ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳೇ, ನಿಮಗಿದೋ ಶುಭ ಹಾರೈಕೆಗಳು

Upayuktha
0


ಪ್ರಿಯ ವಿದ್ಯಾರ್ಥಿಗಳೇ… ನಾಳೆಯಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆಗಳು ಆರಂಭವಾಗುತ್ತಿವೆ. ಪರೀಕ್ಷೆಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದೀರೆಂದು ಭಾವಿಸುತ್ತೇನೆ. ಇದು ನೀವು ಎದುರಿಸುತ್ತಿರುವ ಮೊದಲ ಪಬ್ಲಿಕ್ ಪರೀಕ್ಷೆ. ಕೊನೆ ಗಳಿಗೆಯ ಪರೀಕ್ಷೆಯ ಸಿದ್ಧತೆ ಸಮಯೋಚಿತವಾಗಿರಲಿ. ಈ ಬಗ್ಗೆ ಮಾಹಿತಿ ನಿಮ್ಮ ಶಿಕ್ಷಕರಿಂದ ಈಗಾಗಲೇ ನಿಮಗೆ ಸಿಕ್ಕಿದೆಯೆಂದು ಭಾವಿಸುತ್ತೇನೆ. ಮತ್ತೊಂದು ವಿಷಯ… ರಾಜ್ಯದಾದ್ಯಂತ ಎಂಟೂವರೆ ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ನಿಮ್ಮಂತೆಯೇ ಎಸ್.ಎಸ್.ಎಲ್.ಸಿ. ಬೋರ್ಡ್ ಪರೀಕ್ಷೆ ಬರೆಯುತ್ತಿದ್ದಾರೆ. ಅಷ್ಟೂ ವಿದ್ಯಾರ್ಥಿಗಳೂ ಪರೀಕ್ಷೆಯನ್ನು ಸುಲಭವಾಗಿ ಎದುರಿಸುವಂತೆ ಹಾಗೂ ಉತ್ತರಿಸುವಂತೆ ಪ್ರಶ್ನೆಪತ್ರಿಕೆಯನ್ನು ಸಿದ್ಧಪಡಿಸಲಾಗಿರುತ್ತದೆ. ಆದ್ದರಿಂದ ಪರೀಕ್ಷೆಯ ಬಗ್ಗೆ ಯಾವುದೇ ಆತಂಕ ಬೇಡ. ಓದಿಗೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ಊಟ, ನಿದ್ರೆಗೂ ನೀಡಿ. ದೈಹಿಕ ಹಾಗೂ ಮಾನಸಿಕ ಆರೋಗ್ಯ ಸುಸ್ಥಿತಿಯಲ್ಲಿದ್ದರೆ ಪರೀಕ್ಷೆಯಲ್ಲಿ ನೀವು ಉತ್ತಮ ಕಾರ್ಯಕ್ಷಮತೆಯನ್ನು ತೋರಲು ಸಾಧ್ಯವಾಗುತ್ತದೆ. ನೆನಪಿಡಿ… ಪರೀಕ್ಷೆ ಎಂಬ ಯುದ್ಧವನ್ನು ಗೆಲ್ಲಲು ಹೊರಟಿರುವ ನಿಮ್ಮೊಂದಿಗೆ ನಿಮ್ಮ ಪೋಷಕರು, ನಿಮ್ಮ ಶಿಕ್ಷಕರು ಹಾಗೂ ನಿಮ್ಮ ಹಿತೈಶಿಗಳ ಒಂದು ದೊಡ್ಡ ಹಿಂಡೇ ಇದೆ. ವರ್ಷ ಪೂರ, ಅದರಲ್ಲೂ ಜನವರಿಯಿಂದ ಈಚೆಗೆ ಅನೇಕ ಸರಣಿ ಪರೀಕ್ಷೆಗಳನ್ನು ಬರೆದಿದ್ದೀರಲ್ಲವೇ? ಅನೇಕ ಪೂರ್ವಸಿದ್ದತಾ ಪರೀಕ್ಷೆಗಳನ್ನು ಎದುರಿಸಿದ್ದೀರಲ್ಲವೇ? ಆ ಎಲ್ಲಾ ಪರೀಕ್ಷೆಗಳಿಗಿಂತ ಈಗ ನೀವು ಎದುರಿಸುತ್ತಿರುವ ಪರೀಕ್ಷೆ ಅತ್ಯಂತ ಸುಲಭವಿರುತ್ತದೆ. ಪರೀಕ್ಷೆಯನ್ನು ಹಬ್ಬದಂತೆ ಸಂಭ್ರಮಿಸಿ. ಖುಶಿಯಿಂದ ಎದುರಿಸಿ. ನಂತರದ ಫಲಿತಾಂಶಕ್ಕೆ ಈಗಲೇ ತಲೆಕೆಡಿಸಿ ಕೊಳ್ಳದಿರಿ.


ಪ್ರಿಯ ಶಿಕ್ಷಕರೇ… ನಿಮ್ಮ ಆತಂಕವನ್ನು ಬದಿಗಿಡಿ. ತರಗತಿಯಲ್ಲಿ ಕಲಿಕೆಯಲ್ಲಿ ಮುಂದಿರುವ ವಿದ್ಯಾರ್ಥಿಗಳಿರುವಂತೆ, ಕಲಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗಳೂ ಇರುತ್ತಾರೆ. ನೀವು ಕಲಿಸಿದ್ದನ್ನೆಲ್ಲಾ ಮಕ್ಕಳು ಕಲಿಯದಿದ್ದಾಗ ನೀವು ಭ್ರಮನಿರಸನಕ್ಕೊಳಗಾಗಿರುವುದನ್ನು ನಾನು ಗಮನಿಸಿದ್ದೇನೆ. ನಿಮ್ಮೆಲ್ಲ ಒತ್ತಡ, ಒತ್ತಡದ ಹಿಂದಿನ ವಿದ್ಯಾರ್ಥಿಗಳೆಡೆಗಿನ ನಿಮ್ಮ ಕಾಳಜಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಯಾರೋ ಪ್ರಶಂಸಿಸಲೆಂದೋ, ಯಾರೋ ಮೆಚ್ಚಲೆಂದೋ ನೀವೆಂದೂ ಕೆಲಸ ಮಾಡಿದವರಲ್ಲ. ಕರ್ತವ್ಯ ಎಂಬುದನ್ನು ಮೀರಿ ಮಾಡಿರುವ ಕೆಲಸಕ್ಕೆ, ನಿಮ್ಮೆಲ್ಲ ಅವಿರತ ಶ್ರಮಕ್ಕೆ ತಕ್ಕಫಲ ನಿಮಗೆ ಸಿಗಲಿದೆ. 

 

ಪ್ರಿಯ ಪೋಷಕರೇ…. ನಿಮ್ಮ ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸುವಲ್ಲಿ ನಿಮ್ಮ ಪಾತ್ರ ಬಹಳ ದೊಡ್ಡದಿದೆ. ಸದಾ ಅವರಿಗೆ ಬೆಂಬಲವಾಗಿ ನಿಲ್ಲಿ. ಅವರ ಬೇಕು ಬೇಡಗಳನ್ನು ವಿಚಾರಿಸಿಕೊಳ್ಳಿ. ಅವರ ಆರೋಗ್ಯ ಕುರಿತು ಹೆಚ್ಚಿನ ಕಾಳಜಿ ವಹಿಸಿ. ಅಂತಿಮವಾಗಿ ಅಂಕ ಗಳಿಕೆಯೇ ಎಲ್ಲವೂ ಅಲ್ಲ. ಅಂಕಗಳಿಕೆಗಾಗಿ ಎಂದೂ ಅವರ ಬೆನ್ನು ಬೀಳದಿರಿ. ನಮಗೆ ನಮ್ಮ ಮಕ್ಕಳಷ್ಟೇ ಮುಖ್ಯ. ಆಕಾಶದಗಲದ ವಿಫುಲ ಅವಕಾಶಗಳ ಬಗ್ಗೆ ನಿಮ್ಮ ಮಕ್ಕಳಿಗೆ ತಿಳಿಹೇಳಿ. ನಿಮ್ಮ ಮೋರಲ್ ಸಪೋರ್ಟ್ (Moral Support) ಸದಾ ಅವರಿಗಿರಲಿ. ಬಾಳನಂದನವನದಲ್ಲಿ ಕುಡಿಯೊಡೆದು ಅರಳುತ್ತಿರುವ ಮೊಗ್ಗುಗಳು ಸುಗಂಧ ಸೂಸಲಿ. ಕಂಡ ಕನಸೆಲ್ಲಾ ನನಸಾಗಲಿ. ಮಕ್ಕಳ ಬದುಕು, ಭವಿಷ್ಯ ಬಂಗಾರವಾಗಲಿ

Dear children wish you all the best for your Exams, Do well




- ಪುಷ್ಪಲತಾ. ಹೆಚ್.ಕೆ

ಉಪನಿರ್ದೇಶಕರು (ಅಭಿವೃದ್ಧಿ)

ಶಾಲಾ ಶಿಕ್ಷಣ ಇಲಾಖೆ, ಹಾಸನ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top