ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಗರ್ಭಗುಡಿಯ ದಾರಂದಕ್ಕೆ ಬೆಳ್ಳಿಯ ಕವಚ ಸಮರ್ಪಣೆ: ಮುಳಿಯ ಜ್ಯುವೆಲ್ಸ್‌ನಿಂದ ತಯಾರಿ

Upayuktha
0

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಶ್ರೀ ದೇವರ ಪ್ರಧಾನ ಗರ್ಭಗುಡಿಯ ದಾರಂದಕ್ಕೆ ಬೆಳ್ಳಿಯ ಕವಚವನ್ನು ನವೀನ್ ಕುಮಾರ್ ಭಂಡಾರಿ ದಂಪತಿ ಮತ್ತು ಮನೆಯವರಿಂದ ಸಮರ್ಪಣೆ ಮಾಡಲಾಯಿತು.


ಈ ದಾರಂದಕ್ಕೆ ಬೆಳ್ಳಿಯ ಕವಚವನ್ನು ಹತ್ತೂರಿನಲ್ಲಿ ಅತ್ಯಂತ ಜನಪ್ರಿಯವಾಗಿರುವ ನಾಡಿನ ಹೆಸರಾಂತ ಚಿನ್ನಾಭರಣ ಸಂಸ್ಥೆ ಪುತ್ತೂರಿನ ಮುಳಿಯ ಜ್ಯುವೆಲ್ಸ್‌ನಲ್ಲಿ ತಯಾರಿಸಲಾಗಿತ್ತು. ದಾರಂದ ಕವಚಕ್ಕೆ ಸುಮಾರು 8 ಕೆ ಜಿ ಬೆಳ್ಳಿಯನ್ನು ಬಳಕೆ ಮಾಡಲಾಗಿದ್ದು, ಶ್ರೀ ಮಹಾಲಿಂಗೇಶ್ವರ ದೇವಳದ ಹಿಂದಿನ ಕಾರ್ಯನಿರ್ವಹಣಾಧಿಕಾರಿ ಮತ್ತು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಮತ್ತು ಮನೆಯವರು ಬೆಳ್ಳಿಯ ದಾರಂದ ಕವಚ ಸಮರ್ಪಣೆ ಮಾಡಿದರು. 



ದಾರಂದ ಕವಚ ಕೆಲಸ ನಿರ್ವಹಿಸಿದ ಪುತ್ತೂರಿನ ಹೆಸರಾಂತ ಮುಳಿಯ ಜ್ಯುವೆಲ್ಸ್‌ನ ಸಂಸ್ಥೆಯಿಂದ ಬೆಳಿಗ್ಗೆ ಮೆರವಣಿಗೆ ಮೂಲಕ ಬೆಳ್ಳಿಯ ದಾರಂದ ಕವಚವನ್ನು ದೇವಸ್ಥಾನಕ್ಕೆ ತರಲಾಯಿತು. ಬಳಿಕ ದೇವಳದ ಸತ್ಯಧರ್ಮ ನಡೆಯಲ್ಲಿಟ್ಟು ಸಮರ್ಪಣಾ ಪ್ರಾರ್ಥನೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾಣಿಲ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸದಸ್ಯರು ಮತ್ತು ಮಾಜಿ ಶಾಸಕ ಸಂಜೀವ ಮಠಂದೂರು ಸಹಿತ ಹಲವಾರು ಮಂದಿ ಭಕ್ತರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter



إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top