ಅಯೋಧ್ಯಾ ಬಾಲರಾಮನಿಗೆ ಇನ್ನು ನಿತ್ಯ ನಡೆಯಲಿದೆ ತೊಟ್ಟಿಲು ಸೇವೆ

Chandrashekhara Kulamarva
0

ಮಾಜಿ ಶಾಸಕ ರಘುಪತಿ ಭಟ್ಟರಿಂದ ಕಾಷ್ಠಶಿಲ್ಪದ ತೊಟ್ಟಿಲು ಸಮರ್ಪಣೆ | ರಾಜಸ್ಥಾನದಿಂದ ಹೊರಟ ತೊಟ್ಟಿಲು 



ಅಯೋಧ್ಯೆ: ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಗಳ ನೇತೃತ್ವದಲ್ಲಿ ಅಯೋಧ್ಯಾ ರಾಮನ ಸನ್ನಿಧಿಯಲ್ಲಿ ನಡೆಯುತ್ತಿರುವ ಮಂಡಲೋತ್ಸವದ ವೈಭವ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.


ಶ್ರೀಗಳ ಮಾರ್ಗದರ್ಶನದಂತೆ ಶ್ರೀಕಾಶೀ ಮಠಾಧೀಶರಾದ ಶ್ರೀ ಸಂಯಮೀಂದ್ರ ತೀರ್ಥ ಶ್ರೀಪಾದರು ರಜತ ಪಲ್ಲಕ್ಕಿಯನ್ನು ಅರ್ಪಿಸಲು ಸಿದ್ದರಾಗುತ್ತಿರುವಂತೆಯೇ ಇತ್ತ ಕಡೆ ಮಂಡಲೋತ್ಸವದಲ್ಲಿ ಸಂಘಟನಾತ್ಮಕವಾಗಿ ತೊಡಗಿಕೊಂಡಿರುವ ಉಡುಪಿಯ ಮಾಜಿ ಶಾಸಕ ಕೆ ರಘುಪತಿ ಭಟ್ಟರು ಶ್ರೀರಾಮನ ತೊಟ್ಟಿಲು ಸೇವೆಗೆ ಕಾಷ್ಠಶಿಲ್ಪದಲ್ಲಿ ನಿರ್ಮಿಸಲಾದ ತೊಟ್ಟಿಲನ್ನು ಅರ್ಪಿಸಲು ಉತ್ಸುಕರಾಗಿದ್ದಾರೆ. 


ರಾಜಸ್ಥಾನದಲ್ಲಿ ಬೀಟಿಮರದಿಂದ ನಿರ್ಮಿಸಲಾದ ಅತ್ಯಂತ ಸುಂದರ ಕಾಷ್ಠರಚನೆಗಳುಳ್ಳ ತೊಟ್ಟಿಲನ್ನು ಖರೀದಿಸಲಾಗಿದ್ದು ಇದೀಗ ಅಯೋಧ್ಯೆಯತ್ತ ಹೊರಟಿದೆ.


ಫೆ 6ರ ಸಂಜೆ ಅಯೋಧ್ಯೆ ತಲುಪಲಿದ್ದು 7ನೇ ತಾರೀಖು ಸಂಜೆಯ ಉತ್ಸವದಲ್ಲಿ ಶ್ರೀಗಳ ಮೂಲಕ ಇದರ ಅರ್ಪಣೆಯಾಗಲಿದ್ದು ನೂತನ ತೊಟ್ಟಿಲಲ್ಲಿ ಶ್ರೀ ಬಾಲರಾಮನಿಗೆ ತೊಟ್ಟಿಲು ಸೇವೆ ನಡೆಸಲಾಗುವುದು ಎಂದು ಭಟ್ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   .

Post a Comment

0 Comments
Post a Comment (0)
To Top