ಎನ್ ಎಸ್ ಪತ್ತಾರ್ ಇವರಿಂದ “ಸಬ್‌ಲೈಮ್ ಲಿರಿಕ್ಸ್” – ಚಿತ್ರಕಲಾ ಪ್ರದರ್ಶನ

Upayuktha
0


ಮಂಗಳೂರು: ಗ್ಯಾಲರಿ ಆರ್ಕಿಡ್  ಮಾರ್ಚ್ 1 ರಿಂದ ಮಾರ್ಚ್ 10, 2024 ರವರೆಗೆ ಚಿತ್ರಕಲಾವಿದ ಎನ್.ಎಸ್. ಪತ್ತಾರ್ ಇವರ “ಸಬ್‌ಲೈಮ್ ಲಿರಿಕ್ಸ್” ಪೇಂಟಿಂಗ್ಸ್ ಪ್ರದರ್ಶನ ಹಮ್ಮಿಕೊಂಡಿದೆ. 


ಈ ಪ್ರದರ್ಶನವು ಕಳೆದ ನಾಲ್ಕು ವರ್ಷಗಳಲ್ಲಿ ಅವರು ರಚಿಸಿದ 21 ಚಿತ್ರಕಲೆಗಳನ್ನು ಪ್ರದರ್ಶಿಸುತ್ತದೆ.


ಮಂಗಳೂರಿನ ಮಹಾಲಸ ಕಲಾ ಮಹಾವಿದ್ಯಾಲಯದ ಚಿತ್ರಕಲಾ ವಿಭಾಗದ ಮುಖ್ಯಸ್ಥರೂ ಆಗಿರುವ ಪ್ರತಿಷ್ಠಿತ ಕಲಾವಿದ ಎನ್.ಎಸ್. ಪತ್ತಾರ್, ಇವರು “ಸಬ್‌ಲೈಮ್ ಲಿರಿಕ್ಸ್” ಮೂಲಕ ತಮ್ಮ ಮೊದಲ ಏಕವ್ಯಕ್ತಿ ಪ್ರದರ್ಶನವನ್ನು ಪ್ರಸ್ತುತಪಡಿಸುತ್ತಿದ್ದಾರೆ.


ಉದ್ಘಾಟನಾ ಸಮಾರಂಭವು ಮಾರ್ಚ್ 1, 2024 ರಂದು ಸಂಜೆ 5 ಗಂಟೆಗೆ, ಗ್ಯಾಲರಿ ಆರ್ಕಿಡ್, ಹೇಮಾವತಿ ಕಟ್ಟಡ, ಬಲ್ಮಠ, ಮಂಗಳೂರು ಇಲ್ಲಿ ನಡೆಯಲಿದೆ. 


ಆರ್ಕಿಟೆಕ್ಟ್ ಗುಲ್ಶನ್ ರೋಯ್, ಪ್ರದರ್ಶನವನ್ನು ಉದ್ಘಾಟಿಸಲಿರುವರು. ಮಹಾಲಸಾ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಬಾಬುರಾವ್, ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ.


ಪ್ರದರ್ಶನದ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 10.30 ರಿಂದ ಸಂಜೆ 6ರ ವರೆಗೆ ಗ್ಯಾಲರಿ ತೆರೆದಿರುವುದೆಂದು ಗ್ಯಾಲರಿ ಆರ್ಕಿಡ್ ನಿರ್ದೇಶಕರಾದ ವಿಲಿಯಮ್ ಪಾಯ್ಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top