ಹೆಚ್ಗಿ ಹೊತ್ತ ಮಲಕೊಳಿಕ್ಕಾಂಗಗಿಲ್ಲ, ಹೆಚ್ಗಿ ಹೊತ್ತ ಕೂಡ್ಲಿಕ್ಕಾಂಗಗಿಲ್ಲ, ಹೆಚ್ಗಿ ಹೊತ್ತ ನಿಲ್ಲಿಕ್ಕಾಂಗಗಿಲ್ಲ, ಹೆಚ್ಗಿ ಹೊತ್ತ ನಡಿಲಿಕ್ಕಾಂಗಗಿಲ್ಲ, ಹೆಚ್ಗಿ ತಿನ್ಲಿಕ್ಕಾಂಗಗಿಲ್ಲ, ಹೆಚ್ಗಿ ಕುಡಿಲಿಕ್ಕಾಂಗಗಿಲ್ಲ ಹೆಚ್ಗಿ ಪಚನ ಆಗಂಗಿಲ್ಲ, ಶಕ್ತಿನೂ ಬರಂಗಿಲ್ಲ..; ಆದ್ರ ಜೀವನದ್ ಆಶಾ ಮಾತ್ರ ಕಡಿಮ್ಯಾಂಗಗಿಲ್ಲ...! ಸಾವು ಹತ್ತಿಲೆ ಬಂದಬಂದ್ಹಂಗ ಬದುಕೊ ಆಶಾನೂ, ಜೀವನದಲ್ಲಿ ಇಲ್ಲದ ಸ್ವಾರಸ್ಯಾನೂ ಹೆಚ್ಹೆಚ್ಗಿ ಕಾಣ್ಲಿಕ್ಕೆ ಹತ್ತದ...! ಹಿಂಗಾಗಿ ಒಳಒಳಗ ಯಾವಾಗ ಜೀವ ಹೋಗ್ತದೋ ಅನ್ನೋ ಜೀವದ ಭಯಾನೂ ಜಾಸ್ತಿ ಆಕ್ಕೋತ ಹೋಗ್ತದ. ಇದರಿಂದ ಸಣ್ಣ ಸಣ್ಣದಾಗಿ ಇಣಕೊ ಆರೋಗ್ಯದ ಸಮಸ್ಯಾಗಳ ಆತಂಕ-ಅಡಚಣಿಗಳೂ ರಾವಗನ್ನಡ್ಯಾಗ ನೋಡದ್ಹಂಗ ದೊಡ್ಡ ದೊಡ್ಡವಾಗಿ ಕಂಡ್ಹಂಗ ಆಗಿ ಇನ್ನೂ ತಳಮಳ ಜ್ಯಾಸ್ತ ಆದ್ಹಂಗ ಆಗ್ತದ...!
ಈ ಸಮಸ್ಯಾ ಪರಿಹಾರಕ್ಕ ಭಗವದ್ಗೀತಾ ಓದ್ರಿ, ಮನನ ಮಾಡ್ರಿ, ಅನುಷ್ಠಾನಕ್ಕ ತರ್ರಿ, ಆರಾಮ ಇರ್ರಿ...ಅಷ್ಟ...!
-ಕುರಾಜನ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ