ಮಂಗಳೂರು: ಸಾಮಾನ್ಯರ ಜೀವನದ ಜೀವಂತ ಪಾತ್ರಗಳು ಕೆಟಿ ಗಟ್ಟಿ ಅವರ ಸಾಹಿತ್ಯದಲ್ಲಿ ಎದ್ದುಕಾಣುವ ರೀತಿಯಲ್ಲಿ ಇರುತ್ತಿದ್ದವು. ಅವರ ಎಲ್ಲಾ ಸಾಹಿತ್ಯದ ಸಮಗ್ರ ಅಧ್ಯಯನ ವಿದ್ಯಾರ್ಥಿಗಳು ಕಲಿಕೆಯ ಪಾಠವಾಗಬೇಕು ಎಂದು ಡಾ ಪ್ರಭಾಕರ ಜೋಷಿ ನುಡಿದರು.
ಅವರು ದಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇದರ ಆಶ್ರಯದಲ್ಲಿ ಎಸ್ ಡಿಎಮ್ ಕಾಲೇಜು ಮಂಗಳೂರು ಇಲ್ಲಿ ಕೆ.ಟಿ ಗಟ್ಟಿಯವರಿಗೆ ನುಡಿ ನಮನ ಸಲ್ಲಿಸಿ ಮಾತನಾಡುತ್ತಿದ್ದರು.
ಡಾ ಶ್ರುತಕೀರ್ತಿ ಮಾತನಾಡಿ, ತಾವು ದೈನಂದಿನ ಒಡನಾಟದಲ್ಲಿ ನೋಡಿದ ಸಾಹಿತಿ ಕೆ.ಟಿ ಗಟ್ಟಿಯವರು. ದಿನದ ನಿತ್ಯ ಕರ್ಮ ಬಿಟ್ಟರೆ ಇಪ್ಪತ್ನಾಲ್ಕು ಗಂಟೆಗಳ ಸಮಯ ಬರವಣಿಗೆಯನ್ನು ಮಾಡುತ್ತಿದ್ದರು. ಸಮಯ ಮಿಕ್ಕಿದರೆ ಕೃಷಿಯಲ್ಲಿ ತೊಡಗುತ್ತಿದ್ದರು. ಆದುದರಿಂದ ಅವರ ಬರಹಗಳು ನೈಜತೆಯ ಆಗರವಾಗಿದ್ದುವು ಎಂದರು.
ಕನ್ನಡ ಪರಿಷತ್ತಿನ ದಕ ಜಿಲ್ಲಾ ಅಧ್ಯಕ್ಷ ಡಾ ಎಂಪಿ ಶ್ರೀನಾಥ್ ಮಾತನಾಡಿ, ಸಾಹಿತ್ಯದ ಬೆಳವಣಿಗೆಗೆ ಮತ್ತು ಅಧ್ಯಯನಕ್ಕೆ ಸಾಹಿತಿ ಒಬ್ಬರು ಹೇಗೆ ಕೊಡುಗೆಯಾಗಬಲ್ಲರು ಎಂಬುದಕ್ಕೆ ಕೆಟಿ ಗಟ್ಟಿ ಉದಾಹರಣೆ ಎಂದರು.
ಗೌರವ ಕಾರ್ಯದರ್ಶಿ ರಾಜೇಶ್ವರಿ ಮಾತನಾಡಿ, ಕೆಟಿ ಗಟ್ಟಿ ಅವರ ಕಾದಂಬರಿ ಹೇಗೆ ತನ್ನ ತಾಯಿಯ ಮೇಲೆ ಪ್ರಭಾವ ಬೀರುವ ಮೂಲಕ ಅಲ್ಲಿನ ಪಾತ್ರಗಳು ತಾವು ಅನಾರೋಗ್ಯದಿಂದ ಇರುವಾಗಲೂ ಕನವರಿಸುತ್ತಿದ್ದರು ಎಂದು ವಿವರಿಸಿದರು.
ನುಡಿ ಮನದಲ್ಲಿ ಜಿಲ್ಲಾ ಗೌರವ ಕಾರ್ಯದರ್ಶಿ ವಿನಯ್ ಆಚಾರ್ಯ, ತೋನ್ಸೆ ಪುಷ್ಕಳ ಕುಮಾರ್, ಚಂದ್ರಶೇಖರ ನಾವಡ, ಸುಬ್ರಾಯ ಭಟ್, ಗಣೇಶ್ ಜಿ, ರಘು ಇಡ್ಕಿದು, ದಯಾನಂದ ರಾವ್ ಕಾವೂರು, ಮಾಧ್ಯಮ ಸಂಚಾಲಕ ರೇಮಂಡ್ ಡಿಕೂನಾ ತಾಕೊಡೆ, ಮೂಲ್ಕಿ ತಾಲೂಕು ಅಧ್ಯಕ್ಷರಾದ ಮಿಥುನ್ ಉಡುಪ, ಸುರತ್ಕಲ್ ಹೋಬಳಿ ಅಧ್ಯಕ್ಷರಾದ ಗುಣವತಿ ಇದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ