ಪುತ್ತೂರು: ಮತದಾನ, ಕೇವಲ ನಮ್ಮ ಹಕ್ಕು ಮಾತ್ರ ಅಲ್ಲ. ಅದು ನಮ್ಮ ಕರ್ತವ್ಯ. ಹಕ್ಕುಗಳ ಕುರಿತು ಮಾತನಾಡುವ ನಾವು ಕರ್ತವ್ಯವನ್ನು ಮೊದಲು ನಿಭಾಯಿಸಬೇಕು. ನಮ್ಮ ದೇಶಕ್ಕೆ ಪ್ರಜಾಪ್ರಭುತ್ವ ಬರಲು ಹಲವಾರು ಜನರ ಹೋರಾಟ ತ್ಯಾಗ ಇದೆ. ಆದ್ದರಿಂದ ಪ್ರತಿಯೊಬ್ಬರ ಮತದಾನವು ಅತಿ ಅಮೂಲ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಗಣಕಶಾಸ್ತ್ರದ ಸಹಾಯಕ ಪ್ರಾಧ್ಯಾಪಕಿ ಮತ್ತು ಸ್ವೀಪ್ ನ ತರಬೇತುದಾರ ಡಾ. ಭಾರತಿ ಪಿಲಾರ್ ಹೇಳಿದರು.
ಇವರು ಪುತ್ತೂರಿನ ವಿವೇಕಾನಂದ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ( ಸ್ವಾಯತ್ತ )ಇಲ್ಲಿ ಭಾರತ ಚುನಾವಣಾ ಆಯೋಗ, ದಕ್ಷಿಣ ಕನ್ನಡ ಜಿಲ್ಲೆ -ಸ್ವೀಪ್ ಸಮಿತಿ ಮತ್ತು ನೆಹರು ಯುವ ಕೇಂದ್ರ,ಮಂಗಳೂರು ದ.ಕ ಜಿಲ್ಲಾಡಳಿತ ಮತ್ತು ದ ಕ ಜಿಲ್ಲಾ ಪಂಚಾಯತ್ ಮತದಾನ ಸಾಕ್ಷರತ ಕ್ಲಬ್, ಪೊಲಿಟಿಕಲ್ ಫಾರ್ಮ್,ಎನ್ ಸಿ ಸಿ, ಎನ್ ಎಸ್ ಎಸ್,ರೋವರ್ಸ್ ಆ್ಯಂಡ್ ರೇಂಜರ್ಸ್, ಹಾಗೂ ಯೂಥ್ ರೆಡ್ ಕ್ರಾಸ್ ಸಹಯೋಗದಲ್ಲಿ ಆಯೋಜಿಸಿದ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ವಿಶೇಷ ಅಧಿಕಾರಿ ಮತ್ತು ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ್ ನಾಯಕ್ ಮಾತನಾಡಿ, ನಮ್ಮ ಮೂಲಭೂತ ಹಕ್ಕಾದ ಮತ ಚಲಾಯಿಸಲು ನೀಡುವ ರಜೆಯನ್ನು ವ್ಯರ್ಥ ಮಾಡುವವರು ಇಂದು ಹೆಚ್ಚಾಗಿದ್ದಾರೆ. ಇದರಿಂದ ಒಳ್ಳೆಯ ಅಭ್ಯರ್ಥಿಯನ್ನು ಆರಿಸಲು ಸಾಧ್ಯವಾಗುವುದಿಲ್ಲ. ಒಳ್ಳೆಯ ವ್ಯಕ್ತಿಯನ್ನು ಆರಿಸುವಲ್ಲಿ ನಾವು ಸಫಲರಾಗಬೇಕು.ಅದು ವಿದ್ಯಾರ್ಥಿಗಳ ಜವಾಬ್ದಾರಿ. ಈ ಮೂಲಕ ಯುವ ಸಮುದಾಯ ಎಚ್ಚೆತ್ತುಕೊಳ್ಳುವ ಕಾರ್ಯ ಆಗಬೇಕು . ಹಾಗಾದಾಗ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮತದಾನ ಜಾಗೃತಿಯ ಕುರಿತಾದ ಭಿತ್ತಿ ಪತ್ರವನ್ನು ಬಿಡುಗಡೆಗೊಳಿಸಲಾಯಿತು ಮತ್ತು ಪ್ರತಿಜ್ಞಾವಿಧಿಯನ್ನು ಸ್ವೀಕರಿಸಲಾಯಿತು. ವೇದಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್ ಸಮಿತಿಯ ಸಂಯೋಜಕ ಮತ್ತು ಸದಸ್ಯ ಡೊಂಬಯ್ಯ ಇಡ್ಕಿದು, ನೆಹರು ಯುವ ಕೇಂದ್ರ ಮಂಗಳೂರು ಇದರ ಪ್ರತಿನಿಧಿ ಶಾಂತಪ್ಪ. ಕಾಲೇಜಿನ ಸ್ವೀಪ್ ಸಂಯೋಜಕಿ ಮತ್ತು ವ್ಯವಹಾರ ನಿರ್ವಹಣೆ ವಿಭಾಗದ ಉಪನ್ಯಾಸಕಿ ದೀಪಿಕಾ ಎಸ್, ಮತ್ತು ಮತದಾರ ಸಾಕ್ಷರತಾ ಘಟಕದ ಸ್ಟೂಡೆಂಟ್ ಕ್ಯಾಂಪಸ್ ಅಂಬಾಸಿಡರ್ ದ್ವಿತೀಯ ಬಿಬಿಎ ವಿಭಾಗದ ವಿದ್ಯಾರ್ಥಿ ಅಭಯ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಮಧುಕುಮಾರ್ ನಿರ್ವಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ