ಬೆಂಗಳೂರು: ಹಿರಿಯ ಪತ್ರಕರ್ತ, ಹೆಸರಾಂತ ಲೇಖಕ ಗಿರೀಶ್ ರಾವ್ ಹತ್ವಾರ್ (ಜೋಗಿ) ಅವರ ಮೂರು ಪುಸ್ತಕಗಳು ಭಾನುವಾರ ಬಿಡುಗಡೆಯಾಗಲಿವೆ.
ಈ ಸಮಾರಂಭವು ಭಾನುವಾರ (ಫೆ.25) ಬೆಂಗಳೂರು ಬಸವನಗುಡಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ಬೆಳಗ್ಗೆ 10:30ಕ್ಕೆ ನಡೆಯಲಿದೆ.
ನಿರ್ಗಮನ, ಸಾಲು ಸಾಲು, ಸರ್ಪಭ್ರಮೆ- ಅಂದು ಬಿಡುಗಡೆಯಾಗಲಿರುವ ಕೃತಿಗಳು. ಖ್ಯಾತ ವನ್ಯಜೀವಿ ತಜ್ಞ ಡಾ. ಕೆ. ಉಲ್ಲಾಸ ಕಾರಂತ, ಹಿರಿಯ ಲೇಖಕ ಗಜಾನನ ಶರ್ಮಾ ಮತ್ತು ಪತ್ರಕರ್ತ ಹರೀಶ್ ಕೇರ ಅವರು ಕೃತಿ ಪ್ರಸ್ತುತಿ ನಡೆಸಿಕೊಡಲಿದ್ದಾರೆ. ಲೇಖಕ ಜೋಗಿ ಹಾಗೂ ಎಂ.ಆರ್ ದತ್ತಾತ್ರಿ ಉಪಸ್ಥಿತರಿರುತ್ತಾರೆ.
ಜೋಗಿ ಅವರ ಕೃತಿಗಳು ಅಂಕಿತ, ಸಪ್ನ ಹಾಗೂ ನವಕರ್ನಾಟಕ ಪುಸ್ತಕ ಮಳಿಗೆಗಳಲ್ಲಿ ಆನ್‌ಲೈನ್ ಮೂಲಕವೂ ಲಭ್ಯವಿರುತ್ತವೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ