ಉಜಿರೆ: ಕೆ.ಟಿ ಗಟ್ಟಿಯವರಿಗೆ ನುಡಿನಮನ

Upayuktha
0


ಉಜಿರೆ: ಹಿರಿಯ ಸಾಹಿತಿ, ಸಂಶೋಧಕ ಕೆ.ಟಿ. ಗಟ್ಟಿಯವರ ವೈಚಾರಿಕ ಲೇಖನ, ಪ್ರವಾಸ ಕಥನ, ನಾಟಕರ೦ಗ, ಸಸ್ಯಶಾಸ್ತ್ರ ಅಧ್ಯಯನ, ಭಾಷಾ ತಜ್ಞ, ಕಥೆ, ಕಾದಂಬರಿ, ರೇಡಿಯೋ ಮಕ್ಕಳ ನಾಟಕ, ಆಕಾಶವಾಣಿ ಟಿ.ವಿ ಸ೦ದರ್ಶನಗಳಲ್ಲಿ ಬರಹವೇ ಬದುಕಾಗಿತ್ತು. ಬಹುಮುಖ ವ್ಯಕ್ತಿತ್ವದ ಅವರು ನಿಸರ್ಗ ಕವಿ. ಶಿಸ್ತು, ಅಚ್ಚುಕಟ್ಟುತನ, ನಿಗರ್ವಿ, ಪ್ರಾಮಾಣಿಕತೆ, ನಿಷ್ಟುರವಾದಿ, ಸ್ನೇಹಜೀವಿ, ಯಾರಿಗೂ ತಲೆಬಾಗದೆ ತಾನಾಯಿತು ತನ್ನ ಕೆಲಸವಾಯಿತು ಎಂಬ ಮನೋಭಾವದ ಹೋರಾಟದ ಬದುಕು ನಡೆಸಿ ಭೌತಿಕವಾಗಿ ನಮ್ಮ ಜತೆಗಿಲ್ಲವಾದರೂ ಅವರ ಕೃತಿಗಳು ನಮಗೆ ಸ್ಫೂರ್ತಿ ಹಾಗೂ ಪ್ರೇರಣೆಯಾಗಿವೆ. ಭಾಷೆಯ ಪ್ರಯೋಗದಲ್ಲಿ ಗಟ್ಟಿಯವರದು ಗಟ್ಟಿತನ ಕಾಣಬಹುದು. ಯಾವುದೇ, ಯಾರದೇ ಶಿಫಾರಸಿಲ್ಲದೇ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಅವರ ಸಾಹಿತ್ಯ ಸೇವೆ ಸದಾ ಸಂಸ್ಕರಣೀಯ ಎಂದು ಉಜರೆಯ ಎಸ್‌ಡಿಎಂ ವಸತಿ ಪ.ಪೂ.ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ| ಟಿ.ಕೃಷ್ಣಮೂರ್ತಿ ನುಡಿದರು. 


ಅವರು ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ ಬೆಳ್ತಂಗಡಿ ತಾಲೂಕು ಸಮಿತಿ ಹಾಗೂ ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್‌ ಬೆಳ್ತಂಗಡಿ ಘಟಕದ ವತಿಯಿಂದ ನಡೆದ ಅಗಲಿದ ಹಿರಿಯ ಸಾಹಿತಿ ಕೆ.ಟಿ ಗಟ್ಟಿಯವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿದರು.


ಎಸ್‌ -ಡಿ.ಎಂ.ಪ.ಪೂ. ಕಾಲೇಜು ಉಪಪ್ರಾಂಶುಪಾಲ ಡಾ|ರಾಜೇಶ್‌ ಅವರು, ಕೆ.ಟಿ. ಗಟ್ಟಿಯವರದು ನೇರ ಮಾತುಗಾರಿಕೆ, ಪ್ರಚಾರ ಬಯಸದೆ ಗ್ರಾಮೀಣ ಪ್ರದೇಶದಲ್ಲಿ ಸಾಹಿತ್ಯ ಸೇವೆಯಲ್ಲಿ ಸಮಾಜದ ಅಂಕುಡೊಂಕುಗಳನ್ನು ಸೂಕ್ಷವಾಗಿ ಗಮನಿಸಿ ತನ್ನ ವಿಚಾರಧಾರೆಗಳನ್ನು ಕೃತಿಗಳಲ್ಲಿ ಮೂಡಿಸುತ್ತಿದ್ದರು. ನಡೆನುಡಿ ಆಚಾರ ವಿಚಾರವೇ ಧರ್ಮ ಎಂದು ಪ್ರತಿಪಾದಿಸುವ ಅವರ ಕವನಗಳಲ್ಲಿ ಬಂಡಾಯ, ಮೌಢ್ಯವನ್ನು ವಿರೋಧಿಸಿದವರು. ಜಾತಿ ವ್ಯವಸ್ಥೆ ಧಾರ್ಮಿಕ ಸಂಪ್ರದಾಯ, ಮೂಢನಂಬಿಕೆಗಳನ್ನು ವಿರೋಧಿಸಿದವರು ಎಂದು ನುಡಿನಮನ ಸಲ್ಲಿಸಿದರು.


ನಿವೃತ್ತ ಪ್ರಾಂಶುಪಾಲರಾದ ಪ್ರೊ.ಗಣಪತಿ ಭಟ್ ಕುಳಮರ್ವ ಅಧ್ಯಕ್ಷತೆ ವಹಿಸಿ ಕೆ.ಟಿ ಗಟ್ಟಿಯವರ ಸಾಹಿತ್ಯ ಸೇವೆಯನ್ನು ಸ್ಮರಿಸಿಕೊಂಡರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top