉಡುಪಿ: ಸುಮಾರು 32 ವರ್ಷ ಸುದೀರ್ಘವಾಗಿ ಸಾರಿಗೆ ಇಲಾಖೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ರವಿಶಂಕರ ಪಿ. ಅವರ ಬೀಳ್ಕೊಡುಗೆ ಸಮಾರಂಭ ಇತ್ತೀಚೆಗೆ ಜಿಲ್ಲಾ ಪ್ರಾದೇಶಿಕ ಸಾರಿಗೆ ಕಚೇರಿಯ ಆವರಣದಲ್ಲಿ ಸಾರಿಗೆ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾಯಿತು. .


ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಸರಕಾರಿ ನೌಕರರ ಜೀವನದಲ್ಲಿ ನಿವೃತ್ತಿಯು ಒಂದು ಅನಿವಾರ್ಯ ಕಾಲಘಟ್ಟ, ದೇವರ ದಯೆಯಿಂದ ಯಾವ ಕಪ್ಪು ಚುಕ್ಕೆ ಇಲ್ಲದೇ ನಿವೃತ್ತಿ ಹೊಂದಿರುವುದು ಸಂತಸದ ವಿಚಾರವಾಗಿದೆ ಎಂದರು.


ಹಿರಿಯ ಅಧಿಕಾರಿಗಳ ಸೂಕ್ತ ಹಾಗೂ ಸಮಯೋಚಿತ ಮಾರ್ಗದರ್ಶನ, ನನ್ನ ಮೇಲೆ ಇಟ್ಟ ಪ್ರೀತಿ ಮತ್ತು ನಂಬಿಕೆಗಳು ಒಟ್ಟಾರೆ ಸಿಂಹಾವಲೋಕನ ಮಾಡಿದಾಗ ನಾನು ಸಾಗಿದ ಹಾದಿಯಲ್ಲಿ ತೃಪ್ತಿಯನ್ನು ಕಂಡುಕೊಂಡಿದ್ದೇನೆ. ನೆಮ್ಮದಿಯ ಬದುಕನ್ನು ಕಟ್ಟಿಕೊಂಡಿದ್ದೇನೆ ಎಂದ ಅವರು, ಸಹೋದ್ಯೋಗಿಗಳು ಸಹಕಾರದಿಂದಾಗಿ ಕೆಲಸವನ್ನು ಸುಗಮವಾಗಿ ನಿರ್ವಹಿಸಲು ಸಾಧ್ಯವಾಯಿತು ಎಂದರು.

 

ಶಿವಮೊಗ್ಗ ವಿಭಾಗ ಜಂಟಿ ಸಾರಿಗೆ ಆಯುಕ್ತ ಕೆ.ಟಿ.ಹಾಲಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.  

 

ಕಾರ್ಯಕ್ರಮದಲ್ಲಿ ಡಾ ಕೃಷ್ಣಪ್ರಸಾದ, ಡಾ ವಿಜಯೇಂದ್ರ, ಕಿಶನ್ ಹೆಗ್ಡೆ, ಮಂಗಳೂರು ಕಛೇರಿಯ ಮುಖ್ಯಸ್ಥ ಶ್ರೀಧರ ಮಲ್ಲಾಡ, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ದಿನಕರ ಶೆಟ್ಟಿ ಅಂಪಾರು, ವಕೀಲ ಸಂತೋಷ ಐತಾಳ, ಪತ್ರಕರ್ತ ರಾಮಕೃಷ್ಣ ಹೇರಳೆ, ಟೂರಿಸ್ಟ್ ಟ್ಯಾಕ್ಸಿ ಮಾಲಕರ ಸಂಘದ ಅಧ್ಯಕ್ಷ ರಮೇಶ ಕೋಟ್ಯಾನ್, ಅಧೀಕ್ಷಕ ಪಮಿತಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು. 


ಸಂತೋಷ ಶೆಟ್ಟಿ, ಹಿಮೋವಾನಿ ಕಾರ್ಯಕ್ರಮ ನಿರೂಪಿಸಿದರು.

 

ಇದೇ ಸಂದರ್ಭದಲ್ಲಿ ಹೊನ್ನಾವರದ ಸ.ಪ್ರಾ.ಸಾ.ಅ, ಎಲ್.ಪಿ.ನಾಯಕ್ ಅವರು ಜಿಲ್ಲಾ ಪ್ರಾದೇಶಿಕ ಅಧಿಕಾರಿಯಾಗಿ ಹೆಚ್ಚುವರಿ ಪ್ರಭಾರವನ್ನು ವಹಿಸಿಕೊಂಡರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top