ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಸೇರಿದಂತೆ ವಿವಿಧೆಡೆ ಹೆದ್ದಾರಿ ಅಗಲೀಕರಣ ವೇಳೆಯಲ್ಲಿ ಅನಿವಾರ್ಯವಾಗಿ ತೆರವುಗೊಳಿಸುವ ಮರಗಳಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸೂಚಿಸಿರುವ ಪರ್ಯಾಯ ಯೋಜನೆಗಳು ಪರಿಣಾಮಕಾರಿಯಾಗಿ ಜಾರಿಯಾಗುತ್ತಿಲ್ಲ ಎಂಬುದು ನಮ್ಮ ಗಮನಕ್ಕೆ ಬಂದಿದೆ. ತೆರವುಗೊಳಿಸುವ ಮರಗಳಿಗೆ ಬದಲಿಗೆ ನಿಗದಿತ ಸಂಖ್ಯೆಗಳ ಗಿಡಗಳನ್ನು ನೆಟ್ಟು ಅವುಗಳನ್ನು ಐದು ವರ್ಷಗಳ ಕಾಲ ಆರೈಕೆ ನಿರ್ವಹಣೆ ಜವಾಬ್ದಾರಿ ಕಾರ್ಯವನ್ನು ರಸ್ತೆ ಅಗಲೀಕರಣ ಮೂಲ ಯೋಜನೆ ವೆಚ್ಚದಲ್ಲಿ ಸೇರಿಸಿ ಕಾರ್ಯಗತ ಮಾಡಬೇಕು. ಈ ವಿಚಾರದಲ್ಲಿ ಸಂಬಂಧ ಪಟ್ಟ ಇಲಾಖೆಗಳ ನಡುವೆ ಸಮನ್ವಯ ಕೊರತೆ ಇರದಂತೆ ನೋಡಿಕೊಳ್ಳಬೇಕು ಎಂದು ಪರಿಸರ ಪ್ರೇಮಿಗಳು ಇಂದು ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿಯವರಿಗೆ ಮನವಿ ಸಲ್ಲಿಸಿದರು.
ಶಿವಮೊಗ್ಗ ಜಿಲ್ಲೆ ಸೇರಿದಂತೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಅನೇಕ ರಸ್ತೆಗಳ ಅಗಲೀಕರಣ ಕಾರ್ಯ ಯೋಜನೆ ಇರುವ ಬಗ್ಗೆ ತಿಳಿದುಬಂದಿದ್ದು, ಪಶ್ಚಿಮ ಘಟ್ಟದ ಅಪರೂಪದ ಸಸ್ಯ ಸಂಕುಲಗಳ ಸಂರಕ್ಷಣೆ ಅತ್ಯಗತ್ಯವಾಗಿದೆ. ಬದಲಿ ಗಿಡಗಳ ನೆಡುವಿಕೆಯಲ್ಲಿ ಇಂತಹ ಸ್ಥಳೀಯ ಜಾತಿಯ ಗಿಡಗಳನ್ನೇ ಬೆಳೆಸಬೇಕು. ಮಲೆನಾಡಿನ ಎಲ್ಲಾ ಹೆದ್ದಾರಿಗಳನ್ನು ಹಸಿರು ರಾಜಮಾರ್ಗವಾಗಿ ಪರಿಗಣಿಸಲು ಮತ್ತು ರಸ್ತೆ ನಿರ್ಮಿಸುವಾಗ ನದಿ ದಡ, ಕೆರೆ, ದಟ್ಟ ಅರಣ್ಯ, ನೀರಿನ ಮೂಲಗಳನ್ನು ಸಂರಕ್ಷಿಸುವಂತೆ ವಿನಂತಿಸಲಾಯಿತು.
ಸಚಿವರ ಇಂದಿನ ಭೇಟಿ ವೇಳೆ ಪರಿಸರ ಕಾರ್ಯಕರ್ತರಾದ ಎಂ. ಶಂಕರ್, ಡಾ. ಶ್ರೀಪತಿ ಎಲ್.ಕೆ., ಬಾಲಕೃಷ್ಣ ನಾಯ್ಡು, ದಿನೇಶ್ ಶೇಟ್, ಅಜೇಯ್ ಕುಮಾರ ಶರ್ಮ, ಶ್ರವಣ್, ನವ್ಯಶ್ರೀ ನಾಗೇಶ್, ತ್ಯಾಗರಾಜ ಮಿತ್ಯಾಂತ ಮುಂತಾದವರು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ