ಟ್ವಿಟ್ಟರ್ ‌ನಲ್ಲಿ ನಳಿನ್ ಪರ ನಕಲಿ ಹ್ಯಾಶ್‌ಟ್ಯಾಗ್ ಟ್ರೆಂಡಿಂಗ್‌: ಹೆಸರು ಕೆಡಿಸುವ ಸಂಚು

Upayuktha
0





ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ನಳಿನ್ ಕುಮಾರ್ ಕಟೀಲ್ ಎಂದು ಅರ್ಥ ಬರುವ ರೀತಿಯಲ್ಲಿ, ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ (ಹಿಂದಿನ ಟ್ವಿಟರ್) ಕೃತಕವಾಗಿ ಟ್ರೆಂಡಿಂಗ್ ಆಗುವಂತೆ ಕೆಲವು ನಕಲಿ ಖಾತೆಗಳು ಪೋಸ್ಟ್‌ಗಳನ್ನು ಹರಿಯ ಬಿಡುತ್ತಿವೆ.


ವಾಸ್ತವದಲ್ಲಿ ಬಿಜೆಪಿಯಿಂದ ಅಥವಾ ನಳಿನ್ ಕುಮಾರ್ ಕಟೀಲ್ ಅವರ ಬೆಂಬಲಿಗರು, ಅಭಿಮಾನಿಗಳ ಕಡೆಯಿಂದಾಗಲಿ ಈ ರೀತಿಯ ಪೋಸ್ಟ್‌ಗಳನ್ನು ಯಾರೂ ಹಾಕಿಲ್ಲ. ಪಾಯಲ್ ಪಾಲ್, ಧಿವ್‌ ಜಿ ಪಟೇಲ್, ಅದಿತಿ ಅಗರ್ವಾಲ್‌, ರಶೀದ್ ಖಾನ್, ಕ್ಯೂಟಿ ಪೈ, - ಈ ರೀತಿಯ ಹೆಸರುಗಳನ್ನು ಹೊಂದಿರುವ ನಕಲಿ ಖಾತೆಗಳಿಂದ ನಳಿನ್ ಕುಮಾರ್ ಕಟೀಲ್‌ ಅವರ ಪರವಾಗಿರುವಂತೆ ಭ್ರಮೆ ಹುಟ್ಟಿಸುವ ಪೋಸ್ಟ್‌ಗಳನ್ನು ಹರಿಯಬಿಡಲಾಗುತ್ತಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.


ಇವೆಲ್ಲವೂ ಪೇಯ್ಡ್‌ ಪೋಸ್ಟ್‌ಗಳಾಗಿದ್ದು, ಹಣಕೊಟ್ಟು ನಡೆಸುವ ಟ್ರೆಂಡಿಂಗ್‌ಗಳಾಗಿವೆ. ಅಲ್ಲದೆ ಈ ಪೋಸ್ಟ್‌ಗಳನ್ನು ಹಾಕುತ್ತಿರುವ ಯಾರೊಬ್ಬರೂ ಕನ್ನಡಿಗರೂ ಅಲ್ಲ, ದಕ್ಷಿಣ ಕನ್ನಡದವರೂ ಅಲ್ಲ. ಎಲ್ಲ ಹೆಸರುಗಳು ಉತ್ತರ ಭಾರತದವರ ಹೆಸರುಗಳಂತೆ ಇವೆ. ಮೇಲ್ನೋಟಕ್ಕೇ ಇವೆಲ್ಲ ನಕಲಿ ಪೋಸ್ಟ್‌ಗಳು ಮತ್ತು #NalinKumarForDakshinaKannada ಎಂಬುದು ನಕಲಿ ಹ್ಯಾಶ್‌ಟ್ಯಾಗ್‌ ಆಗಿದ್ದು ಸಂಸದರ ಮತ್ತು ಪಕ್ಷದ ಹೆಸರು ಕೆಡಿಸುವ ಸಂಚಿನ ಭಾಗವಾಗಿದೆ ಎಂದು ಪಕ್ಷದ ಮೂಲಗಳು ಸ್ಪಷ್ಟಪಡಿಸಿವೆ.


Post a Comment

0 Comments
Post a Comment (0)
To Top