ಮಂಗಳೂರು: ಅರುಣ್ ಪುತ್ತಿಲ ಸೇರಿದಂತೆ ಯಾರೇ ಆಗಿದ್ದರೂ ಬಿಜೆಪಿಯ ಸಿದ್ಧಾಂತ ಹಾಗೂ ರಾಷ್ಟ್ರೀಯ ಪಕ್ಷದ ವ್ಯವಸ್ಥೆಯನ್ನು ಒಪ್ಪಿ ಬರುವವರಿಗೆ ಮುಕ್ತ ಅವಕಾಶವಿದೆ ಎಂದು ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಹೇಳಿದರು.
ಅವರು, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯಾಲಯ ಕೊಡಿಯಾಲ್‌ಬೈಲ್‌ನ ಜಗನ್ನಾಥರಾವ್ ಜೋಷಿ ಸೌಧದಲ್ಲಿ ಇಂದು (ಮಾ.2) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ದೇಶದ ಇವತ್ತಿನ ಪರಿಸ್ಥಿತಿಯನ್ನು ಗಮನದಲ್ಲಿರಿಸಿ ರಾಷ್ಟ್ರೀಯ ಅಧ್ಯಕ್ಷರು ಜೆ.ಪಿ. ನಡ್ಡಾ ಹಾಗೂ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಜನಸಾಮಾನ್ಯರು ಕೂಡಾ ಬಿಜೆಪಿಗೆ ಬರಬೇಕು ಎಂದು ಕರೆನೀಡಿದ್ದಾರೆ. ಹೀಗಿರುವಾಗ ನಮ್ಮ ಜಿಲ್ಲೆಯವರಾದ. ಅರುಣ್ ಪುತ್ತಿಲ ಮತ್ತು ಇತರರು ಬಿಜೆಪಿ ಸೇರುವ ಬಗ್ಗೆ ವಿಶೇಷವಾದ ಚರ್ಚೆ ನಡೆಯುತ್ತಿದೆ. ಅವರು ಬಿಜೆಪಿ ಸೇರ್ಪಡೆಗೆ ಈಗಲೂ, ಮುಕ್ತವಾಗಿ ಆಹ್ವಾನವನ್ನು ನೀಡುತ್ತಿದ್ದೇನೆ. ಸಾಮಾಜಿಕ ಜಾಲತಾಣಗಳಲ್ಲಿ ಅರುಣ್ ಪುತ್ತಿಲ ಅವರ ಕರೆಗೆ ನಾವು ಸ್ಚಂದನೆ ನೀಡಲಿಲ್ಲ.; ಸ್ಥಳೀಯ ಮುಖಂಡರು ಅವರನ್ನು ದೂರ ಇರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅನ್ನುವುದೆಲ್ಲಾ ಸತ್ಯಕ್ಕೆ ದೂರವಾದ ಮಾತು. ವಾಸ್ತವವಾಗಿ ಅವರೊಟ್ಟಿಗೆ ರಾಜ್ಯಾಧ್ಯಕ್ಷರು ಹಾಗೂ ಸಂಘಟನಾ ಕಾರ್ಯದರ್ಶಿಗಳು ಮತ್ತು ಹಿರಿಯರೊಂದಿಗೆ ಹಲವು ಬಾರಿ ಮಾತುಕತೆ ನಡೆಸಿದ್ದೇವೆ. ಹಾಗೂ ಅವರೆಲ್ಲರೂ ಬಿಜೆಪಿಗೆ ಸೇರ್ಪಡೆಗೊಳ್ಳಲು ಮುಕ್ತವಾದ ಆಹ್ವಾನ ಕೊಟ್ಟಿರುತ್ತಾರೆ ಎಂಬುದನ್ನು ಸ್ವತಃ ರಾಜ್ಯಾಧ್ಯಕ್ಷರು ಕೂಡಾ ಸ್ಪಷ್ಟಪಡಿಸಿದ್ದಾರೆ ಎಂದು ಸತೀಶ್ ಕುಂಪಲ ಹೇಳಿದರು.
ನಮ್ಮ ಪಕ್ಷಕ್ಕೆ ನಮ್ಮ ತತ್ವ ಸಿದ್ಧಾಂತಗಳನ್ನು ಒಪ್ಪಿ ಬರುವ ಎಲ್ಲರೂ ಬೇಕು. ಪ್ರತಿಯೊಬ್ಬರ ಸೇವೆ ಕೂಡಾ ಬಿಜೆಪಿಗೆ ಬೇಕು. ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದಾಗಲಂತೂ ಒಬ್ಬ ವ್ಯಕ್ತಿ ರಾಜ್ಯ ಸಭೆಗೆ ಆಯ್ಕೆಯಾದಾಗ ಪಾಕಿಸ್ಥಾನಕ್ಕೆ ಜೈಕಾರ ಹಾಕಿ ನಮ್ಮ ದೇಶಕ್ಕೆ ಅಪಚಾರ ಎಸಗಿದರೂ ಸರಕಾರಿ ಯಂತ್ರ, ಅಪಚಾರ ಎಸಗಿದವರ ಪರವಾಗಿ ನಿಲ್ಲುತ್ತೆ. ಇದರ ಮುಂದುವರಿದ. ಭಾಗವೇನೊ ಎಂಬಂತೆ. ನಿನ್ನೆಯಷ್ಟೇ ಕಳೆದ ಹತ್ತು ವರ್ಷಗಳ ಕಾಲ ಆತಂಕಿಗಳ ಉಪಟಳದಿಂದ ಶಾಂತವಾಗಿದ್ದ ಬೆಂಗಳೂರಿನಲ್ಲಿ ಬಾಂಬ್ ಬ್ಲಾಸ್ಟ್ ಆಗಿದ್ದನ್ನು, ನಾವು ನೋಡಿದ್ದೇವೆ.
ಪುನಃ ದೇಶದ ಮೇಲೆ ಆತಂಕದ ಕರಿ ಛಾಯೆ ಮೂಡುತ್ತಿದೆ. ಆದ್ದರಿಂದ ರಾಷ್ಟ್ರೀಯ ವಿಚಾರಗಳನ್ನು ಪ್ರಧಾನವಾಗಿ ಮುಂದಿಟ್ಟುಕೊಂಡು ಕೆಲಸ ಮಾಡುತ್ತಿರುವ ಅನೇಕ ಸಂಘಟನೆಗಳು ಹಾಗೂ ಅರುಣ್ ಕುಮಾರ್ ಪುತ್ತಿಲ ಅವರೂ ಸಹ ನಮ್ಮ ಪ್ರಧಾನಿ ಮೋದಿಜಿಯವರ ಕೈ ಬಲ ಪಡಿಸಲು ಸಹಕಾರಿಯಾಗಬೇಕು. ರಾಜ್ಯಾಧ್ಯಕ್ಷರ ಭೇಟಿ ಸಂದರ್ಭದಲ್ಲಿ ಅರುಣ್ ಕುಮಾರ್ ಪುತ್ತಿಲ ಅವರು ಪಾರ್ಟಿಯಲ್ಲಿ ಜಿಲ್ಲೆ ಅಥವಾ ಮಂಡಲ ಅಧ್ಯಕ್ಷ ಸ್ಥಾನಮಾನಕ್ಕೆ ಅಪೇಕ್ಷೆ ಪಟ್ಟಿದ್ದರು.
ಆಗ ರಾಜ್ಯಾಧ್ಯಕ್ಷರು ಬಿಜೆಪಿ ಪಾರ್ಟಿಗೆ ಯಾರೂ ಕೂಡಾ ಷರತ್ತುಗಳನ್ನು ಒತ್ತಡಗಳನ್ನು ಹೇರುವಂತಹದು ಸರಿಯಲ್ಲ. ಪ್ರತಿಯೊಬ್ಬರೂ ಒಬ್ಬ ಸಾಮಾನ್ಯ ಕಾರ್ಯಕರ್ತರಾಗಿ ಬಿಜೆಪಿ ಸೇರಬೇಕು. ಆಮೇಲೆ ಅವರಿಗೆ ಸೂಕ್ತವಾದ ಸ್ಥಾನಮಾನವನ್ನು ನೀಡುವ ಕುರಿತು ನಿರ್ಣಯ ಮಾಡಲಾಗುತ್ತದೆ. ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿ ಸೇರ್ಪಡೆಯಾದ ಮೇಲೆ ಅವರಿಗೆ ಸಲ್ಲಬೇಕಾದ ಎಲ್ಲಾ ಗೌರವದೊಂದಿಗೆ ಸ್ಥಾನಮಾನಗಳನ್ನು ನೀಡಲಾಗುವುದು. ಎಂಬ ವಿಚಾರವನ್ನು ರಾಜ್ಯಾಧ್ಯಕ್ಷರು ರಾಜ್ಯ ಸಂಘಟನಾ ಕಾರ್ಯದರ್ಶಿಗಳು ಈಗಾಗಲೇ ತಿಳಿಸಿದ್ದಾರೆ. ಇವತ್ತೂ ಕೂಡಾ ಅವರಿಗೆ ತಿಳಿಸುವುದೇನೆಂದರೆ ಬಿಜೆಪಿ ಪಕ್ಷಕ್ಕೆ ಬನ್ನಿ ಹಾಗೂ ರಾಷ್ಟ್ರ ಹಿತದ ಕಾರ್ಯವನ್ನು ನಾವೆಲ್ಲರೂ. ಸೇರಿ ಮಾಡೋಣ. ಮೋದೀಜಿಯವರ ನೇತೃತ್ವದಲ್ಲಿ ಬಲಾಢ್ಯ ರಾಷ್ಟ್ರವನ್ನು ಕಟ್ಟೋಣ ಎಂದು ಸತೀಶ್ ಕರೆ ನೀಡಿದರು..
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ