ಅಗಲ್ಪಾಡಿಯಲ್ಲಿ ಧನ್ವಂತರಿ ಹೋಮ ಸಂಪನ್ನ

Upayuktha
0

ಬದಿಯಡ್ಕ: ಕಾಸರಗೋಡು ಜಿಲ್ಲೆಯ ಉಬ್ರಂಗಳ ಗ್ರಾಮದ ಅಗಲ್ಪಾಡಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮತ್ತು ವೇದಮಾತಾ ಟ್ರಸ್ಟ್ ಅಗಲ್ಪಾಡಿ ವತಿಯಿಂದ ನಡೆಯುವ ಋಕ್ ಸಂಹಿತಾ ಯಾಗ, ಸಹಸ್ರ ಚಂಡಿಕಾ ಯಾಗ ಪ್ರಯುಕ್ತ ಶನಿವಾರ ಧನ್ವಂತರಿ ಹೋಮ ನಡೆಯಿತು.


ಮುಂಜಾನೆ ಧನ್ವಂತರಿ ಹೋಮ ಪ್ರಾರಂಭವಾಗಿ ಬೆಳಗ್ಗೆ 11 ಗಂಟೆಗೆ ಪೂರ್ಣಾಹುತಿ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅಭಿಜ್ಞಾ ಭಟ್ ಬೊಳುಂಬು ಅವರಿಂದ ಹರಿಕಥೆ, ಎಂ.ಎಸ್.ಗಿರಿಧರ್ ಮತ್ತು ವಸುಧಾ ಮಂಗಳೂರು ಹಾಗೂ ಬಳಗದವರಿಂದ ದಾಸ ಸಿಂಚನ, ಕಾಞಂಗಾಡ್ ನಾಟ್ಯಧ್ವನಿ ಕಲಾಕ್ಷೇತ್ರ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.


ಯಾಗದ ಪ್ರಯುಕ್ತ ಕುಮಾರೀ, ಸುವಾಸಿನೀ ಹಾಗೂ ದಂಪತಿ ಪೂಜೆ ನಡೆಯಿತು. ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಬಳಿಕ ಮಹಾ ಮಂತ್ರಾಕ್ಷತೆ ನಡೆಯಿತು. ಸಂಜೆ ಶ್ರೀ ದೇವರಿಗೆ ಅಷ್ಟಾವಧಾನ ಸೇವೆ ನಡೆಯಿತು.


ಮಾ.31ರ ಕಾರ್ಯಕ್ರಮ:

ಮಾ.31ರಂದು ಮುಂಜಾನೆ ದುರ್ಗಾ ಸಪ್ತಶತೀ ಪಾರಾಯಣ, ಬೆಳಗ್ಗೆ 11.30ಕ್ಕೆ ಕಲಶಪೀಠದಲ್ಲಿ ಮಹಾಪೂಜೆ ನೆರವೇರಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ರಾತ್ರಿ 8ರಿಂದ ವಿದುಷಿ ಕೋವಿಲಡಿ ಆರ್.ಕಲಾ ಮೈಸೂರು ಅವರಿಗೆ ಗುರುವಂದನೆ, ರಾತ್ರಿ 8.15ರಿಂದ ಅಶ್ವಿನಿ ಕೋಳಿಕ್ಕಜೆ, ವಿದುಷಿ ಅರ್ಚನಾ ಎಲ್.ರಾವ್ ಮೈಸೂರು ಅವರಿಂದ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಲಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top